ಬೆಂಗಳೂರು: ರೈತರ ಜಮೀನಿನಲ್ಲಿ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಹಾಕಿದ್ರೆ ಇಂಧನ ಇಲಾಖೆಯಿಂದ ಪರಿಹಾರ ಸಿಗಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಇದೇ ಕಾರಣಕ್ಕೆ ಅನೇಕ ರೈತರು ವಿದ್ಯುತ್ ಕಚೇರಿಗೂ ಭೇಟಿ ನೀಡಿ, ಪರಿಹಾರದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅರ್ಜಿ ಸಲ್ಲಿಸೋದು ಹೇಗೆ ಅಂತನೂ ವಿಚಾರಿಸುತ್ತಿದ್ದಾರೆ. ಹಾಗಾದ್ರೇ ಇದು ನಿಜವೇ? ವೈರಲ್ ಸುದ್ದಿಯ ಅಸಲಿ ಸತ್ಯ ಏನು ಅಂತ ಮುಂದೆ ಓದಿ.
ರಾಜ್ಯ ಸರ್ಕಾರದಿಂದ ರೈತರು ತಮ್ಮ ಜಮೀನುಗಳಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ ಫಾರ್ಮರ್ ಅಳವಡಿಸಿದ್ದರೇ, ಅಂತಹ ರೈತರಿಗೆ ದಿನಕ್ಕೆ ರೂ.50ರಂತೆ ಪರಿಹಾರ ನೀಡಲಿದೆ. ಅಲ್ಲದೇ ಗೃಹ ಬಳಕೆದಾರರು ಪ್ರತಿನಿತ್ಯ 2000 ದಿಂದ 5000 ಯೂನಿಟ್ ವಿದ್ಯುತ್ ಬಳಸಿಕೊಳ್ಳಬಹುದು. ಅದಕ್ಕೂ ರಾಜ್ಯ ಸರ್ಕಾರ 5000 ರೂ ಪರಿಹಾರ ಧನ ನೀಡಲಿದೆ ಎನ್ನುವಂತ ಸುದ್ದಿ ವೈರಲ್ ಆಗಿತ್ತು.
ಈ ಸ್ಪಷ್ಟನೆ ಕೊಟ್ಟ ಬೆಸ್ಕಾಂ
ಈ ಬಗ್ಗೆ ಸುದ್ದಿಯ ಸತ್ಯಾಸತ್ಯ ಪರಿಶೀಲನೆಗೆ ಇಳಿದಾಗ ಬೆಸ್ಕಾಂ ಸ್ಪಷ್ಟನೆ ನೀಡಿದೆ. ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಬಗ್ಗೆ ಹರಿದಾಡುತ್ತಿರುವ ಪರಿಹಾರದ ಸುದ್ದಿ ಸುಳ್ಳು. 5000 ಪರಿಹಾರ ಧ ನೀಡಲಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಅಂತ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಸ್ಪಷ್ಟ ಪಡಿಸಿದೆ.
ಗ್ರಾಹಕರೇ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಹಿಸಿ!! ಸಾಮಾಜಿಕ ಮಾಧ್ಯಮಗಳಲ್ಲಿ “ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಅಳವಡಿಸಿಕೊಂಡಿದ್ದರೆ ಸರ್ಕಾರ ದಿನಕ್ಕೆ 50 ರೂ. ಪರಿಹಾರ ನೀಡಲಿದೆ ಹಾಗೂ ಗೃಹಬಳಕೆದಾರರು ಪ್ರತಿನಿತ್ಯ 2000 – 5000 ಯೂನಿಟ್ ವಿದ್ಯುತ್ ಬಳಸಿಕೊಳ್ಳಬಹುದು. ಅದಕ್ಕೆ ಸರ್ಕಾರ ₹5000 ಪರಿಹಾರ ಧನ ನೀಡಲಿದೆ” ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು ಅಂತ ತಿಳಿಸಿದೆ.
ರೈತರನ್ನು ತಪ್ಪು ದಾರಿಗೆ ಎಳೆಯುವ ದುರುದ್ದೇಶದಿಂದ ಕೂಡಿದೆ. ಇಂತಹ ಯಾವುದೇ ಯೋಜನೆಯನ್ನು ರಾಜ್ಯ ಸರಕಾರ ಅಥವಾ ಇಂಧನ ಇಲಾಖೆ, ಕೆ.ಪಿ.ಟಿ.ಸಿ.ಎಲ್ ಅಥವಾ ಬೆಸ್ಕಾಂ ಸೇರಿದಂತೆ ಯಾವುದೇ ಎಸ್ಕಾಂಗಳು ಈ ರೀತಿಯ ಪ್ರಕಟಣೆ ಹೊರಡಿಸಿರುವುದಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಮಾಹಿತಿಯನ್ನು ಕಡೆಗಣಿಸಬೇಕಾಗಿ ವಿನಂತಿ. ಇಂತಹ ಗಾಳಿಸುದ್ದಿಗಳನ್ನು ನಂಬದಿರಿ ಹಾಗೂ ಯಾವುದೇ ಗೊಂದಲಗಳಿದ್ದಲ್ಲಿ, ನಮ್ಮ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ಎಂಬುದಾಗಿ ಮಾಹಿತಿ ಹಂಚಿಕೊಂಡಿದೆ.
ಗ್ರಾಹಕರೇ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಹಿಸಿ!!
ಸಾಮಾಜಿಕ ಮಾಧ್ಯಮಗಳಲ್ಲಿ "ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಅಳವಡಿಸಿಕೊಂಡಿದ್ದರೆ ಸರ್ಕಾರ ದಿನಕ್ಕೆ 50 ರೂ. ಪರಿಹಾರ ನೀಡಲಿದೆ ಹಾಗೂ ಗೃಹಬಳಕೆದಾರರು ಪ್ರತಿನಿತ್ಯ 2000 – 5000 ಯೂನಿಟ್ ವಿದ್ಯುತ್ ಬಳಸಿಕೊಳ್ಳಬಹುದು. ಅದಕ್ಕೆ ಸರ್ಕಾರ ₹5000 ಪರಿಹಾರ…— Namma BESCOM | ನಮ್ಮ ಬೆಸ್ಕಾಂ (@NammaBESCOM) June 19, 2024
BREAKING : ಬಂಧನವಾಗಿ 9 ದಿನಗಳ ಬಳಿಕ ದರ್ಶನ್ ನೋಡಲು ಪೊಲೀಸ್ ಠಾಣೆಗೆ ಬಂದ ಪತ್ನಿ ವಿಜಯಲಕ್ಷ್ಮಿ| Vijayalakshmi
BREAKING: ಪತಿ ಭೇಟಿಗಾಗಿ ಪೊಲೀಸ್ ಠಾಣೆಗೆ ಆಗಮಿಸಿದ ವಿಜಯ ಲಕ್ಷ್ಮಿ ದರ್ಶನ್..!