ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಳಿಗಾಲ ಆರಂಭವಾಗಿದ್ದು, ತ್ವಚೆಯಲ್ಲಿ ಬದಲಾವಣೆ ಆಗುತ್ತದೆ. ಚಳಿಗಾಲದಲ್ಲಿ ತ್ವಚೆ ಒಣಗುತ್ತದೆ ಹಾಗೂ ಬಿರಿಯುತ್ತದೆ. ಚಳಿಗೆ ತಕ್ಷಣ ನಮ್ಮ ತ್ವಚೆ ಒಣಗುತ್ತದೆ. ಮುಖ ಡ್ರೈ ಆಗುತ್ತದೆ. ತುಟಿ ಒಣಗಿ ಸಿಪ್ಪೆ ಸುಲಿಯುತ್ತದೆ. ಇದು ದಿನವೂ ಚಳಿಗಾಲ ಮುಗಿಯುವವರೆಗೆ ಇರುವ ಸಮಸ್ಯೆ ಆಗಿದೆ. ಈ ಸಮಯದಲ್ಲಿ ತುಟಿಗಳ ಕಾಳಜಿ ಮುಖ್ಯವಾಗಿರುತ್ತದೆ.

BREAKING NEWS : ಪ್ರಧಾನಿ ಗುಜರಾತ್ ರ್ಯಾಲಿ ವೇಳೆ ‘ಭದ್ರತಾ ಲೋಪ’ ; ಮೋದಿ ಬಳಿ ಸುಳಿದಾಡಿದ ‘ಡ್ರೋನ್’ |PM Modi security breach

ತುಟಿಗಳ ಆರೈಕೆಗೆ ಗ್ಲಿಸರಿನ್ ಬಳಕೆ

ಚಳಿಗಾಲದಲ್ಲಿ ಮುಖ ಮತ್ತು ದೇಹದ ಚರ್ಮವನ್ನು ಮೃದುವಾಗಿಸಲು ತುಂಬಾ ಜನರು ಗ್ಲಿಸರಿನ್ ಬಳಕೆ ಮಾಡುತ್ತಾರೆ. ಇದನ್ನು ತುಟಿಗಳ ರಕ್ಷಣೆಗೂ ಬಳಸಬಹುದು. ಇದು ತುಟಿಗಳಿಗೆ ಪೋಷಣೆ ನೀಡಿ, ಆರೋಗ್ಯಕರ ಮತ್ತು ಮೃದುವಾಗಿಸುತ್ತದೆ. ಗ್ಲಿಸರಿನ್ ಸತ್ತ ಚರ್ಮದ ಕೋಶಗಳನ್ನು ರಿಮೂವ್ ಮಾಡುತ್ತೆ.

ಗ್ಲಿಸರಿನ್ ಬಳಕೆ ಸುರಕ್ಷಿತ

ಗ್ಲಿಸರಿನ್ ಬಾಯೊಳಗೆ ಹೋಗುವುದು ಆರೋಗ್ಯಕ್ಕೆ ಹಾನಿಕರ. ಚಳಿಗಾಲದಲ್ಲಿ ತುಟಿಗಳು ಒಣಗಿ, ಸಿಪ್ಪೆ ಸುಲಿಯುತ್ತಿದ್ದರೆ ಗ್ಲಿಸರಿನ್ ತುಟಿಗಳನ್ನು ಹೈಡ್ರೀಕರಿಸುತ್ತದೆ. ಗ್ಲಿಸರಿನ್ ಒಣ, ಫ್ಲಾಕಿ ತುಟಿ, ರಕ್ತಸ್ರಾವ, ಒಡೆದ ಮತ್ತು ಕಪ್ಪು ತುಟಿಗಳ ಸಮಸ್ಯೆ ನಿವಾರಿಸುತ್ತದೆ.

ತುಟಿಗಳಿಗೆ ಗ್ಲಿಸರಿನ್ ಅನ್ವಯಿಸುವ ಪ್ರಯೋಜನಗಳು

ಚರ್ಮದ ಕಿರಿಕಿರಿ ನಿರ್ಮೂಲ

ತುಟಿಗಳ ಶುಷ್ಕತೆ ಚರ್ಮದ ಕಿರಿಕಿರಿ ಉಂಟು ಮಾಡುತ್ತದೆ. ಗ್ಲಿಸರಿನ್ ತುಟಿಗಳನ್ನು ಹೈಡ್ರೀಕರಿಸುತ್ತದೆ. ಮಾಲಿನ್ಯ ಅಥವಾ ಬಲವಾದ ಸೂರ್ಯನ ಬೆಳಕಿನಿಂದ ತುಟಿಗಳ ಚರ್ಮ ಸುಡುತ್ತಿದ್ದರೆ ಗ್ಲಿಸರಿನ್ ತುಟಿಗಳ ಮೇಲೆ ರಕ್ಷಣಾತ್ಮಕ ಪದರ ರೂಪಿಸುತ್ತದೆ.

