Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನನಗೆ ಸಿಎಂ ಆಗುವ ಆಸೆಯಿಲ್ಲ, ಸಚಿವ ಸ್ಥಾನ ಕೊಡಿ ಸಾಕು : ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ

23/02/2026 7:35 PM

ರಾಜ್ಯ ಸರ್ಕಾರದಿಂದ ಅತಿಥಿ ಶಿಕ್ಷಕರಿಗೆ ಗೌರವಧನ ಬಿಡುಗಡೆ

23/02/2026 7:23 PM

BREAKING : ‘ಕಡಿಮೆ ಕಟ್ಆಫ್ ಅಸಮರ್ಥತೆ ಸೂಚಿಸುವುದಿಲ್ಲ’ : ನೀಟ್ ಪಿಜಿ ವಿವಾದದ ನಡುವೆ ತನ್ನ ಕ್ರಮ ಸಮರ್ಥಿಸಿಕೊಂಡ ಸರ್ಕಾರ

23/02/2026 7:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಏಕೆ ಭೂ ವಿವಾದ ಆರೋಪ?
KARNATAKA

ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಏಕೆ ಭೂ ವಿವಾದ ಆರೋಪ?

By kannadanewsnow0920/12/2025 3:44 PM

ಬೆಂಗಳೂರು: ಜನಪರ ಸಚಿವರಾದ ಕೃಷ್ಣ ಬೈರೇಗೌಡರ ಮೇಲೆ ಏಕೆ ಈ ಸುಳ್ಳು ಆರೋಪ ಎನ್ನುವ ಬಗ್ಗೆ ಮುಂದೆ ಓದಿ..

– ಕಂದಾಯ ಇಲಾಖೆಯಲ್ಲಿ ವರ್ಗಾವಣೆಯಲ್ಲಿ ಪಾರದರ್ಶಕತೆ ತಂದಿದ್ದರು.

– ಕೆಲಸ ಮಾಡದ ಎಸಿ-ತಹಶೀಲ್ದಾರ್ ಗಳ ವಿರುದ್ಧ ಕಠಿಣ ಕ್ರಮ ವಹಿಸಿ ಎಲ್ಲಾ ಅಧಿಕಾರಿಗಳಿಂದ ಕೆಲಸ ತೆಗೆಸಿದ್ದರು.

– ಇಲಾಖೆಯ ಎಲ್ಲಾ ಕೆಲಸಗಳನ್ನೂ ಡಿಜಿಟಲೀಕರಣಗೊಳಿಸಿ ಇ-ಆಫೀಸ್ ಜಾರಿಗೆ ತಂದು ಭ್ರಾಷ್ಟಾಚಾರಕ್ಕೆ ಇತಿಶ್ರೀ ಹಾಡಿದ್ದರು.

– ದಶಕಗಳ ಸಮಸ್ಯೆಯಾಗಿದ್ದ ಪೋಡಿ ದುರಸ್ಥಿಗೆ ಕೆಲಸಕ್ಕೆ ಕೈಹಾಕಿ ರೈತರಿಗೆ ನೆಮ್ಮದಿ ನೀಡಿದರು.

– ಬಗರ್ ಹುಕುಂ ಮಂಜೂರಿಯಲ್ಲಿ ಪಾರದರ್ಶಕತೆ ತಂದರು.

– ಆದರೂ, ಕೃಷ್ಣ ಬೈರೇಗೌಡರ ವಿರುದ್ಧ ಏಕೆ ಈ ಮಟ್ಟದ ಸುಳ್ಳು ಆರೋಪಗಳ ಷಡ್ಯಂತ್ರವಾಗಿದೆ ಎನ್ನಲಾಗುತ್ತಿದೆ.

– ತಾನೂ ತಿನ್ನೋಲ್ಲ ತಿನ್ನೋರಿಗೂ ಬಿಡಲ್ಲ ಎಂಬ ನಿಲುವೇ ಮುಳುವಾಯಿತೇ.?? ಎಂಬುದು ಆಪ್ತ ವಲಯದ ಮಾತು.

