ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದೇ ಹೊತ್ತಿನಲ್ಲಿ ತೀವ್ರ ಹೃದಯಾಘಾತದ ಸಂದರ್ಭದಲ್ಲಿ ಗೋಲ್ಡನ್ ಅವರ್ ಮುಖ್ಯ ಎಂಬುದು ಹೃದ್ರೋಗ ತಜ್ಞರ ಮಾತು. ಹಾಗಾದ್ರೇ ಗೋಲ್ಡನ್ ಅವರ್ ಏಕೆ ಮುಖ್ಯ ಎನ್ನುವ ಬಗ್ಗೆ ಮುಂದೆ ಮಾಹಿತಿ ಓದಿ.
ಹೃದಯಾಘಾತದ ಲಕ್ಷಣಗಳು ಪ್ರಾರಂಭವಾದ ನಂತರದ ಮೊದಲ 60 ನಿಮಿಷಗಳನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿನ ಸಕಾಲಿಕ ಆರೈಕೆಯು ಪ್ರಾಣಾಪಾಯವನ್ನು ತಡೆಗಟ್ಟಬಹುದು.
ಸಾರ್ವಜನಿಕರು STEMI ಉಪಕ್ರಮವನ್ನು ಅನುಸರಿಸಿದರೇ ಹೃದಯಾಘಾತದ ಸಂದರ್ಭದಲ್ಲಿ ಪ್ರಾಣಾಪಾಯವನ್ನು ಶೇ.80ರಷ್ಟು ತಡೆಯಬಹುದಾಗಿದೆ.
ಇನ್ನೂ ಹೃದಯಾಘಾತವಾದ ಕೂಡಲೇ ತಕ್ಷಣವೇ ಇಸಿಜಿ ಮತ್ತು ಟೆನೆಕ್ಟಪ್ಲೇಸ್ ಚುಚ್ಚುಮದ್ದು (ರಕ್ತ ಹೆಪ್ಪುಗಟ್ಟುವಿಕೆ ಕರಗಿಸಲು) ನೀಡಿದರೇ ಜೀವ ಉಳಿಸಬಹುದು.
ಸೋ ಗೋಲ್ಡನ್ ಅವರ್ ಆರೈಕೆಯ ಬಗ್ಗೆ ಸದಾ ನೆನಪಿಟ್ಟುಕೊಳ್ಳಿ. ಹೃದಯಾಘಾತದ ಲಕ್ಷಣ ಪ್ರಾರಂಭವಾದ ಮೊದಲ 60 ನಿಮಿಷ ತಡಮಾಡದೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ. ಆಗ ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯವಿದೆ.
ಹೃದಯಾಘಾತದ ಲಕ್ಷಣಗಳು ಪ್ರಾರಂಭವಾದ ನಂತರದ ಮೊದಲ 60 ನಿಮಿಷಗಳನ್ನು *ಗೋಲ್ಡನ್ ಅವರ್* ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿನ ಸಕಾಲಿಕ ಆರೈಕೆಯು ಪ್ರಾಣಾಪಾಯವನ್ನು ತಡೆಗಟ್ಟಬಹುದು.#GOLDENHOUR @CMofKarnataka @siddaramaiah @dineshgrao @DHFWKA pic.twitter.com/orvXx1jAi9
— DIPR Karnataka (@KarnatakaVarthe) July 10, 2025
BIG NEWS: ಹಾಸನದಲ್ಲಿ 20 ಜನರು ಮಾತ್ರ ಹೃದಯಾಘಾತದಿಂದ ಸಾವು: ರಾಜ್ಯ ಸರ್ಕಾರಕ್ಕೆ ತಜ್ಞರು ವರದಿ ಸಲ್ಲಿಕೆ
SHOCKING: ವಸತಿ ಶಾಲೆಗೆ ಅಡ್ಮಿಷನ್ ಮಾಡಿಸಿದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