ನವದೆಹಲಿ: ದೆಹಲಿಯಲ್ಲಿ ಕಾರು ಸ್ಪೋಟ ಮಾಡಿ 12 ಮಂದಿ ಸಾವಿಗೆ ಕಾರಣವಾಗಿರುವಂತ ಯಾರನ್ನೂ ಬಿಡುವುದಿಲ್ಲ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
Chaired review meetings on the Delhi car blast with the senior officials. Instructed them to hunt down each and every culprit behind this incident. Everyone involved in this act will face the full wrath of our agencies: Union Home Minister Amit Shah pic.twitter.com/HhaeYNVSHt
— ANI (@ANI) November 11, 2025
ಇಂದು ಭದ್ರತಾ ಪಡೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದಂತ ಅವರು, ಮಾತನಾಡಿದಂತ ಅವರು, ದೆಹಲಿ ಕೆಂಪುಕೋಟೆ ಬಳಿಯಲ್ಲಿ ಐ20 ಕಾರು ಸ್ಪೋಟ ಘಟನೆ ಸಂಬಂಧ ತನಿಖೆ ಮುಂದುವರೆದಿದೆ. ಸ್ಪೋಟಕದ ಕಾರಣಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತಿರುವುದಾಗಿ ತಿಳಿಸಿದರು.
ದೆಹಲಿ ಕಾರು ಸ್ಪೋಟಕದ ಆರೋಪಿಗಳ ಪತ್ತೆಗೆ ಕ್ರಮ ವಹಿಸುವಂತೆ ಸೂಚಿಸಿದಂತ ಅವರು, ಕಾರು ಸ್ಪೋಟ ಮಾಡಿದ ಯಾರನ್ನೂ ಬಿಡುವುದಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದರು.
ಇದರ ಮಧ್ಯೆ ಕಾರು ಸ್ಪೋಟದಿಂದಾಗಿ 12 ಮಂದಿ ಬಲಿಯಾದ ಘಟನೆ ಸಂಬಂಧ ನಾಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ಕೂಡ ನಡೆಯಲಿದೆ.
BREAKING: ದೆಹಲಿ ಕಾರು ಸ್ಪೋಟ ಪ್ರಕರಣ: ‘ರಾಷ್ಟ್ರೀಯ ತನಿಖಾ ದಳ’ದಿಂದ ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ
ರಾಜ್ಯದಲ್ಲಿ ಅತಿವೃಷ್ಟಿಯಿ೦ದ ಬೆಳೆ ಕಳೆದುಕೊ೦ಡ `ರೈತರ’ ಖಾತೆಗೆ ಹಣ ವರ್ಗಾವಣೆ : CM ಸಿದ್ದರಾಮಯ್ಯ ಘೋಷಣೆ







