ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕೆಲವು ಕಷ್ಟಗಳು ಇದ್ದೇ ಇರುತ್ತವೆ. ಇದರ ಹಿಂದೆ ಋಣಾತ್ಮಕ ಶಕ್ತಿಗಳ ಇರುತ್ತವೆ ಎಮಬ ನಂಬಿಕೆಯಿದೆ.  ಇದರಿಂದ ಮನೆಯ ನೆಮ್ಮದಿ, ಸಂತೋಷ ಹಾಳಾಗುತ್ತದೆ. ವಾಸ್ತವವಾಗಿ ಇದು ಮನೆಯಲ್ಲಿ ವಾಸ್ತು ದೋಷದಿಂದ ಸಂಭವಿಸುತ್ತದೆ.

ನಾವು ನಮ್ಮ ಮನೆಯಲ್ಲಿ ವಸ್ತುಗಳನ್ನು ಚೆನ್ನಾಗಿ ಅಲಂಕರಿಸುತ್ತೇವೆ. ಆದರೆ ವಸ್ತುಗಳು ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ಇಲ್ಲದ ಕಾರಣ, ವಾಸ್ತು ದೋಷಗಳು ಉಂಟಾಗಿ ಸಮಸ್ಯೆಗಳು ಪ್ರಾರಂಭಿಸುತ್ತವೆ. ಮನೆಯಲ್ಲಿ ಇರುವ ಕನ್ನಡಿ ಕೂಡ ಸಂತೋಷ ಮತ್ತು ಶಾಂತಿಗೆ ಸಂಬಂಧಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ರೀತಿಯ ಕನ್ನಡಿ ಇರಬೇಕು ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು?

ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಕನ್ನಡಿಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕನ್ನಡಿಯನ್ನು ಹಾಕುವುದು ಉತ್ತಮವೆಂದು ಪರಿಗಣಿಸಲಾಗಿದೆ. ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಕನ್ನಡಿಯ ಗಾತ್ರ ಹೇಗಿರಬೇಕು?

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಳವಡಿಸಲಾಗಿರುವ ಕನ್ನಡಿಯಲ್ಲಿ ನಿಮ್ಮ ಮುಖವು ಸ್ಪಷ್ಟವಾಗಿ ಗೋಚರಿಸುವಂತಿರಬೇಕು. ಕನ್ನಡಿ ಕೊಳಕು ,ಮಬ್ಬು ಇರದಂತೆ ನೋಡಿಕೊಳ್ಳಬೇಕು.

ಒಡೆದ ಕನ್ನಡಿಯನ್ನು ಬಳಸಬಾರದು

ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡುವುದು ಅಶುಭ. ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟರೆ ನಕಾರಾತ್ಮಕ ಶಕ್ತಿ ಹರಡುತ್ತದೆ. ಈ ಕಾರಣಕ್ಕಾಗಿ, ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡಬಾರದು. ಕನ್ನಡಿ ಒಡೆದರೆ ತಕ್ಷಣ ಅದನ್ನು ಬದಲಾಯಿಸಬೇಕು.

Health Tips‌ : ದಿಢೀರ್ ತೂಕ ಇಳಿಸುವ ಡಯಟ್ ಪ್ಲ್ಯಾನ್‌ ? ಈ ಪ್ರೋಟೀನ್ ಶೇಕ್ ತಯಾರಿಸುವ ವಿಧಾನ ಅನುಸರಿಸಿ| Weight Loss Diet

BIGG NEWS : ಜನವರಿ ಅಂತ್ಯದ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಸಿದ್ದರಾಮಯ್ಯ

BIGG NEWS: ಉತ್ತರಕರ್ನಾಟಕದಲ್ಲಿ ಸಿದ್ದೇಶ್ವರ ಶ್ರೀಗಳ ಪ್ರವಚನ ಪ್ರಸಿದ್ಧಿ; ಸ್ವಾಮೀಜಿ ಆತ್ಮಕ್ಕೆ ಶಾಂತಿ ಸಿಗಲಿ; ಮುರುಘರಾಜೇಂದ್ರ ಸ್ವಾಮಿ

Share.
Exit mobile version