ಕಲಬುರಗಿ : ಬಿಡಿಎ ವಿಷಯದಲ್ಲಿ ಬಿ.ಎಸ್.ವೈ ಪ್ರಾಸಿಕ್ಯೂಶನ್‍ಗೆ ಕೇಳಿದ್ದೀರಿ. ನಿನ್ನೆ ಸಂಪುಟದಲ್ಲಿ ತೀರ್ಮಾನ ಮಾಡಿದ್ದೀರಿ. ಈ ಕೇಸು ಖುಲಾಸೆ ಆಗಿದೆ. ಆದರೂ ನೀವೇನು ಮಾಡಲು ಹೊರಟಿದ್ದೀರಿ? ಇದು ಬಿಜೆಪಿ ನಾಯಕರ ವಿರುದ್ಧದ ಷಡ್ಯಂತ್ರ ಮತ್ತು ಹಗೆತನದ ರಾಜಕೀಯ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಆಕ್ಷೇಪಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸರಕಾರದ ಅಬಕಾರಿ ಸಚಿವರ ವಿರುದ್ಧ ಆರೋಪಗಳಿವೆ. ವಿಡಿಯೋಗಳು, ಆಡಿಯೋಗಳೂ ಬಂದಿವೆ. ನೀವೇನು ಮಾಡಿದ್ದೀರಿ? ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ಸಂಘಟನೆಗಳು 700 ಕೋಟಿ ಲಂಚ ಸಂಗ್ರಹ ಸಂಬಂಧ ಸಚಿವ ತಿಮ್ಮಾಪುರ ಅವರ ವಿರುದ್ಧ ಆಪಾದನೆ ಮಾಡಿವೆ. 700 ಕೋಟಿ ಲಂಚದ ಹಗರಣ ಇದ್ದರೂ ಕೂಡ ಅವರನ್ನು ರಕ್ಷಿಸುತ್ತೀರಿ. ಅಮಾನತಾದ ಅಧಿಕಾರಿಗಳು ಯಾರ ಏಜೆಂಟರು ಎಂದು ತಿಳಿಸಲು ಆಗ್ರಹಿಸಿದರು.
ಅವರು ಸಚಿವರ ಏಜೆಂಟರೇ? ಅಥವಾ ಮುಖ್ಯಮಂತ್ರಿಗಳ ಏಜೆಂಟರಾಗಿದ್ದರೇ? ಅವರ ತಲೆದಂಡ ಮಾತ್ರ ಯಾಕೆ? ಸಚಿವರ ತಲೆದಂಡ ಯಾಕಾಗಬಾರದು ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಅವರನ್ನು ಸರಕಾರ ಯಾಕೆ ರಕ್ಷಣೆ ಮಾಡುತ್ತಿದೆ ಎಂದು ತೇಲ್ಕೂರ ಪ್ರಶ್ನಿಸಿದರು.
ಮುಡಾ ಹಗರಣ ನಡೆದಿದೆ. ನಿಮ್ಮ ಮೇಲೆ ಎಫ್‍ಐಆರ್ ಆಗಿದೆ; ತನಿಖೆ ನಡೆಯುತ್ತಿದೆ. ಆದರೂ ಏನೂ ನಡೆದಿಲ್ಲ ಎಂಬಂತೆ ನೀವಿದ್ದೀರಿ. ನೀವು ರಾಜೀನಾಮೆ ಕೊಟ್ಟಿಲ್ಲ; ಬೇರೆಯವರನ್ನು ಹೇಗೆ ಬಂಧಿಸಲು ನೋಡುತ್ತೀರಿ? ಎಫ್‍ಐಆರ್ ಆದೊಡನೆ ಬಂಧಿಸುತ್ತೀರಿ; ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಹಾಕುತ್ತೀರಲ್ಲವೇ? ನಿಮಗೊಂದು ನ್ಯಾಯ, ಇತರರಿಗೆ ಬೇರೆ ನ್ಯಾಯ ಇದೆಯೇ? ನೀವ್ಯಾಕೆ ರಾಜೀನಾಮೆ ಕೊಟ್ಟಿಲ್ಲ? ಕೂಡಲೇ ರಾಜೀನಾಮೆ ಕೊಡಿ. ಯಾಕೆ ಸುಮ್ಮನಿದ್ದೀರಿ ಎಂದು ಮುಖ್ಯಮಂತ್ರಿಗಳನ್ನು ತೇಲ್ಕೂರ ಪ್ರಶ್ನಿಸಿದರು.
