ನವದೆಹಲಿ:ಕೇಂದ್ರ ಸಚಿವ ಸಂಪುಟದ ಖಾತೆಗಳ ಹಂಚಿಕೆಯ ಮರುದಿನ, ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಉಕ್ಕಿನ ಕಾರ್ಖಾನೆಗಳ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ನೇಮಕಗೊಂಡ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ, ಜೆಡಿಎಸ್ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದರು.
ಕುಮಾರಸ್ವಾಮಿ ಅವರಿಗೆ ಬಹಿರಂಗ ಪತ್ರ ಬರೆದಿರುವ ಜೈರಾಮ್ ರಮೇಶ್, ವೈಜಾಗ್, ಸೇಲಂ, ನಗರ್ನಾರ್, ವಿಶ್ವೇಶ್ವರಯ್ಯ ಮತ್ತು ದುರ್ಗಾಪುರ ಉಕ್ಕು ಸ್ಥಾವರಗಳನ್ನು ರಕ್ಷಿಸುತ್ತೀರಾ ಅಥವಾ ಏಕ್ ತಿಹಾಯಿ (ಮೂರನೇ ಒಂದು ಭಾಗ) ಪ್ರಧಾನಿಗೆ ಅವುಗಳನ್ನು ತಮ್ಮ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಮಾರಾಟ ಮಾಡಲು ಸಹಾಯ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಐದು ಉಕ್ಕು ಸ್ಥಾವರಗಳಲ್ಲಿ ದಕ್ಷಿಣ ಭಾರತದ ಮೂರು ಉಕ್ಕು ಸ್ಥಾವರಗಳು – ಆಂಧ್ರಪ್ರದೇಶದ ವೈಜಾಗ್ (ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್), ತಮಿಳುನಾಡಿನ ಸೇಲಂ ಉಕ್ಕು ಸ್ಥಾವರ ಮತ್ತು ಕರ್ನಾಟಕದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ ಸೇರಿವೆ.
ವೈಜಾಗ್ ಉಕ್ಕು ಸ್ಥಾವರ
ಸಾಮಾನ್ಯವಾಗಿ ವೈಜಾಗ್ ಉಕ್ಕು ಸ್ಥಾವರ ಎಂದು ಕರೆಯಲ್ಪಡುವ ಆರ್ಐಎನ್ಎಲ್ ಬಗ್ಗೆ ಮಾತನಾಡಿದ ರಮೇಶ್, ಉದ್ಯಮದ ಖಾಸಗೀಕರಣದ ವಿರುದ್ಧ 2021 ರ ಜನವರಿಯಲ್ಲಿ ನಡೆದ ವ್ಯಾಪಕ ಪ್ರತಿಭಟನೆಗಳನ್ನು ನೆನಪಿಸಿಕೊಂಡರು.
“ಒಂದು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಜೀವನೋಪಾಯಕ್ಕಾಗಿ ವೈಜಾಗ್ ಉಕ್ಕು ಸ್ಥಾವರವನ್ನು ಅವಲಂಬಿಸಿದ್ದಾರೆ. ಸರ್ಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯವು ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿದ್ದ ಉಕ್ಕು ಸ್ಥಾವರವನ್ನು ಹೆಚ್ಚುತ್ತಿರುವ ನಷ್ಟಕ್ಕೆ ತಳ್ಳುತ್ತಿದೆ ಎಂದು ಉಕ್ಕು ಸ್ಥಾವರದ ನೌಕರರು ವರದಿ ಮಾಡಿದ್ದಾರೆ.
ಹೊಸದಾಗಿ ನೇಮಕಗೊಂಡ ಸಚಿವರನ್ನು ಪ್ರಶ್ನಿಸಿದ ರಮೇಶ್, ಲಿಖಿತ ಹೇಳಿಕೆ ನೀಡುವಿರಾ ಎಂದು ಪ್ರಶ್ನಿಸಿದರು