– ಅಕ್ರಮ ಭೂ ಮಂಜೂರಿಗಾಗಿ ಮನವಿ ಸಲ್ಲಿಸಿದ್ದ ಹಲವು ಪ್ರಭಾವಿಗಳ ಮನವಿಗೆ ಕಿವಿಗೊಡದ ಇದ್ದದ್ದೇ ತಪ್ಪಾಯಿತೇ? ಎಂಬ ಪ್ರಶ್ನೆ ಸಾರ್ವಜನಿಕರದ್ದು.

– ಭ್ರಷ್ಟ ಕಾಂಟ್ರಾಕ್ಟರ್ ಗಳು ಜನರ ಹಣ ಲೂಟಿ ಮಾಡದಂತೆ ತಡೆದದ್ದಕ್ಕೆ ಇಷ್ಟೊಂದು ಷಡ್ಯಂತ್ರವಾ?

– ⁠ಇ-ಖಾತಾ ಜಾರಿಗೆ ತಂದು ಅನದೀಕೃತ ಲೇಔಟ್ ಗಳಿಗೆ ಕಡಿವಾಣ ಹಾಕಿದ್ದೇ ಭ್ರಷ್ಟರ ಕಣ್ಣು ಕೆಂಪಾಯಿತಾ?

– ⁠BMRCL, GBA, BWSSB, NHAI ಅಧಿಕಾರಿಗಳು ಕಂಟ್ರಾಕ್ಟರ್ ಗಳು ಉತ್ತನ ಗುಣಮಟ್ಚದ ಕೆಲಸ ಮಾಡಿ ಎಂದರೆ ರಾದ್ಧಾಂತವೇಕೆ?

– ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡೊಲ್ಲ ಅಂದ್ರೆ ಇಷ್ಟೊಂದು ಸುಳ್ಳು ಆರೋಪವಾ?

– ಪಿತ್ರಾರ್ಜಿತ ಆಸ್ತಿಯ ಬಗ್ಗೆಯೂ ಸುಳ್ಳು ದಾಖಲೆ ಸೃಷ್ಟಿಸುವಷ್ಟು ಕೀಳು ಮಟ್ಟಕ್ಕೆ ಇಳಿಯುವುದು ಸರಿಯಾ?

– ಜನಪರ ಸೇವೆ ನೀಡುತ್ತಿರುವ ಸರಳ ಸಜ್ಜನ ರಾಜಕಾರಣಿಗೆ ಈ ಮಟ್ಟದ ಕಿರುಕುಳ ನೀಡುತ್ತಿರುವುದನ್ನು ನಾಡಿನ ಜನ ನೋಡುತ್ತಿದ್ದಾರೆ. ಮುಂದೊಂದು ದಿನ ಅವರೇ ಸೂಕ್ತ ಉತ್ತರ ನೀಡಲಿದ್ದಾರೆ.

ಕೋಲಾರದ ಗರುಡನಪಾಳ್ಯ ಜಮೀನು ವಿವಾದಕ್ಕೆ ಸಂಬಂಧಿಸಿ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ಹೇಳಿದ್ದೇನು.?

ಕಳೆದ ಎರಡು ಮೂರು ದಿನಗಳಿಂದ ಕೋಲಾರ ತಾಲೂಕು ಗರಡುಪಾಳ್ಯ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂಬ ವಿಚಾರ ಚರ್ಚೆಯಾಗುತ್ತಿದೆ. ಈ ವಿಚಾರದಲ್ಲಿ ನನ್ನ ಹೆಸರನ್ನೂ ತಳುಕು ಹಾಕಿ, ನಾನೇ ಒತ್ತುವರಿ ಮಾಡಿದ್ದೇನೆ ಎಂದೂ ಆರೋಪಿಸಲಾಗಿದೆ.

