Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದ: ‘ಇದು ಸಣ್ಣ ವ್ಯಾಪಾರಿಗಳ ಪಾಲಿನ ಮರಣಶಾಸನ’ ಎಂದ ರಾಹುಲ್ ಗಾಂಧಿ

01/03/2026 1:54 PM

ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಜಸ್ಟ್ ಈ ಸುಲಭ ಮನೆಮದ್ದುಗಳನ್ನು ಬಳಸಿ !

01/03/2026 1:41 PM

BREAKING : ಇರಾನ್ ಸೇನಾ ಹೆಲಿಕಾಪ್ಟರ್ ಪತನಗೊಂಡು ನಾಲ್ವರು ಸಾವು !

01/03/2026 1:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶೀಘ್ರವೇ ‘BBMP ವ್ಯಾಪ್ತಿ’ಯಲ್ಲಿ ‘ವೈಟ್ ಟಾಪಿಂಗ್ ಕಾಮಗಾರಿ’ಗೆ ಚಾಲನೆ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
KARNATAKA

ಶೀಘ್ರವೇ ‘BBMP ವ್ಯಾಪ್ತಿ’ಯಲ್ಲಿ ‘ವೈಟ್ ಟಾಪಿಂಗ್ ಕಾಮಗಾರಿ’ಗೆ ಚಾಲನೆ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

By kannadanewsnow0902/07/2024 4:13 PM

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಭೂಮಿ ಪೂಜೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಮುಖ್ಯ ಆಯುಕ್ತರಾದ ತುಷರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಅನುಷ್ಠಾನಗೊಳಿಸುವ ಸಂಬಂಧ ಬಿ.ಎಸ್.ಡಬ್ಲ್ಯೂ.ಎಂ.ಎಲ್ ಕಛೇರಿಯಲ್ಲಿ ನಡೆದ ಅಂತರ್ ಇಲಾಖೆ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವೈಟ್ ಟಾಪಿಂಗ್ ಅನ್ನು 15 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಪೈಕಿ 13 ಪ್ಯಾಕೇಜ್ ಗಳು ಈಗಾಗಲೇ ಅಂತಿಮಗೊಂಡಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಇನ್ನೆರಡು ಪ್ಯಾಕೇಜ್‌ಗಳು ಸರ್ಕಾರದ ಹಂತದಲ್ಲಿದ್ದು, ಶೀಘ್ರ ಭೂಮಿ ಪೂಜೆ ನೆರವೇರಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಯಿತು.

ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಸಂಬಂಧ ಜಲಂಡಳಿಯ ನೀರಿನ ಹಾಗೂ ಒಳಚರಂಡಿ ಕೊಳವೆ, ಬೆಸ್ಕಾಂ ಹಾಗೂ ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯ ಕೇಬಲ್‌ಗಳು, ಗೇಲ್ ಗ್ಯಾಸ್ ಪೈಪ್ ಲೈನ್ ಗಳ ಬದಲವಾಣೆ ಸೇರಿದಂತೆ ಇನ್ನಿತರೆ ಇಲಾಖೆಗಳು ಸ್ಥಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದರು.

ಯಾವುದೇ ಇಲಾಖೆಯಾಗಲಿ ಈಗಲೇ ಸಮೀಕ್ಷೆ ನಡೆಸಿಕೊಂಡು ವೈಟ್ ಟಾಪಿಂಗ್ ಕಾಮಗಾರಿ ನಡೆಸುವ ವೇಳೆ ಏನಾದರು ಬದಲಾವಣೆಗಳಿದ್ದಲ್ಲಿ ಮಾಡಿಕೊಳ್ಳಬೇಕು. ಜಲಮಂಡಳಿಯಿಂದ ರಸ್ತೆಯ ಮೂಲಕ ಕೊಳವೆ ಅಳವಡಿಸದೆ ಎರಡೂ ಬದಿ ಕೊಳವೆಗಳನ್ನು ಅಳವಡಿಸಿಕೊಳ್ಳಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಯಾವುದೇ ಕಾರಣಕ್ಕೂ ರಸ್ತೆ ಕತ್ತರಿಸಲು ಅನುಮತಿ ನೀಡುವುದಿಲ್ಲೆ ಎಂದು ತಿಳಿಸಿದರು.

ನಗರದಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿದೆಯೇ ಆ ಪಟ್ಟಿಯನ್ನು ಈಗಾಗಲೇ ಎಲ್ಲಾ ಇಲಾಖೆಗಳಿಗೆ ನೀಡಲಾಗಿದೆ. ಅದರ ಪ್ರಕಾರ ಈಗಾಗಲೇ ಜಂಟಿ ಪರಿಶೀಲನೆ ನಡೆಸಲಾಗಿದ್ದು, ಅಂತಿಮ ಹಂತದ ಸಿದ್ದತೆಗಳನ್ನು ಮಾಡಿಕೊಂಡು ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಸೂಚನೆ ನೀಡಿದರು.

ಯುಟಿಲಿಟಿಗೆ ಸಮಗ್ರ ವ್ಯವಸ್ಥೆ:

ವೈಟ್ ಟಾಪಿಂಗ್ ಕಾಮಗಾರಿ ನಡೆಸುವ ರಸ್ತೆಗಳ ಎರಡೂ ಬದಿ ಪಾದಚಾರಿ ಮಾರ್ಗದಲ್ಲಿ ಯುಟಿಲಿಟಿಗಾಗಿ ಡಕ್ಟ್ಸ್ ಗಳ ಅಳವಡಿಕೆಗೆ ಸಮಗ್ರ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಸಂಬಂಧ ಆಯಾ ಸಂಬಂಧಪಟ್ಟ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಯಿತು.

ಸಂಚಾರ ಮಾರ್ಗ ಬದಲಾವಣೆ:

ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವ ಕಡೆ ಸಂಚಾರ ಪೊಲೀಸ್ ವಿಭಾಗದ ಜೊತೆ ಸಮನ್ವಯ ಸಾಧಿಸಿ ಮಾರ್ಗ ಬದಲಾವಣೆ ಮಾಡಿಕೊಂಡು ಕಾಲಮಿತಿಯೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಾಮಗಾರಿಯ ವೇಳೆ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಹಂತ-ಹಂತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ರವರು ಮಾತನಾಡಿ, ನಗರದಲ್ಲಿ ಸುಮಾರು 150 ಕಿ.ಮೀ ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಂಚಾರಿ ಪೊಲೀಸ್ ಅಧಿಕಾರಿಗಳು ಕಾಮಗಾರಿ ನಡೆಯುವ ಪ್ರದೇಶದಲ್ಲಿ ಪರ್ಯಾಯ ರಸ್ತೆ ಗುರುರಿತಿಸಿ ಕೊಡಬೇಕೆಂದು ಮನವಿ ಮಾಡಿದರು. ಜೊತೆಗೆ ಕಾಮಗಾರಿಯನ್ನು ಹಗಲು-ರಾತ್ರಿ ನಡೆಸಿ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಈ ವೇಳೆ ಯೋಜನಾ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್, ಜಲಮಂಡಳಿ ಮುಖ್ಯ ಅಭಿಯಂತರರಾದ ಗಂಗಾಧರ್, ವೆಂಕಟೇಶ್, ದೇವರಾಜ್, ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಗಳು, ಕೆಪಿಟಿಸಿಎಲ್, ಬೆಸ್ಕಾಂ, ಜಲಮಂಡಳಿ, ಗೇಲ್ ಗ್ಯಾಸ್ ಸೇರಿದಂಗೆ ಇನ್ನಿತರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ದಿನವೊಂದಕ್ಕೆ 1 ಕೋಟಿ ಲೀ.ಹಾಲು ಉತ್ಪಾದನೆ: ಇದು KMF ಇತಿಹಾಸದಲ್ಲಿಯೇ ಮೈಲಿಗಲ್ಲು: CM ಸಿದ್ದರಾಮಯ್ಯ

ಮುಡಾದಲ್ಲಿ 4,000 ಕೋಟಿ ರೂ. ಗುಳುಂ ಮಾಡಿದ ʻಗೋಲ್ಮಾಲ್‌ CMʼ : ಆರ್.‌ ಅಶೋಕ್‌ ಗಂಭೀರ ಆರೋಪ

Share. Facebook Twitter LinkedIn WhatsApp Email

Related Posts

ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಜಸ್ಟ್ ಈ ಸುಲಭ ಮನೆಮದ್ದುಗಳನ್ನು ಬಳಸಿ !