ದಿನೇಶ್ ಗುಂಡೂರಾವ್ ವಜಾ ಮಾಡಿ
ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದೆ. ದಿನೇಶ್ ಗುಂಡೂರಾವ್ ಅವರು ಆರೋಗ್ಯ ಸಚಿವರಾಗಲು ಯೋಗ್ಯರೇ? ದನಕರುಗಳಿಗೆ ಕೊಡುವ ಔಷಧಿಗಳು ಆಸ್ಪತ್ರೆಗೆ ಸರಬರಾಜಾದ ಬಗ್ಗೆ . ಅದು ಮುದ್ರಣದ ತಪ್ಪು ಎಂದಿದ್ದರು. ಬಳಿಕ ವರದಿ ಬಂದಾಗ ಅದಾಗಿದ್ದು ನಿಜ; ಯಾದಗಿರಿಯಲ್ಲಿ ವೆಟರ್ನರಿ ಔಷಧಿ ಆಸ್ಪತ್ರೆಗೆ ಸರಬರಾಜಾಗಿದೆ. ಬಾಣಂತಿಯರಿಗೆ ಕೊಟ್ಟ ಔಷಧಿ ಕಳಪೆ ಆಗಿದ್ದುದಲ್ಲದೇ, ಕೊಟ್ಟ ದ್ರಾವಣಗಳು ಕಳಪೆ ಎಂದು ವರದಿ ಬರುತ್ತಿದೆ. ಹೀಗಿದ್ದರೂ ಅವರನ್ನು ಬದಲಿಸಿಲ್ಲ; ಇದು ಜೀವಗಳ ಜೊತೆ ಆಟ. ದಿನೇಶ್ ಗುಂಡೂರಾವ್ ಅವರನ್ನು ತಕ್ಷಣ ವಜಾ ಮಾಡಬೇಕೆಂದು ತೇಲ್ಕೂರ ಆಗ್ರಹಿಸಿದರು.
ಒಂದು ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನಕ್ಕೆ ಮುಖ್ಯಮಂತ್ರಿಗಳು ಗೌರವಾನ್ವಿತ ರಾಜ್ಯಪಾಲರಿಗೆ ಕೊಕ್ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇ, ನೀವು ಸರ್ವಾಧಿಕಾರಿ ಧೋರಣೆ,ಭ್ರಷ್ಟಾಚಾರದ ಹಲವಾರು ಆರೋಪಗಳಿವೆ. ಕುಲಾಧಿಪತಿ ಸ್ಥಾನಕ್ಕೆ ಗವರ್ನರ್ ಯೋಗ್ಯರೆಂದು ಸಾಂವಿಧಾನಿಕ ಹುದ್ದೆಯಾಗಿ ಕೊಡಲಾಗಿತ್ತು. ಈಗ ಅದನ್ನು ವಾಪಸ್ ಪಡೆಯುವ ಮೂಲಕ ಕುಲಾಧಿಪತಿ ಆಗಲು ಹೊರಟಿದ್ದೀರಿ. ಭ್ರಷ್ಟಾಚಾರದಿಂದ ನಿಮ್ಮ ಸರಕಾರ ಕುಲಗೆಟ್ಟಿದ್ದು, ಕುಲಾಧಿಪತಿ ಸ್ಥಾನಕ್ಕೆ ಮುಖ್ಯಮಂತ್ರಿ ಯೋಗ್ಯರೇ ಎಂದು ಕೇಳಿದರು.
ಸಂವಿಧಾನವನ್ನೇ ಸರ್ವನಾಶ ಮಾಡಿದ್ದರು
ಸಂವಿಧಾನ ತೆಗೆಯುತ್ತಾರೆಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ನಮ್ಮಿಂದ ಸಂವಿಧಾನದ ವಿರುದ್ಧ ಪ್ರಯತ್ನ ನಿಮ್ಮ ಕಾಲದಲ್ಲಿ ಆಗಿದೆ. 1975-76ರಲ್ಲಿ 2 ವರ್ಷ ಸಂವಿಧಾನವನ್ನು ಅಮಾನತಿನಲ್ಲಿ ಇಡಲಾಗಿತ್ತು. ಕುರ್ಚಿ ಉಳಿಸಿಕೊಳ್ಳಲು ಇಂದಿರಾ ಗಾಂಧಿಯವರು ಕಾಂಗ್ರೆಸ್ಸೇ ದೇಶವೆಂದು ತಿಳಿದುಕೊಂಡು ಸಂವಿಧಾನವನ್ನೇ ಸರ್ವನಾಶ ಮಾಡಿದ್ದರು ಎಂದು ತೇಲ್ಕೂರ ಟೀಕಿಸಿದರು.
Good News: ರಾಜ್ಯದ `ಬಗರ್ ಹುಕುಂ’ ರೈತರಿಗೆ ಭರ್ಜರಿ ಗುಡ್ ನ್ಯೂಸ್: ಡಿ.15ರೊಳಗೆ ‘ಸಾಗುವಳಿ ಚೀಟಿ’ ವಿತರಣೆ
ರಾಜ್ಯದ ಕಾರ್ಮಿಕರೇ ಗಮನಿಸಿ : `ಕುಟುಂಬ ಪಿಂಚಣಿ’ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!