ಬೆಂಗಳೂರು: ಸಂಸದ ಪ್ರಜ್ವರ್ ರೇವಣ್ಣ ಅವರನ್ನು ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಬಂಧಿಸೋದಕ್ಕೆ ಎಸ್ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ. ಆದ್ರೇ ವಿದೇಶಕ್ಕೆ ತೆರಳಿರುವಂತ ಅವರು ಪ್ರಜ್ವಲ್ ಎಲ್ಲಿದ್ದೀಯಪ್ಪಾ ಎನ್ನುವಂತೆ ಬ್ಲೂ ಕಾರ್ನರ್ ನೋಟಿಸ್ ನೀಡಿದ್ರೂ, ಬೆಂಗಳೂರಿಗೆ ವಾಪಾಸ್ ಆಗದೇ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದಾರೆ.
ಇಂದು ಬೆಳಿಗ್ಗೆ ಜರ್ಮನಿಯ ಮ್ಯೂನಿಕ್ ನಿಂದ ಬೆಂಗಳೂರಿಗೆ ಹೊರಡುವಂತ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಬರಲಿದ್ದಾರೆ ಎಂಬುದಾಗಿ ಟಿಕೆಟ್ ಬುಕ್ ಆಗಿರೋ ಮಾಹಿತಿ ಸಿಕ್ಕಿತ್ತು. ಜರ್ಮನಿಯಿಂದ ಬೆಂಗಳೂರಿಗೆ ಭಾರತೀಯ ಕಾಲಮಾನ ಮಧ್ಯಾಹ್ನ 12.20ಕ್ಕೆ ಟೇಕ್ ಆಫ್ ಆದಂತ ವಿಮಾನದ ಬೋರ್ಡಿಂಗ್ ಲೀಸ್ಟ್ ನಲ್ಲಿ ಪ್ರಜ್ವಲ್ ಹೆಸರೇ ಇಲ್ಲ.
ಜರ್ಮನಿಯಿಂದ ಬೆಂಗಳೂರಿಗೆ ಬರೋದಕ್ಕಾಗಿ ವಿಮಾನದ ಟಿಕೆಟ್ ಬುಕ್ ಮಾಡಿದ್ದಂತ ಪ್ರಜ್ವಲ್ ರೇವಣ್ಣ ಮಾತ್ರ, ಆ ವಿಮಾನವನ್ನು ಹತ್ತಲೇ ಇಲ್ಲ. ಟೇಕ್ ಆಫ್ ಆದಂತ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಇರಲಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಹೀಗಾಗಿ ಇಂದು ಕೂಡ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುತ್ತಿಲ್ಲ. ಅವರು ಎಸ್ಐಟಿ ಅಧಿಕಾರಿಗಳ ಜೊತೆಗೆ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದಾರೆ. ಇಂದು, ನಾಳೆ ಬೆಂಗಳೂರಿಗೆ ಬರ್ತಾರೆ ಬರ್ತಾ ಅಂತ ಕಾಯೋ ಪರಿಸ್ಥಿತಿ ತಂದಿಟ್ಟಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಪ್ರಜ್ವಲ್ ರೇವಣ್ಣ ಯಾರ ಸಂಪರ್ಕದಲ್ಲೂ ಇಲ್ಲ: JDS ಶಾಸಕ ಜಿ.ಟಿ ದೇವೇಗೌಡ ಸ್ಪಷ್ಟನೆ
BREAKING : ಗುಂಡು ಹಾರಿಸಿಕೊಂಡು `ಸಚಿನ್ ತೆಂಡೂಲ್ಕರ್’ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ’ ಆತ್ಮಹತ್ಯೆ