ಧಾರವಾಡ: ತವರು ಮನೆಗೆ ಹೋಗಿದ್ದಕ್ಕೆ ಸಿಟ್ಟಾದಂತ ಪತಿಯೊಬ್ಬ, ಆಕೆಯ ಊರಿಗೆ ತೆರಳಿ ಚಾಕುವಿನಿಂದ ಹಲ್ಲೆ ಮಾಡಿರುವಂತ ಘಟನೆ ಧಾರವಾಡದ ಗರಗದಲ್ಲಿ ನಡೆದಿದೆ.
ಧಾರವಾಡದ ಬನಶ್ರೀ ನಗರದಲ್ಲಿ ರೂಪ ಹಾಗೂ ಬಸವರಾಜ ಅವ್ವಣ್ಣನವರ್ ವಾಸವಿದ್ದರು. ಪತ್ನಿಯ ಬಗ್ಗೆ ಸದಾ ಅನುಮಾನಗೊಳ್ಳುತ್ತಿದ್ದರಿಂದ ಮನೆಯನ್ನು ಬಿಟ್ಟು ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ತವರು ಮನೆಗೆ ಪತ್ನಿ ರೂಪಾ ತೆರಳಿದ್ದರು.
ಒಂದು ವಾರದಿಂದ ರೂಪ ತನ್ನ ತವರು ಮನೆಯಲ್ಲೇ ಇದ್ದಿದ್ದರಿಂದ ಸಿಟ್ಟಾದಂತ ಪತಿ ಬಸವರಾಜ ಇಂದು ಅವರ ತವರು ಮನೆಯಾದಂತ ಗರಗಕ್ಕೆ ತೆರಳಿದ್ದಾನೆ.
ಪತ್ನಿ ರೂಪಾ ಜೊತೆಗೆ ಜಗಳಕ್ಕೆ ಇಳಿದಂತ ಜಗಳ ತೀವ್ರಗೊಂಡ ವೇಳೆಯಲ್ಲಿ ಪತ್ನಿಗೆ ಜಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದನ್ನು ಬಿಡಿಸೋದಕ್ಕೆ ಹೋದಂತ ಅತ್ತೆ ಯಲ್ಲವಮ್ಮ ಎಂಬುವರ ಮೇಲೂ ಹಲ್ಲೆ ಮಾಡಿದ್ದಾರೆ.
ಬಸವರಾಜ್ ಚಾಕುವಿನಿಂದ ಮಾಡಿದಂತ ಹಲ್ಲೆಯಿಂದ ರೂಪಾ, ಯಲ್ಲವ್ವ ಗಾಯಗೊಂಡಿದ್ದಾರೆ. ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಧಾರವಾಡದ ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಕುವಿನಿಂದ ಹಲ್ಲೆ ಮಾಡಿದಂತ ಬಸವರಾಜನನ್ನು ಬಂಧಿಸಲಾಗಿದೆ.
BREAKING: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಡಿಸಿಎಂ ಡಿಕೆಶಿ, ಪತ್ನಿ ಉಷಾ ಪುಣ್ಯಸ್ನಾನ
BIG NEWS: ಧಾರವಾಡ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಪೋಕ್ಸೋ ಕೇಸ್ ಆರೋಪಿಯಿಂದ ಹೈಡ್ರಾಮಾ: ಹಿಡಿದಿದ್ದೇಗೆ ಗೊತ್ತಾ?