ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಬಿಸಿ ಬಿಸಿ ಕಾರ್ನ್‌ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕಾರ್ನ್‌ ಗಾಡಿ ಕಾಣ್ತು ಅಂದರೆ ಸಾಕು ಮಸಾಲಾ, ಸ್ವೀಟ್‌ ಕಾರ್ನ್‌ ತಿನ್ನಲೇಬೇಕು. ಅದು ಏನೋ ಒಂಥರಾ ಸಮಾಧಾನ. ಅದರಲ್ಲೂ ಜೋಳವನ್ನ ಒಲೆಯಲ್ಲಿ ಸುಟ್ಟುಕೊಂಡು ತಿನ್ನೋ ಮಜಾನೇ ಬೇರೆ ಇರುತ್ತದೆ.

BREAKING NEWS: ಗೋಲಿಬಾರ್ ಪ್ರಕರಣ: ಗ್ಯಾಂಗ್‌ ಸ್ಟಾರ್‌ ಲಾರೆನ್ಸ್ ಬಿಷ್ಣೋಯ್ ಕಸ್ಟಡಿ ಅವಧಿ ವಿಸ್ತರಣೆ

 

ಆದರೆ ಮಳೆಗಾಲದಲ್ಲಿ ಜೋಳ ತಿನ್ನದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಂತೆ. ಹೀಗಾಗಿ ಪ್ರತೀ ಬಾರಿ ಆಹಾರ ಸೇವನೆ ಮಾಡುವಾಗ ಆರೋಗ್ಯಕ್ಕೆ ಧಕ್ಕೆಯಾಗದಂತೆ ಸೇವನೆ ಮಾಡಬೇಕು. ಆದಷ್ಟು ಬೀದಿ ಬದಿ ಆಹಾರಗಳಿಂದ ದೂರವಿರುವುದು ಒಳ್ಳೆಯದು. ಜೋಳ ನಿಮ್ಮಿಷ್ಟದ ತಿಂಡಿಯಾಗಿದ್ದರೆ ಮನೆಯಲ್ಲೇ ತಯಾರಿಸಿ ತಿನ್ನಿ ಅಥವಾ ತಾಜಾ ಜೋಳವನ್ನು ಮಾತ್ರ ಖರೀದಿಸಿ ತಿನ್ನಿ. ಆದರೆ ಜೋಳ ತಿಂದ ತಕ್ಷಣ ನೀರನ್ನು ಸೇವಿಸಬಾರದು ಯಾಕೆ ಅನ್ನೋದು ತಿಳಿದುಕೊಳ್ಳೊಣ
* ಜೋಳ ತಿನ್ನದು ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಆಗುತ್ತದೆ.
ಜೋಳ ಕಾರ್ಬೋಹೈಡ್ರೇಟ್‌ ಹೊಂದಿರುತ್ತದೆ. ಗ್ಯಾಸ್ಟ್ರಿಕ್‌ ಮತ್ತು ತೀವ್ರ ಹೊಟ್ಟೆ ನೋವಿಗೆ ಕಾರಣವಾಗಬಹುದು.
* ಇನ್ನು ಜೋಳ ತಿಂದ ನಂತರ ಅರ್ಧಗಂಟೆ ಅಥವಾ 45 ನಿಮಿಷ ಬಿಟ್ಟು ನೀರನ್ನು ಕುಡಿಯಬೇಕು.
*ಜೋಳವನ್ನು ತುಂಬಾ ದಿನ ಇಟ್ಟುಕೊಂಡು ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ಕುತ್ತು ತರುತ್ತದೆ.
*ಜೋಳವನ್ನು ತಿನ್ನುವುದಾದರೂ ನಿಂಬೆ ರಸ ಮತ್ತು ಕೊಂಚ ಮೆಣಸಿನ ಪುಡಿ ಸೇರಿಸಿ ತಿನ್ನಿ. ಇದರಿಂದ ರುಚಿಯೂ ಅದ್ಭುತವಾಗಿರುತ್ತದೆ. ಜೊತೆಗೆ ಮಸಾಲೆ ಮತ್ತು ನಿಂಬೆ ರಸದಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.

Share.
Exit mobile version