ಮಂಡ್ಯ : ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಫೈಟ್ ಜೋರಾಗಿದೆ. ಈ ನಡುವೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ವಿಚಾರಕ್ಕೆ ಬಿಜೆಪಿಯವರು ಗಿಣಿ ಶಾಸ್ತ್ರ ಕೇಳಿ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದರು. ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಗಿಣಿ ಶಾಸ್ತ್ರ ಕೇಳಿ ಡಿಸಿಎಂಗೆ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರಾ? ಇಲ್ವೋ? ಎಂದು ಗಿಳಿ ಶಾಸ್ತ್ರ ಕೇಳಿದ್ದಾರೆ. ಈ ವೇಳೆ ಗಿಳಿ ಚೊಂಬು ಇರುವ ಕಾರ್ಡ್ ತೆಗೆದಿದೆ. ಡಿ.ಕೆ.ಶಿವಕುಮಾರ್ ಸಿಎಂ ಆಗಲ್ಲ, ಅವರ ಕೈಗೆ ಚೊಂಬು ಎಂದು ಬಿಜೆಪಿ ಕಾರ್ಯಕರ್ತರು ಲೇವಡಿ ಮಾಡಿದ್ದಾರೆ.
ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿದರೆ ಜನರಿಗೆ ಒಳ್ಳೆಯದಾಗುತ್ತಾ ಎಂದು ಶಾಸ್ತ್ರ ಕೇಳಿದ್ದಾರೆ. ಈ ವೇಳೆ ಹೂ ಇರುವ ಕಾರ್ಡ್‌ನ್ನು ಗಿಣಿ ತೆಗೆದಿದೆ. ಸಿದ್ದರಾಮಯ್ಯ ಸಿಎಂ ಆಗಿದ್ರೆ ಜನರ ಕಿವಿಗೆ ಹೂ ಗ್ಯಾರಂಟಿ ಎಂದು ಬಿಜೆಪಿ ಕಾರ್ಯಕರ್ತರು ವಿಡಂಬನೆ ಮಾಡಿದ್ದಾರೆ.