ಡೆಡ್ ಸ್ಕಿನ್ ತೆಗೆದು ಹಾಕುತ್ತದೆ

ತುಟಿಗಳ ಮೇಲೆ ಡೆಡ್ ಸ್ಕಿನ್ ಸಂಗ್ರಹ ಸಮಸ್ಯೆ ಗ್ಲಿಸರಿನ್ ನಿವಾರಿಸುತ್ತದೆ. ತುಟಿಗಳನ್ನು ಹೈಡ್ರೀಕರಿಸಿ, ಮೃದುಗೊಳಿಸುತ್ತದೆ. ಪ್ರತಿದಿನ ತುಟಿಗಳಿಗೆ ಗ್ಲಿಸರಿನ್ ಹಚ್ಚಿದರೆ ಪೋಷಣೆ ನೀಡುತ್ತದೆ.

ಕಪ್ಪು ತುಟಿಗಳಿಗೆ ರಾಮಬಾಣ

ಕಪ್ಪು ತುಟಿ ಸಮಸ್ಯೆ ನಿವಾರಿಸಿ, ಗುಲಾಬಿ ತುಟಿ ಹೊಂದಲು ಗ್ಲಿಸರಿನ್ ಬಳಸಿ. ಇದರ ಬಳಕೆಯು ತುಟಿಗಳ ಕಲೆಗಳನ್ನು ತೆಗೆದು ಹಾಕುತ್ತದೆ.

ತುಟಿಗಳ ಮೇಕೆ ಗ್ಲಿಸರಿನ್ ಅನ್ನು ಹೇಗೆ ಬಳಸಬಹುದು

ತುಟಿಗಳ ಮೇಲೆ ಗ್ಲಿಸರಿನ್ ನ್ನು ನೇರವಾಗಿ ಅನ್ವಯಿಸಿ. ಒಳ್ಳೆಯ ಕಂಪನಿಯ ಗ್ಲಿಸರಿನ್ ಖರೀದಿಸಿ. ಹತ್ತಿ ಉಂಡೆಗಳನ್ನು ಗ್ಲಿಸರಿನ್‌ ನಲ್ಲಿ ಅದ್ದಿ ತುಟಿಗಳ ಮೇಲೆ ಅನ್ವಯಿಸಿ. ರಾತ್ರಿ ಮಲಗುವ ಮುನ್ನ ಅನ್ವಯಿಸಬಹುದು.

ನಿಂಬೆ ಜೊತೆ ಗ್ಲಿಸರಿನ್

ಒಂದು ಟೀಸ್ಪೂನ್ ನಿಂಬೆ ರಸದಲ್ಲಿ ಎರಡು ಪಿಂಚ್ ಗ್ಲಿಸರಿನ್ ಮಿಶ್ರಣ ಮಾಡಿ. ಪ್ರತಿ ರಾತ್ರಿ ಮಲಗುವ ಮುನ್ನ ತುಟಿಗೆ ಹಚ್ಚಿ. ಇದು ಒಡೆದ ತುಟಿಗಳನ್ನು ಗುಣಪಡಿಸುತ್ತದೆ. ಕಪ್ಪು ತುಟಿಗಳ ಬಣ್ಣ ಕಡಿಮೆ ಮಾಡುತ್ತದೆ.

ರೋಸ್ ವಾಟರ್ ಮತ್ತು ಗ್ಲಿಸರಿನ್

ಅರ್ಧ ಟೀಚಮಚ ಗ್ಲಿಸರಿನ್ ಮತ್ತು ಟೀ ಚಮಚ ರೋಸ್ ವಾಟರ್ ಮಿಶ್ರಣ ಮಾಡಿ ಹಚ್ಚಿರಿ.

BIG NEWS: ಎನ್ಐಎ ತನಿಖೆಗೆ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ವಹಿಸಲು ನಿರ್ಧಾರ – ಗೃಹ ಸಚಿವ ಅರಗ ಜ್ಞಾನೇಂದ್ರ

Share.
Exit mobile version