ಮುಂಬೈ: ಘಾಟ್ಕೋಪರ್ ಹೋರ್ಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಗೊ ಮೀಡಿಯಾ ಕಂಪನಿಯ ಮಾಲೀಕ ಭವೇಶ್ ಭಿಡೆ ಅವರನ್ನು ಮುಂಬೈ ಅಪರಾಧ ವಿಭಾಗ ಬಂಧಿಸಿದೆ. ಮುಂಬೈ ಪೊಲೀಸರ ಅಪರಾಧ ವಿಭಾಗವು ಪ್ರಮುಖ ಆರೋಪಿ ಭವೇಶ್ ನನ್ನು ಉದಯಪುರದಲ್ಲಿ ಬಂಧಿಸಿದ್ದು, ಆತನನ್ನು ಮುಂಬೈಗೆ ಕರೆತರುತ್ತಿದೆ ಎನ್ನಲಾಗಿದೆ.

ಅಂದ ಹಾಗೇ, ಅಕ್ರಮ ಹೋರ್ಡಿಂಗ್ಗಳನ್ನು ಸ್ಥಾಪಿಸಿದ್ದಕ್ಕಾಗಿ ಇಗೊ ಕಂಪನಿಯ ಮಾಲೀಕ ಭವೇಶ್ ಭಿಂಡೆ ಅವರಿಗೆ ಈ ಹಿಂದೆ ಹಲವಾರು ಬಾರಿ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲ, ಭಿಂಡೆ ವಿರುದ್ಧ ಅತ್ಯಾಚಾರ ಪ್ರಕರಣವನ್ನೂ ದಾಖಲಿಸಲಾಗಿತ್ತು ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಮುಲುಂಡ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕಿರುಕುಳ ಪ್ರಕರಣ ದಾಖಲಾಗಿತ್ತು. ಆದಾಗ್ಯೂ, ಭಿಂಡೆ ಅವರಿಗೆ ನಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಈಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯ ಪೆಟ್ರೋಲ್ ಪಂಪ್ ಬಳಿ ಹೋರ್ಡಿಂಗ್ 40 x 40 ಅಡಿ ಅಳತೆಯ ಬದಲು 120 x 120 ಅಳತೆ ಹೊಂದಿದೆ. ಘಾಟ್ಕೋಪರ್ ಹೋರ್ಡಿಂಗ್ ಕಾನೂನುಬಾಹಿರವಾಗಿದೆ ಎಂದು ಬಿಎಂಸಿ ಮುಖ್ಯಸ್ಥ ಭೂಷಣ್ ಗಗ್ರಾನಿ ಹೇಳಿದ್ದಾರೆ

Share.
Exit mobile version