ಶಿವಮೊಗ್ಗ: ಜಿಲ್ಲೆಯ ಜನರು ಎಲ್ಲೆಲ್ಲೋ ಹೋಗಿ ಹೊಸ ವರ್ಷವನ್ನು ಡಿಸೆಂಬರ್.31ರಂದು ಆಚರಿಸೋದು ಯಾಕೆ.? ನೀವು, ನಿಮ್ಮ ಕುಟುಂಬಸ್ಥರು ಜೊತೆಗೂಡಿ ಹೊಸ ವರ್ಷವನ್ನು ಆಚರಿಸೋದಕ್ಕೆ ಸದ್ಗುರು ಗ್ರೂಪ್ಸ್ ಸಿದ್ಧವಾಗಿದೆ. ಅದೆಲ್ಲಿ ಅಂತ ಮುಂದೆ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸದ್ಗುರು ಗ್ರೂಪ್ಸ್ ನಿಂದ ಇದೇ ಮೊದಲ ಬಾರಿಗೆ ಹೊಸ ವರ್ಷಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲೈವ್ ಡಿಜೆ ಜೊತೆಗೆ ಹಾಡು, ಕುಣಿತದ ರಸದೌತಣವನ್ನು ನೀಡಲು ವೇದಿಕೆಯನ್ನು ಸಜ್ಜುಗೊಳಿಸಿದೆ.
ಸಾಗರದ ಕೂಗಳತೆ ದೂರದಲ್ಲಿರುವಂತ ತ್ಯಾಗರ್ತಿ ಕ್ರಾಸ್ ಬಳಿಯಲ್ಲಿ ಬಹುದೊಡ್ಡ ಹೊಸ ವರ್ಷಾಚರಣೆಯ ಮಲ್ನಾಡ್ ಕಾರ್ನಿವಲ್ ಕಾರ್ಯಕ್ರಮವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ವೆಜ್ ಅಂಡ್ ನಾನ್ ವೆಜ್ ಊಟದ ಜೊತೆಗೆ ಲೈವ್ ಸಂಗೀತವನ್ನು ಖ್ಯಾತ, ಪ್ರಸಿದ್ಧ ಗಾಯಕರಿಂದ ಕೇಳಿ, ಕುಣಿದು ಸಂಭ್ರಮಿಸಬಹುದಾಗಿದೆ.
0-9 ವರ್ಷದೊಳಗಿನವರಿಗೆ ಪ್ರವೇಶ ಉಚಿತವಾಗಿದೆ. 18 ವರ್ಷದ ಒಳಗಿನವರಿಗೂ ರೂ.499 ಹಾಗೂ 19 ವರ್ಷ ಮೇಲ್ಪಟ್ಟವರಿಗೆ ರೂ.699 ಟಿಕೆಟ್ ಶುಲ್ಕವನ್ನು ನಿಗದಿಪಡಿಸಲಾಗಿದೆ. ಟಿಕೆಟ್ ಆನ್ ಲೈನ್ ನಲ್ಲಿ ಖರೀದಿಸುವುದಾದರೇ ಇಂದೇ https://hotelsadguruandtours.com/malnad_carnival/booking/ ಲಿಂಕ್ ಕ್ಲಿಕ್ ಮಾಡಿ ಖರೀದಿಸಬಹುದು.
ಇನ್ನೂ ನೀವು ಡಿಸೆಂಬರ್.31ರಂದೇ ಮಲ್ನಾಡ್ ಕಾರ್ನಿವಲ್ ಕಾರ್ಯಕ್ರಮ ನಡೆಯುವಂತ ಪ್ರವೇಶ ದ್ವಾರದ ಬಳಿಯಲ್ಲೂ ಟಿಕೆಟ್ ಖರೀದಿಸಿ ಹೊಸ ವರ್ಷಾಚಣೆಯನ್ನು ಫ್ಯಾಮಿಲಿಯೊಂದಿಗೆ ಆಚರಿಸಬಹುದು. ಇದಲ್ಲದೇ ಸಾಗರದ ತೋಟಗಾರಿಕೆ ಇಲಾಖೆ ಎದುರಿನ ಸದ್ಗುರು ಹೋಟೆಲ್ ನಲ್ಲೂ ಟಿಕೆಟ್ ಲಭ್ಯವಿರುತ್ತದೆ. ಹೊಸ ವರ್ಷಾಚರಣೆಯಲ್ಲಿ ತೊಡಗೋರು ಖರೀದಿಸಬಹುದು ಅಂತ ಆಯೋಜಕರಾದಂತ ಸಂತೋಷ್ ಸದ್ಗುರು ತಿಳಿಸಿದ್ದಾರೆ.
ಮಲ್ನಾಡ್ ಕಾರ್ನಿವಲ್ ಬಳಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಸಿಸಿಟಿವಿ ಅಳವಡಿಸಲಾಗಿದೆ. ಜೊತೆಗೆ ಖಾಸಗಿ ಭದ್ರತೆಯನ್ನು ಒದಗಿಸಲಾಗಿದೆ. ಪೊಲೀಸ್, ಗ್ರಾಮ ಪಂಚಾಯ್ತಿ, ಅಗ್ನಿ ಶಾಮಕ ದಳದವರಿಂದಲೂ ಅನುಮತಿಯನ್ನು ಪಡೆದು ಆಯೋಜಿಸಲಾಗುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ ಯಾವುದೇ ಭಯವಿಲ್ಲದೇ ಸಾರ್ವಜನಿಕರು ಈ ಹೊಸ ವರ್ಷಾಚರಣೆಯ ಕಾರ್ಯಕ್ರಮವದಲ್ಲಿ ಭಾಗಿಯಾಗಬಹುದಾಗಿದೆ ಅಂತ ತಿಳಿಸಿದ್ದಾರೆ.
ಹಾಗಾದ್ರೇ ಇನ್ನೇಕೆ ತಡ, ಇಂದೇ ಟಿಕೆಟ್ ಬುಕ್ ಮಾಡಿ, ಡಿಸೆಂಬರ್.31ರಂದು ಹೊಸ ವರ್ಷಾಚರಣೆಯಲ್ಲಿ ಕುಟುಂಬ ಸಹಿತ ಆಚರಿಸೋದು ಮರೆಯಬೇಡಿ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಖ್ಯಾತ ಮಲಯಾಳಂ ನಟ ದಿಲೀಪ್ ಶಂಕರ್ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆ
BREAKING: KPSC ಕೆಎಎಸ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು: OMR ಶೀಟ್ ನೋಂದಣಿ ಸಂಖ್ಯೆಯೇ ಬದಲಾವಣೆ