ಶಿವಮೊಗ್ಗ: ಸಾಗರ ತಾಲ್ಲೂಕಿನ ವಿವಿಧ ಸರ್ಕಾರಿ ಇಲಾಖೆಯ ನಿರ್ದೇಶಕರು ನನ್ನ ಮೇಲೆ ನಂಬಿಕೆಯಿಟ್ಟು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಸಾಗರ ತಾಲ್ಲೂಕಿನ ಸರ್ಕಾರಿ ನೌಕರರ ಹಿತ ಕಾಯುವಂತ ಕೆಲಸ ಮಾಡಲಿದ್ದೇನೆ. ನೌಕರರ ಬೇಡಿಕೆ ಈಡೇರಿಸೋ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ನೂತನ ಅಧ್ಯಕ್ಷ ಸಂತೋಷ್ ಕುಮಾರ್.ಎನ್ ತಿಳಿಸಿದರು.
ಇಂದು ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಖಜಾಂಚಿ ಸ್ಥಾನಕ್ಕೆ ಸಹದೇವ್ ಎಸ್ ಬಡಿಗೇರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದಂತ ಅಧ್ಯಕ್ಷರು, ರಾಜ್ಯಪರಿಷತ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಇಂದಿನ ಚುನಾವಣೆಯಲ್ಲಿ 25 ಮತಗಳನ್ನು ಪಡೆದಂತ ಸಂತೋಷ್ ಕುಮಾರ್.ಎನ್ ಅವರು ಭರ್ಜರಿ ಗೆಲುವು ಸಾಧಿಸಿ, ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಪರಿಷತ್ ಸ್ಥಾನಕ್ಕೆ ದೇವೇಂದ್ರಪ್ಪ.ಕೆ, ನಾಗರಾಜ.ಕೆ ಹಾಗೂ ಮಂಜುನಾಥ ಎಂ.ಎಸ್ ಕಣದಲ್ಲಿದ್ದರು. ದೇವೇಂದ್ರಪ್ಪ – 24 ಮತಗಳನ್ನು, ನಾಗರಾಜ್ 7 ಮತ ಹಾಗೂ ಮಂಜುನಾಥ 2 ಮತಗಳನ್ನು ಪಡೆದರು. ಅತಿ ಹೆಚ್ಚು ಮತಗಳನ್ನು ಪಡೆದಂತ ದೇವೇಂದ್ರಪ್ಪ.ಕೆ ಅವರು ರಾಜ್ಯ ಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಈ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತ್ರ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್.ಎನ್ ಅವರು, ನನ್ನನ್ನು ಗೆಲ್ಲಿಸಿದಂತ ಎಲ್ಲಾ ನಿರ್ದೇಶಕರಿಗೆ, ಸಾಗರ ತಾಲ್ಲೂಕಿನ ಸರ್ಕಾರಿ ನೌಕರರಿಗೆ, ಅರಣ್ಯ ಇಲಾಖೆಯ ಅಧಿಕಾರಿ, ನೌಕರರಿಗೆ ಧನ್ಯವಾದಗಳನ್ನು ತಿಳಿಸಿದರು.
ಸಾಗರ ತಾಲ್ಲೂಕಿನ ಸರ್ಕಾರಿ ನೌಕರರ ಹಿತ ಕಾಪಾಡುವ ಕೆಲಸ ಮಾಡಲಿದ್ದೇನೆ. ಎನ್ ಪಿಎಸ್ ರದ್ದು, ಓಪಿಎಸ್ ಜಾರಿಗೂ ಒತ್ತಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ. ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಸರ್ಕಾರದ ಗಮನಕ್ಕೆ ತಂದು, ಈಡೇರಿಸೋದಕ್ಕೆ ಕ್ರಮವಹಿಸಲಿದ್ದೇನೆ ಎಂದರು.
34 ನಿರ್ದೇಶಕರನ್ನು ಆಯ್ಕೆ ಮಾಡಲಾಗಿತ್ತು. ಅವರೆಲ್ಲರಿಗೂ ನಾನು ಶುಭಾಶಯ ತಿಳಿಸುತ್ತೇನೆ. ಅರಣ್ಯ ಇಲಾಖೆಯ ನೌಕರರಾದ ನನ್ನನ್ನು ಎಲ್ಲಾ ನಿರ್ದೇಶಕರು ಆಯ್ಕೆ ಮಾಡಿದ್ದಾರೆ. ಚುನಾವಣೆ ಅತ್ಯಂತ ಪಾರದರ್ಶಕತೆಯ ಮೂಲಕ ನಡೆಸಲಾಗಿದೆ. ಈ ಸಂಘವನ್ನು ಬಲವಡಿಸುವ, ಸಮಾಜಮುಖಿಯಾಗಿಸುವ ಕೆಲಸ ಮಾಡಲಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಸಾಗರದ ಪ್ರಸಿದ್ಧ ಉದ್ಯಮಿ, ಆರ್ ಬಿ ಡಿ ಬಿಲ್ಡರ್ ಮಾಲೀಕ ಮಹೇಶ್ ಅವರು ಸಾಗರದ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಅಧ್ಯಕ್ಷರಾಗಿ ಆಯ್ಕೆಯಾದಂತ ಸಂತೋಷ್ ಕುಮಾರ್.ಎನ್ ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ ಆಯ್ಕೆಯಾದಂತ ದೇವೇಂದ್ರಪ್ಪ.ಕೆ ಅವರಿಗೆ ಸಿಹಿ ತಿನಿಸಿ, ಹಾರ ಹಾಕಿ ಸನ್ಮಾನಿಸಿ ಶುಭ ಕೋರಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BIG NEWS: ‘ಅಂಗಾಂಗ ದಾನ’ ನೋಂದಣಿಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ: ಬಳ್ಳಾರಿ ಜಿಲ್ಲೆ ದೇಶಕ್ಕೆ ಪ್ರಥಮ
ಬಾಕ್ಸಿಂಗ್ ದಂತಕಥೆ ‘ಮೈಕ್ ಟೈಸನ್’ ಸೋಲಿಸಿದ ‘ಜೇಕ್ ಪಾಲ್’ಗೆ ಗೆದ್ದ ಬಹುಮಾನವೆಷ್ಟು ಗೊತ್ತಾ.?
BREAKING: ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಆಯ್ಕೆ