ನವದೆಹಲಿ : ಜನವರಿ 22ರಂದು ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದ ನಂತ್ರ ರಾಮ್ ಲಲ್ಲಾಗೆ ನಮಸ್ಕರಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಬುಧವಾರ ಹೇಳಿದ್ದಾರೆ.
ಕೇಜ್ರಿವಾಲ್, “ನನಗೆ ಒಂದು ಪತ್ರ ಬಂತು, ಅದರಲ್ಲಿ ಕೆಲವರು ನನ್ನನ್ನು ಪ್ರತಿಷ್ಠಾಪನಾ ಸಮಾರಂಭಕ್ಕೆ ಔಪಚಾರಿಕವಾಗಿ ಆಹ್ವಾನಿಸಲು ನನ್ನ ಬಳಿಗೆ ಬರುತ್ತಾರೆ ಎಂದು ತಿಳಿಸಲಾಯಿತು. ಆದ್ರೆ, ಇಲ್ಲಿಯವರೆಗೆ ಯಾರೂ ಬಂದಿಲ್ಲ. ಆದಾಗ್ಯೂ, ಇದು ಮುಖ್ಯವಲ್ಲ. ಒಬ್ಬ ವ್ಯಕ್ತಿಗೆ ಮಾತ್ರ ಭೇಟಿ ನೀಡಲು ಅವಕಾಶವಿದೆ. ಆದ್ರೆ, ನಾನು ನನ್ನ ಕುಟುಂಬ ಸದಸ್ಯರೊಂದಿಗೆ ಅಲ್ಲಿಗೆ ಹೋಗಲು ಬಯಸುತ್ತೇನೆ. ಜನವರಿ 22ರ ನಂತರ ನಾನು ಖಂಡಿತವಾಗಿಯೂ ನನ್ನ ಹೆಂಡತಿ, ಮಕ್ಕಳು ಮತ್ತು ಪೋಷಕರೊಂದಿಗೆ ಭೇಟಿ ನೀಡುತ್ತೇನೆ” ಎಂದು ಅವರು ಹೇಳಿದರು.
ಜನವರಿ 22 ರಂದು ನಡೆಯುವ ‘ಪ್ರಾಣಪ್ರತಿಷ್ಠಾ’ ಸಮಾರಂಭದ ನಂತರ ಅಯೋಧ್ಯೆಗೆ (ದೆಹಲಿಯಿಂದ) ಹೆಚ್ಚಿನ ರೈಲುಗಳನ್ನು ಓಡಿಸಲು ಪ್ರಯತ್ನಿಸುವುದಾಗಿ ಕೇಜ್ರಿವಾಲ್ ಹೇಳಿದರು.
Rama Mandir: ಅಯೋಧ್ಯೆ- ಬೆಂಗಳೂರು ವಿಮಾನ ಆರಂಭ:ಟಿಕೆಟ್ ದರ ಎಷ್ಟು, ಇಲ್ಲಿದೆ ಮಾಹಿತಿ
Watch : ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಆಯೋಧ್ಯೆ ತಲುಪಿದ ‘ಜಲ ಕಲಶ ಯಾತ್ರೆ’
2024ನೇ ಸಾಲಿನ SSLC ಅಂತಿಮ ‘ಪರೀಕ್ಷೆ-1ರ’ ವೇಳಾಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