ಗದಗ: ತವರು ಮನೆ ಸೇರಿದ್ದಂತ ಪತ್ನಿಯನ್ನು ಕರೆದು ತರೋದಕ್ಕೆ ಪತಿಯೊಬ್ಬ ತೆರಳಿದ್ದನು. ಈ ವೇಳೆ ಪತ್ನಿಯ ಮನೆಯವರು ಥಳಿಸಿದ್ದರಿಂದ ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಗದಗದಲ್ಲಿ ನಡೆದಿದೆ.
ಗದಗ ತಾಲ್ಲೂಕಿನ ಬೆಳಧಡಿ ಗ್ರಾಮದಲ್ಲಿ ತವರು ಮನೆ ಸೇರಿದ್ದಂತ ಪತ್ನಿಯನ್ನು ಕರೆತೋರೋದಕ್ಕೆ ಮೋತಿಲಾಲ್(48) ತೆರಳಿದ್ದರು. ಈ ವೇಳೆಯಲ್ಲಿ ಪತ್ನಿಯ ಮನೆಯವರು ಮೋತಿಲಾಲ್ ಅವರನ್ನು ಥಳಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಪತ್ನಿ ಮನೆಯವರು ಥಳಿಸಿದ್ದರಿಂದ ಮನನೊಂದು ಮೋತಿಲಾಲ್(48) ಬೆಳಧಡಿ ಗ್ರಾಮದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೇ ಇದು ಕೊಲೆ ಎಂದು ಮೃತನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು. ಅದೇ ಗ್ರಾಮದ ಸೋನವ್ವ ತವರು ಮನೆಗೆ ಸೇರಿದ್ದಳು. ಪತ್ನಿ ಕರೆದುಕೊಂಡು ಬರಲು ಹೋದಾಗ ಜಗಳ ಆಗಿತ್ತು. ಮದ್ಯದ ಅಮಲಿನಲ್ಲಿ ಪತ್ನಿ ಕುಟುಂಬಸ್ಥರಿಗೆ ನಿಂದನೆ ಆರೋಪವನ್ನು ಮೋತಿಲಾಲ್ ಮಾಡಿದ್ದಾರೆ. ಇದರಿಂದ ಕೋಪಗೊಂಡು ಮೋತಿಲಾಲ್ ಗೆ ಮಂಜುನಾಥ್, ಗೋಪಾಲ್ ಥಳಿಸಿದ್ದಾರೆ. ಅಳಿಯಂದಿರು ಥಳಿಸಿದ್ದರಿಂದ ಮನನೊಂದು ಮೋತಿಲಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಗದಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
BREAKING: ಮೋದಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಪ್ಲ್ಯಾನ್ ಮಾಡಿದ್ದ NSUI ಮುಖಂಡರಿಗೆ ಪೊಲೀಸರಿಂದ ಗೃಹ ಬಂಧನ