ಕೊಪ್ಪಳ: ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ವಿಚಾರ ಒಂದೆಡೆಯಾದರೇ, ಲಿಂಗಾಯತ ಕೋಟಾದಲ್ಲಿ ನಾನ್ಯಾಕೆ ಸಿಎಂ ಆಗಬಾರದು ಎಂಬುದಾಗಿ ಶಾಸಕ ಬಸವರಾಜ ರಾಯರೆಡ್ಡಿ ಧ್ವನಿ ಎತ್ತಿದ್ದಾರೆ.
ಕೊಪ್ಪಳದ ಯಲಬುರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನ್ಯಾಕೆ ಸಿಎಂ ಆಗಬಾರದು? ಆದರೇ ಅದನ್ನ ಹೇಳಲು ಆಗಲ್ಲ. ಈಗ ಸಿದ್ಧರಾಮಯ್ಯ ಸಿಎಂ ಆಗಿದ್ದಾರೆ. ಸಿದ್ಧರಾಮಯ್ಯ ಬಜೆಟ್ ಸಿದ್ದತೆ ಮಾಡಲು ಸೂಚಿಸಿದ್ದಾರೆ. ಪಕ್ಷದಲ್ಲಿ ಸಿಎಂ ಆಗುವಂತ ನಾಯಕರು ಬಹಳ ಇದ್ದಾರೆ ಎಂದರು.
ನನ್ನ ಪ್ರಕಾರ ಅಧಿಕಾರ ಹಂಚಿಕೆ ಚರ್ಚೆಯೇ ಅರ್ಥಹೀನ. ಸಿದ್ಧರಾಮಯ್ಯ ಐದು ವರ್ಷ ಇರ್ತಾರೆ. ಸಿಎಲ್ ಪಿ ಸಭೆಯಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಯಾರೂ ಹೇಳಿಲ್ಲ. ನಮಗೆ ಆವಾಗಲೇ ಹೇಳಬೇಕಿತ್ತಲ್ವ ಎಂದು ಪ್ರಶ್ನಿಸಿದರು.
ಒಬ್ಬ ಮುಖ್ಯಮಂತ್ರಿಯನ್ನು ಸಮ್ಮ ಸುಮ್ಮನೆ ತೆಗೆಯೋದಕ್ಕೆ ಆಗೋದಿಲ್ಲ. ಸಿಎಂ ತೆಗೆಯಬೇಕು ಅಂದ್ರೆ ಭ್ರಷ್ಚಾಚಾರ ಆರೋಪ ಇರಬೇಕು. ಇಲ್ಲವೇ ಸಿಎಂ ಜನ ವಿರೋಧಿ ಕೆಲಸವನ್ನು ಮಾಡಿರಬೇಕು. ಡಿಸಿಎಂ ಡಿ.ಕೆ ಎಲ್ಲೂ ಕೂಡ ಸಿಎಂ ಆಗುತ್ತೇನೆ ಅಂದಿಲ್ಲ. ಡಿಕೆ ಅಧ್ಯಕ್ಷರು, ಹೀಗಾಗಿ ಅವರ ಪರ ಬ್ಯಾಟ್ ಮಾಡ್ತಾರೆ ಎಂದರು.
BREAKING: ಕೊಡಗಿನಲ್ಲಿ ಪಟ್ ಬಾಲ್ ಸೆಮಿಫೈನಲ್ ಪಂದ್ಯದ ವೇಳೆ ಮಾರಾಮಾರಿ
Health Tips: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ಬಳಸುವುದು ಸುರಕ್ಷಿತವೇ ?