ಸಾರ್ವಜನಿಕ ಜೀವನದಲ್ಲಿ ನಾವು ಕೆಲಸ ಮಾಡುವಾಗ ನಮ್ಮ ಕೆಲಸವನ್ನು ಒಪ್ಪುವವರು-ವಿರೋಧಿಸುವವರು ಇದ್ದೇ ಇರುತ್ತಾರೆ. ಇದು ಸಾರ್ವಜನಿಕ ಜೀವನದ ಅವಿಭಾಗ್ಯ ಅಂಗ. ನಿಷ್ಠುರವಾಗಿ ಕೆಲಸ ಮಾಡುವಾಗ ಅದನ್ನು ಒಪ್ಪುವವರು ಇರುತ್ತಾರೆ. ನಿಷ್ಠುರ ಕೆಲಸ ಮಾಡಿದ್ದಕ್ಕಾಗಿ ಬಾಧಿರಾಗುವುದೂ ಇರುತ್ತದೆ. ನಿಷ್ಠುರವಾಗಿ ಕೆಲಸ ಮಾಡುವವರನ್ನು ಸಿಲುಕಿಸಲು ಯತ್ನಿಸುವ ಪ್ರಯತ್ನವನ್ನು ಹಲವು ಮಾಡುತ್ತಾರೆ. ಅದಕ್ಕೆ ಚಿಂತೆಗೀಡಾಗುವ ಅಗ್ಯವಿಲ್ಲ.

ಗರಡುಪಾಳ್ಯ ಗ್ರಾಮವು ಮೈಸೂರು ಮಹಾರಾಜರ ಮನೆತನಕ್ಕೆ ಸೇರಿದ್ದ ಗ್ರಾಮ. 1923ರಲ್ಲಿ ಮಹರಾಜರು ಖರೀದಿದ್ದರು. ಅವರು ಅಲ್ಲಿ ಕೃಷಿ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದರು. ರಸಾಯನಿಕ ಗೊಬ್ಬರವನ್ನ ಹೊರದೇಶದಿಂದ ಆಮದು ಮಾಡಿ, ಇಲ್ಲಿ ರೈತರಿಗೆ ಪರಿಚಯ ಮಾಡಿಸುವ ಕೇಂದ್ರವನ್ನಾಗಿ ನಡೆಸಲಾಗುತ್ತಿತ್ತು. ಇದುಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಟ್ರಸ್ಟ್ಗೆ ಸೇರಿದ ಜಮೀನು. ಇದರ ವ್ಯವಹಾರವನ್ನು ಮಹಾರಾಜರ ಸೆಕ್ರೆಟರಿ ನಾರಾಯಣ ಸ್ವಾಮಿ ನೋಡಿಕೊಳ್ಳುತ್ತಿದ್ದರು. ಅದನ್ನು ಆ ನಾರಾಯಣ ಸ್ವಾಮಿ ಅವರು 1953ರಲ್ಲಿ ನಮ್ಮ ತಾತ ಚೌಡೇಗೌಡರಿಗೆ 10 ವರ್ಷಗಳ ಭೋಗ್ಯಕ್ಕೆ ನೀಡಿದ್ದರು.

ಭೋಗ್ಯದ ಅವಧಿ ಮುಗಿಯುವುದಕ್ಕೂ ಮೊದಲೇ ರಾಜಮನೆತನದವರು ಆ ಭೂಮಿಯನ್ನು ಮಾರಾಟಕ್ಕೆ ಇಟ್ಟರು. ಚೌಡೇಗೌಡರು ಆ ಜಮೀನು ಖರೀದಿಸುವುದಾಗಿ ಹೇಳಿದರೂ, ಸರಿಯಾದ ಸಮಯಕ್ಕೆ ಹಣ ಹೊಂದಿಸಲಾಗಲಿಲ್ಲ. ಆದ್ದರಿಂದ, ಜಮೀನನ್ನು 1959ರಲ್ಲಿ ಅಬೀಬುಲ್ಲಾ ಖಾನ್ ಅವರಿಗೆ ಮಾರಾಟ ಮಾಡಿದರು. ಅದರ ವಿರುದ್ಧ ನಮ್ಮ ತಾತ ಕೋಲಾರ ವಿಶೇಷ ಜಿಲ್ಲಾಧಿಕಾರಿ ಬಳಿ ದೂರು ದಾಖಲಿದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ಅಬೀಬುಲ್ಲಾ ಖಾನ್ ಅವರೇ ಭೂಮಿ ಮಾಲೀಕರು ಎಂದು ಆದೇಶ ನೀಡಿದ್ದರು.

ಜಿಲ್ಲಾಧಿಕಾರಿಯ ಆದೇಶದಲ್ಲಿ; “ಗರಡುಪಾಳ್ಯ ಎಂಬ ಇಡೀ ಹಳ್ಳಿಯು ಒಬ್ಬ ಮಾಲೀಕನಿಗೆ ಸೇರಿದ್ದು. ಯಾರೂ ವಾಸ ಮಾಡದೇ ಇರುವ ‘ಬೇಚರಾಗ್’ ಗ್ರಾಮ. ಈ ಹಳ್ಳಿಯು ಶ್ರೀಕಂಠದತ್ತ ಒಡೆಯರ್ ಟ್ರಸ್ಟ್ಗೆ ಸೇರಿದ್ದಾಗಿದ್ದು, 1953ರಲ್ಲಿ ಇಡೀ ಹಳ್ಳಿಯನ್ನು ರಾಜಮನೆತನವು ಭೋಗ್ಯಕ್ಕೆ ನೀಡಿತ್ತು. ಬಳಿಕ, ಅಬೀಬುಲ್ಲಾ ಖಾನ್ ಅವರಿಗೆ 47,601 ರೂ. ಮಾರಾಟ ಮಾಡಿದೆ” ಎಂದು ಬರೆದಿದ್ದರು.

ಬಳಿಕ, ಈ ಆದೇಶವನ್ನು ಪ್ರಶ್ನಿಸಿ ಮೈಸೂರ್ ಅಪಿಲೇಟ್ ಟ್ರಿಬ್ಯೂನಲ್ನಲ್ಲಿ ಚೌಡೇಗೌಡರು ಮೇಲ್ಮನವಿ ದಾಖಲಿಸಿದರು. ಆಗ, ಅಬೀಬುಲ್ಲಾ ಖಾನ್ ಅವರು ಒಪ್ಪಂದಕ್ಕೆ ಬಂದರು. ಗ್ರಾಮದ ಸಂಪೂರ್ಣ 256 ಎಕರೆ ಒಡೆತನವನ್ನು ಚೌಡೇಗೌಡರಿಗೆ ಬಿಟ್ಟುಕೊಟ್ಟರು. ಇದೆಲ್ಲವೂ ‘ಸೇಲ್ ಡೀಡ್’ (ಕ್ರಯ)ನಲ್ಲಿ ಸ್ಪಷ್ಟವಾಗಿದೆ. ಅಂದಿನಿಂದ ಈವರೆಗೆ ನಾವು ಆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇವೆ.

ಈ ಜಮೀನಿನಲ್ಲಿ ಎರಡು ಕೆರೆಗಳಿವೆ. ಆ ಕೆರೆ ಭೂಮಿಯ ಒಂದಿಂಚೂ ಜಾಗವನ್ನು ಒತ್ತುವರಿ ಮಾಡಿಲ್ಲ. ಆ ಕೆರೆಗಳು ಈಗಲೂ ಅಸ್ತಿತ್ವದಲ್ಲಿವೆ. ಕೆರೆಗಳು ಮತ್ತು ಕೆರೆಗಳಿಗೆ ಹೊಂದಿಕೊಂಡಿರುವ ನಾಲೆಗಳ ಯಾವುದೇ ಒಂದಿಂಚೂ ಭೂಮಿಯನ್ನು ಒತ್ತುವರಿ ಮಾಡಲಾಗಿಲ್ಲ. ಬೇಕಿದ್ದರೆ ಯಾರು ಬೇಕಿದ್ದರೂ ಪರಿಶೀಲಿಸಲು ಬರಬಹುದು. ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಎಂದು ಹೇಳಿದ್ದರು.