01/03/2026 1:41 PM2 Mins Read
Haveri Shiggaon Horrific Road Accident

ಹಸೆಮಣೆ ಏರಿದ 15 ದಿನಕ್ಕೇ ಜವರಾಯನ ಅಟ್ಟಹಾಸ: ಶಿಗ್ಗಾಂವಿ ಬಳಿ ಭೀಕರ ಅಪಘಾತಕ್ಕೆ ನವದಂಪತಿ ಬಲಿ!

01/03/2026 1:17 PM2 Mins Read
Israel-Iran conflict heats up: Flights cancelled at Mangalore Airport, passengers stranded!

ಇಸ್ರೇಲ್-ಇರಾನ್ ಸಂಘರ್ಷದ ಬಿಸಿ : ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟ ರದ್ದು, ಪ್ರಯಾಣಿಕರ ಪರದಾಟ!

01/03/2026 1:13 PM2 Mins Read
Recent News

ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದ: ‘ಇದು ಸಣ್ಣ ವ್ಯಾಪಾರಿಗಳ ಪಾಲಿನ ಮರಣಶಾಸನ’ ಎಂದ ರಾಹುಲ್ ಗಾಂಧಿ

01/03/2026 1:54 PM

ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಜಸ್ಟ್ ಈ ಸುಲಭ ಮನೆಮದ್ದುಗಳನ್ನು ಬಳಸಿ !

01/03/2026 1:41 PM

BREAKING : ಇರಾನ್ ಸೇನಾ ಹೆಲಿಕಾಪ್ಟರ್ ಪತನಗೊಂಡು ನಾಲ್ವರು ಸಾವು !

01/03/2026 1:32 PM

BREAKING : ಖಮನೈ ಹತ್ಯೆ ಖಂಡಿಸಿ ಪಾಕಿಸ್ತಾನದಲ್ಲಿ ಭಾರೀ ಹಿಂಸಾಚಾರ : ಅಮೆರಿಕ ಸೇನೆ ಗೋಲಿಬಾರಿಗೆ 8 ಮಂದಿ ಸಾವು | WATCH VIDEO

01/03/2026 1:29 PM
State News
KARNATAKA

ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಜಸ್ಟ್ ಈ ಸುಲಭ ಮನೆಮದ್ದುಗಳನ್ನು ಬಳಸಿ !

By kannadanewsnow5701/03/2026 1:41 PM KARNATAKA 2 Mins Read

ಇಂದಿನ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ವಯಸ್ಸಾದವರು ಮಾತ್ರವಲ್ಲದೆ ಯುವಕರೂ ಕೂಡ ಮೊಣಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂತರೆ…

Haveri Shiggaon Horrific Road Accident

ಹಸೆಮಣೆ ಏರಿದ 15 ದಿನಕ್ಕೇ ಜವರಾಯನ ಅಟ್ಟಹಾಸ: ಶಿಗ್ಗಾಂವಿ ಬಳಿ ಭೀಕರ ಅಪಘಾತಕ್ಕೆ ನವದಂಪತಿ ಬಲಿ!

01/03/2026 1:17 PM
Israel-Iran conflict heats up: Flights cancelled at Mangalore Airport, passengers stranded!

ಇಸ್ರೇಲ್-ಇರಾನ್ ಸಂಘರ್ಷದ ಬಿಸಿ : ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟ ರದ್ದು, ಪ್ರಯಾಣಿಕರ ಪರದಾಟ!

01/03/2026 1:13 PM

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿವೆ ಈ 6 ಪ್ರಮುಖ ನಿಯಮಗಳು | 1 March Rules Changes

01/03/2026 11:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.