ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನನ್ನ ವಿರುದ್ಧದ ಕುಮಾರಸ್ವಾಮಿ ಆರೋಪಕ್ಕೆ ದಾಖಲೆ ಎಲ್ಲಿವೆ? ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.
“ಈಗ ಅವರ ಪಾದಯಾತ್ರೆ ವೇಳೆ ಬಿಜೆಪಿ ಕಾಲದಲ್ಲಿ ಆಗಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ನಾವು ಕೇಳಿರುವ ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ. ಕುಮಾರಸ್ವಾಮಿ ಅವರಿಗೆ ಪ್ರತ್ಯೇಕವಾಗಿ ಒಂದಷ್ಟು ಪ್ರಶ್ನೆ ಮಾಡಿದ್ದೇವೆ. ಅವರು ನನ್ನ ಬಗ್ಗೆ ನಮ್ಮ ಕುಟುಂಬದವರ ಬಗ್ಗೆ ಏನಾದರೂ ಟೀಕೆ ಮಾಡಲಿ. ಅವರು ನನ್ನ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ. ನಾನು ಅವರ ಸಹೋದರನ ಆಸ್ತಿ ಹೇಗೆ ಬಂತು, ಎಲ್ಲಿಂದ ಬಂತು ಎಂಬುದನ್ನು ಬಿಚ್ಚಿಡಬೇಕಲ್ಲವೇ? ನನ್ನ ಮೇಲೆ ಅವರು ಅನೇಕ ಆರೋಪ ಮಾಡುತ್ತಿದ್ದಾರೆ. ಆ ಆರೋಪಗಳಿಗೆ ದಾಖಲೆ ಬೇಕಲ್ಲವೇ? ಅವರ ಅಕ್ರಮಗಳ ಬಗ್ಗೆ ಮಾಧ್ಯಮಗಳೇ ವರದಿ ಮಾಡುತ್ತಿವೆಯಲ್ಲ” ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಪಲಾಯನವಾದಿಯಾಗಿದ್ದಾರಾ ಎಂದು ಕೇಳಿದಾಗ, “ಹಾಗೆಂದು ನಾನು ಹೇಳುತ್ತಿಲ್ಲ. ಕುಮಾರಸ್ವಾಮಿ ಅವರ ಬಾಯಲ್ಲಿ ಬಂದಿರುವ ಮಾತುಗಳನ್ನು ಮಂಡ್ಯದಲ್ಲಿ ತೋರಿಸಿದ್ದೇನೆ” ಎಂದು ತಿಳಿಸಿದರು.
ಬ್ಲಾಕ್ ಅಂಡ್ ವೈಟ್ ಟಿವಿ ಹಾಗೂ ವಿಸಿಆರ್ ಶಿವಕುಮಾರ್ ಆಸ್ತಿ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, “ಅವರು ಏನಾದರೂ ಹೇಳಿಕೊಳ್ಳಲಿ. ಈ ಬಗ್ಗೆ ಕನಕಪುರಕ್ಕೆ ಬಂದು ವಿಚಾರಿಸಲಿ. ನಮ್ಮ ತಂದೆ, ತಾತಾ ಹುರುಳಿ ಅಳೆಯುತ್ತಿದ್ದರೋ, ರಾಗಿ ಅಳೆಯುತ್ತಿದ್ದರೋ, ಕಡಲೇಕಾಯಿ ಅಳೆಯುತ್ತಿದ್ದರೋ ಅವೆಲ್ಲವೂ ಬೇರೆ ವಿಚಾರ. ನಾವು ಈಗಲೂ ತಿನ್ನುವುದು ಹುರುಳಿ, ಕಡಲೇಕಾಯಿ ಎಣ್ಣೆ ಹಾಗೂ ರಾಗಿಯನ್ನೇ. ನಾವು ಬೇರೆ ಬೆಳೆಯುತ್ತಿದೆವು ಎಂದು ಹೇಳುವುದಿಲ್ಲ. ನಮ್ಮ ಆಸ್ತಿ ಎಷ್ಟಿತ್ತು ಎಂದು ನಮ್ಮ ಊರಿನಲ್ಲಿ ಕೇಳಲಿ” ಎಂದು ತಿಳಿಸಿದರು.
ಕುಮಾರಸ್ವಾಮಿ ಅವರ ಪಾಲಿಗೆ ಶಿವಕುಮಾರ್ ಒನ್ ಲೈನ್ ಅಜೆಂಡಾ ಆಗಿರುವುದೇಕೆ ಎಂದು ಕೇಳಿದಾಗ, “ಅವರು ಅದನ್ನೇ ಅಜೆಂಡವಾಗಿ ಇಟ್ಟುಕೊಳ್ಳಲಿ ಬಿಡಿ” ಎಂದು ತಿಳಿಸಿದರು.
BREAKING: ಹಾವೇರಿಯಲ್ಲಿ ವೈದ್ಯರ ಮೇಲೆ ಕುಸಿದು ಬಿದ್ದ ‘ಪ್ರಾಥಮಿಕ ಆರೋಗ್ಯ ಕೇಂದ್ರ’ದ ಮೇಲ್ಛಾವಣಿ
BREAKING :`PG’ ವೈದ್ಯರ ಕಡ್ಡಾಯ ಸೇವಾ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ | Karnataka High Court