Share. Facebook Twitter LinkedIn WhatsApp Email

Related Posts

ನನಗೆ ಸಿಎಂ ಆಗುವ ಆಸೆಯಿಲ್ಲ, ಸಚಿವ ಸ್ಥಾನ ಕೊಡಿ ಸಾಕು : ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ

23/02/2026 7:35 PM1 Min Read

ರಾಜ್ಯ ಸರ್ಕಾರದಿಂದ ಅತಿಥಿ ಶಿಕ್ಷಕರಿಗೆ ಗೌರವಧನ ಬಿಡುಗಡೆ

23/02/2026 7:23 PM2 Mins Read

ಗಾಂಧಿ ಪಾಕಿಸ್ತಾನದ ಪಿತಾಮಹ, ಓಮರ್ ಅಬ್ದುಲ್ಲಾ, ರಾಹುಲ್ ಗಾಂಧಿ ಒಂದೇ ಪ್ರೊಡಕ್ಷನ್ : ಯತ್ನಾಳ್ ವಿವಾದದ ಹೇಳಿಕೆ ವೈರಲ್!

23/02/2026 7:17 PM1 Min Read
Recent News

ನನಗೆ ಸಿಎಂ ಆಗುವ ಆಸೆಯಿಲ್ಲ, ಸಚಿವ ಸ್ಥಾನ ಕೊಡಿ ಸಾಕು : ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ

23/02/2026 7:35 PM

ರಾಜ್ಯ ಸರ್ಕಾರದಿಂದ ಅತಿಥಿ ಶಿಕ್ಷಕರಿಗೆ ಗೌರವಧನ ಬಿಡುಗಡೆ

23/02/2026 7:23 PM

BREAKING : ‘ಕಡಿಮೆ ಕಟ್ಆಫ್ ಅಸಮರ್ಥತೆ ಸೂಚಿಸುವುದಿಲ್ಲ’ : ನೀಟ್ ಪಿಜಿ ವಿವಾದದ ನಡುವೆ ತನ್ನ ಕ್ರಮ ಸಮರ್ಥಿಸಿಕೊಂಡ ಸರ್ಕಾರ

23/02/2026 7:21 PM

ಗಾಂಧಿ ಪಾಕಿಸ್ತಾನದ ಪಿತಾಮಹ, ಓಮರ್ ಅಬ್ದುಲ್ಲಾ, ರಾಹುಲ್ ಗಾಂಧಿ ಒಂದೇ ಪ್ರೊಡಕ್ಷನ್ : ಯತ್ನಾಳ್ ವಿವಾದದ ಹೇಳಿಕೆ ವೈರಲ್!

23/02/2026 7:17 PM
State News
KARNATAKA

ನನಗೆ ಸಿಎಂ ಆಗುವ ಆಸೆಯಿಲ್ಲ, ಸಚಿವ ಸ್ಥಾನ ಕೊಡಿ ಸಾಕು : ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ

By kannadanewsnow0523/02/2026 7:35 PM KARNATAKA 1 Min Read

ಶಿವಮೊಗ್ಗ : ಅಧಿಕಾರ ಹಂಚಿಕೆಯ ನಡುವೆ ರಾಜ್ಯದಲ್ಲಿ ಮೊದಲ ಬಾರಿ ಗೆದ್ದು ಶಾಸಕರಾಗಿದ್ದ 31 ಶಾಸಕರು ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ…

ರಾಜ್ಯ ಸರ್ಕಾರದಿಂದ ಅತಿಥಿ ಶಿಕ್ಷಕರಿಗೆ ಗೌರವಧನ ಬಿಡುಗಡೆ

23/02/2026 7:23 PM

ಗಾಂಧಿ ಪಾಕಿಸ್ತಾನದ ಪಿತಾಮಹ, ಓಮರ್ ಅಬ್ದುಲ್ಲಾ, ರಾಹುಲ್ ಗಾಂಧಿ ಒಂದೇ ಪ್ರೊಡಕ್ಷನ್ : ಯತ್ನಾಳ್ ವಿವಾದದ ಹೇಳಿಕೆ ವೈರಲ್!

23/02/2026 7:17 PM

ಸಾಗರ ತಾಲ್ಲೂಕಿನ ‘ಹಸಿರುಮಕ್ಕಿ ಸೇತುವೆ’ ಮೇ ವೇಳೆಗೆ ಲೋಕಾರ್ಪಣೆಗೆ ಕ್ರಮ: ಸಚಿವ ಸತೀಶ್ ಜಾರಕಿಹೊಳಿ

23/02/2026 7:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.