ಬೆಂಗಳೂರು: ನಿಮ್ಮ ಶಾಸಕರ ನಾಟಕವನ್ನು ಸಮರ್ಥಿಸಿಕೊಳ್ಳುವ ನೀವು, ಅವರ ಮೇಲೆ ಅತ್ಯಾಚಾರ ಆರೋಪ ಬಂದಾಗ ಬಾಯಿಗೆ ಬೀಗ ಹಾಕಿಕೊಂಡಿದ್ದೇಕೆ? ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಅಪ್ಪನ ರಾಜಕೀಯ ಪ್ರಭಾವದಿಂದ ರಾಜಕೀಯಕ್ಕೆ ಬಂದ ತಕ್ಷಣ ರಾಜ್ಯಾಧ್ಯಕ್ಷ ಹುದ್ದೆ ಸಿಕ್ಕ ನಿಮಗೆ ಆ ಸ್ಥಾನದಲ್ಲಿ ಕೂತು ಯಾವ ವಿಚಾರವಾಗಿ ಮಾತನಾಡಬೇಕು, ಟೀಕಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ. ಬಿವೈ ವಿಜಯೇಂದ್ರ ಅವರೇ ನಿಮ್ಮಿಂದ ಅದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅಲ್ಲವೇ ಯತ್ನಾಳ್ ಅವರು ನಿಮ್ಮನ್ನು ಬಚ್ಚಾ, ಎಳಸು ಎಂದು ಕರೆಯುವುದು ಎಂದು ಹೇಳಿದೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಉದ್ಯಾನದಲ್ಲಿ ಹೆಜ್ಜೆ ಹಾಕಿ ಸಾರ್ವಜನಿಕರ ಜೊತೆ ಮಾತನಾಡಿ ಅವರ ಕಷ್ಟ ಕೇಳಲು ಬಂದಿದ್ದರು. ಶಿಷ್ಟಾಚಾರ ಉಲ್ಲಂಘನೆ ಆಗಿದ್ದರೆ, ಅದನ್ನು ಪ್ರಶ್ನಿಸುವ ರೀತಿ ಇರುತ್ತದೆ. ಕಾರ್ಯಕ್ರಮಕ್ಕೆ ಅಡ್ಡಿ ಮಾಡುವುದಲ್ಲ ಎಂದು ತಿಳಿಸಿದೆ.
ನಿಮ್ಮ ಶಾಸಕರ ನಾಟಕವನ್ನು ಸಮರ್ಥಿಸಿಕೊಳ್ಳುವ ನೀವು, ಅವರ ಮೇಲೆ ಅತ್ಯಾಚಾರ ಆರೋಪ ಬಂದಾಗ ಬಾಯಿಗೆ ಬೀಗ ಹಾಕಿಕೊಂಡಿದ್ದೇಕೆ? ನಿಮ್ಮದೇ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಏಡ್ಸ್ ಸೋಂಕು ತಗುಲಿಸುವ ಸಂಚು ಬಯಲಾದಾಗಲೂ ತುಟಿ ಬಿಚ್ಚದ ನೀವು, ಈಗ ಯಾವ ನೈತಿಕತೆ ಇಟ್ಟುಕೊಂಡು ಟೀಕೆ ಮಾಡುತ್ತೀರಿ? ಎಂದು ಪ್ರಶ್ನಿಸಿದೆ.
ಅಪ್ಪನ ರಾಜಕೀಯ ಪ್ರಭಾವದಿಂದ ರಾಜಕೀಯಕ್ಕೆ ಬಂದ ತಕ್ಷಣ ರಾಜ್ಯಾಧ್ಯಕ್ಷ ಹುದ್ದೆ ಸಿಕ್ಕ ನಿಮಗೆ ಆ ಸ್ಥಾನದಲ್ಲಿ ಕೂತು ಯಾವ ವಿಚಾರವಾಗಿ ಮಾತನಾಡಬೇಕು, ಟೀಕಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ. @BYVijayendra ಅವರೇ ನಿಮ್ಮಿಂದ ಅದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅಲ್ಲವೇ ಯತ್ನಾಳ್ ಅವರು ನಿಮ್ಮನ್ನು ಬಚ್ಚಾ, ಎಳಸು ಎಂದು… pic.twitter.com/eOdwinEc3y
— Karnataka Congress (@INCKarnataka) October 12, 2025
RSS ಸಂಘದ ನಿಷೇದ ಕನಸಿನ ಮಾತು, ಹೀಗೆ ಕರೆ ಕೊಟ್ಟಿರೋದು ಬೌದ್ಧಿಕ ದಾರಿದ್ರ್ಯತನ: ಶಾಸಕ ಯತ್ನಾಳ್
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion