ನವದೆಹಲಿ: ಕಾಂಗ್ರೆಸ್ನ ಮಾಜಿ ರಾಷ್ಟ್ರೀಯ ಮಾಧ್ಯಮ ಸಂಯೋಜಕಿ ರಾಧಿಕಾ ಖೇರಾ ಮಂಗಳವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು. ಬಿಜೆಪಿ ಸೇರುವ ಮುನ್ನ ರಾಧಿಕಾ ಖೇರಾ ಅವರು ಛತ್ತೀಸ್ ಗಢ ಕಾಂಗ್ರೆಸ್ ಮಾಧ್ಯಮ ಅಧ್ಯಕ್ಷ ಸುಶೀಲ್ ಆನಂದ್ ಶುಕ್ಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ, ಖೇರಾ ಅವರು ಕಾಂಗ್ರೆಸ್ನ ಛತ್ತೀಸ್ಗಢ ಕಚೇರಿಯಲ್ಲಿ ಅನುಭವಿಸಿದ ನಿಂದನೆಯ ಬಗ್ಗೆ ಮತ್ತು ಭೂಪೇಶ್ ಬಘೇಲ್, ಸಚಿನ್ ಪೈಲಟ್ ಮತ್ತು ಜೈರಾಮ್ ರಮೇಶ್ ಅವರಂತಹ ನಾಯಕರು ಪದೇ ಪದೇ ಕರೆ ಮಾಡಿದರೂ ತನ್ನ ರಕ್ಷಣೆಗೆ ಬರಲಿಲ್ಲ ಎಂಬುದರ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

ಏಪ್ರಿಲ್ 31 ರಂದು ನಿಗದಿಯಾಗಿರುವ ಹಿರಿಯ ನಾಯಕ ಪವನ್ ಖೇರಾ ಅವರ ಭೇಟಿಯ ಬಗ್ಗೆ ಏಪ್ರಿಲ್ 30 ರಂದು ಪಕ್ಷದ ಕಚೇರಿಯಲ್ಲಿ ಖೇರಾ ಮತ್ತು ಸುಶೀಲ್ ಆನಂದ್ ಶುಕ್ಲಾ ನಡುವೆ ವಾಗ್ವಾದ ನಡೆಯಿತು. ಛತ್ತೀಸ್ ಗಢದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ನಡೆದಾಗ ಸುಶೀಲ್ ಆನಂದ್ ಶುಕ್ಲಾ ಅವರು ತಮಗೆ ಮದ್ಯ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ.

Share.
Exit mobile version