ವಿಜಯಪುರ : ವಿಜಯಪುರ ಜಿಲ್ಲೆಯ ಅಕ್ಕಮಹಾದೇವಿ ನಗರದಲ್ಲಿ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಹತ್ಯೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗಿದ್ದಕ್ಕೆ ಆತನನ್ನೇ ಕೊಲೆ ಮಾಡಲು ಪತ್ನಿ ಮುಹೂರ್ತ ಇಟ್ಟಿದ್ದು, ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಪತಿ ಬೀರಪ್ಪನನ್ನು ಕೊಲೆಗೈಯ್ಯಲು ಪತ್ನಿ ಸುನಂದಾ ಯತ್ನಿಸಿದ್ದಾಳೆ. ಸುನಂದಾ, ಸಿದ್ದಪ್ಪ ಕ್ಯಾತಕೇರಿ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಗಿ ಬೀರಪ್ಪ ಆರೋಪಿಸಿದ್ದು, ಸೆ.1ರಂದು ರಾತ್ರಿ ಸಿದ್ದಪ್ಪ ಮನೆಗೆ ನುಗ್ಗಿದ್ದು, ತನ್ನ ಕತ್ತು ಹಿಸುಕಿ, ಮರ್ಮಾಂಗಕ್ಕೆ ಒದ್ದು ಮಾರಾಣಂತಿಕವಾಗಿ ಹಲ್ಲೆ ನಡೆಸಿದ್ದಾನೆ ಪತ್ನಿ ಹಾಗೂ ಆತನ ಗೆಳೆಯ ಸೇರಿ ತನ್ನನ್ನು ಹತ್ಯೆ ಮಾಡಲು ಯತ್ನಿಸಿದ್ದಾಗಿ ಬೀರಪ್ಪ ಆರೋಪಿಸಿದ್ದು, ಗಾಯಾಳು ಬೀರಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.