Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಇಡೀ ಪ್ರದೇಶವೇ ಬೆಂಕಿಗೆ ಆಹುತಿಯಾಗಲಿದೆ’: ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ ಟ್ರಂಪ್‌ಗೆ ಇರಾನ್ ತಿರುಗೇಟು

06/04/2026 6:39 AM

​’ಗುಜರಾತ್‌ನ ಅವಿದ್ಯಾವಂತರನ್ನು ಮೋದಿ ಮರುಳು ಮಾಡಬಹುದು, ಕೇರಳದವರನ್ನಲ್ಲ’: ಖರ್ಗೆ ವಿವಾದಾತ್ಮಕ ಹೇಳಿಕೆ

06/04/2026 6:35 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಎಲ್ಲಾ `ಕೃಷಿ ಯಂತ್ರೋಪಕರಣಗಳ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ.!

06/04/2026 6:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾನು ಸದನಕ್ಕೆ ಮೊದಲ ಬಾರಿಗೆ ಹೋದಾಗ ಸರಿಯಾದ ‘ಶಿಕ್ಷಣ’ ಇಲ್ಲದೇ ಬರಬಾರದು ಅನಿಸಿತು: ಡಿಕೆಶಿ
KARNATAKA

ನಾನು ಸದನಕ್ಕೆ ಮೊದಲ ಬಾರಿಗೆ ಹೋದಾಗ ಸರಿಯಾದ ‘ಶಿಕ್ಷಣ’ ಇಲ್ಲದೇ ಬರಬಾರದು ಅನಿಸಿತು: ಡಿಕೆಶಿ

By kannadanewsnow0905/09/2024 5:06 PM

ಬೆಂಗಳೂರು: ನಾನು ಸದನಕ್ಕೆ ಮೊದಲ ಬಾರಿಗೆ ಹೋದಾಗ ಬಂಗಾರಪ್ಪ, ರಾಮಕೃಷ್ಣ ಹೆಗಡೆ, ನಂಜೇಗೌಡರು ಸೇರಿದಂತೆ ಅನೇಕ ಮಹಾನುಭಾವರು ಇದ್ದರು. ಅವರ ಮಾತು, ವಿಚಾರ ನೋಡಿದಾಗ ಸರಿಯಾದ ಶಿಕ್ಷಣ ಇಲ್ಲದೆ ನಾವು ಸದನಕ್ಕೆ ಬರಬಾರದು ಎಂದು ನನಗೆ ಅನಿಸಿತು ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಿಕ್ಷಕರ ದಿನ, ರಾಜೀವ್ ಗಾಂಧಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತನಾಡಿದರು.

ಜನ ರಾಜಕಾರಣಿಗಳನ್ನು ಬೇಗ ಮರೆಯುತ್ತಾರೆ. ಆದರೆ ಗುರುಗಳನ್ನು ಬೇಗ ಮರೆಯುವುದಿಲ್ಲ. ಅವರಿಗೆ ನೀಡಬೇಕಾದ ಗೌರವ ನೀಡಲಾಗುವುದು. ನಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಕರನ್ನು ಮರೆಯುವುದಿಲ್ಲ. ಶಿಕ್ಷಕರ ಮೇಲೆ ವಿಶೇಷ ನಂಬಿಕೆ ವಿಶ್ವಾಸ ಇರುತ್ತದೆ. ಮಕ್ಕಳು ಮನೆಯಲ್ಲಿ ತಂದೆ ತಾಯಿ ಮಾತು ಕೇಳದಿದ್ದರೂ ಶಿಕ್ಷಕರು ಹೇಳಿದ್ದನ್ನು ಕೇಳುತ್ತಾರೆ ಎಂದರು.

ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ರಾಜಕಾರಣಿ ಎಂದು ಅನೇಕ ಬಾರಿ ಹೇಳಿದ್ದೇನೆ. ನಾನು ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲ. 47ನೇ ವಯಸ್ಸಿಗೆ ಪದವಿ ಪಡೆದೆ. ಶಿಕ್ಷಣದ ಬೆಲೆ ನನಗೆ ಅರಿವಿದೆ. ನಾನು ಸದನಕ್ಕೆ ಮೊದಲ ಬಾರಿಗೆ ಹೋದಾಗ ಬಂಗಾರಪ್ಪ, ರಾಮಕೃಷ್ಣ ಹೆಗಡೆ, ನಂಜೇಗೌಡರು ಸೇರಿದಂತೆ ಅನೇಕ ಮಹಾನುಭಾವರು ಇದ್ದರು. ಅವರ ಮಾತು, ವಿಚಾರ ನೋಡಿದಾಗ ಸರಿಯಾದ ಶಿಕ್ಷಣ ಇಲ್ಲದೆ ನಾವು ಸದನಕ್ಕೆ ಬರಬಾರದು ಎಂದು ನನಗೆ ಅನಿಸಿತು ಎಂದು ಹೇಳಿದರು.

ಐಟಿ ಬಿಟಿ ಕ್ಷೇತ್ರದಲ್ಲಿ ರಾಜೀವ್ ಗಾಂಧಿ ಅವರ ಕೊಡುಗೆಯಿಂದ ಇಂದು ನಮಗೆ ದೊಡ್ಡ ಶಕ್ತಿ ಬಂದಿದ್ದು, ಫೋನ್ ನಲ್ಲಿ ನಮಗೆ ಎಲ್ಲಾ ಮಾಹಿತಿ ಸಿಗಲಿದೆ. ಈಗ ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಶಿಕ್ಷಣ ನೀಡಬೇಕು. ಬೆಂಗಳೂರು, ಕರ್ನಾಟಕ ದೇಶದಲ್ಲೇ ಉನ್ನತ ಶಿಕ್ಷಣ ವ್ಯವಸ್ಥೆ ಇದೆ. ಇಲ್ಲಿ ಓದಿದ ಎಂಜಿನಿಯರ್, ಡಾಕ್ಟರ್ ಗಳು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಇಂತಹ ಶಿಕ್ಷಣ ವ್ಯವಸ್ಥೆ ಇದೆ ಎಂದರು.

ಶಿಕ್ಷಣದಲ್ಲಿ ಏನಾದರೂ ಬದಲಾವಣೆ ತರಬೇಕು ಎಂದು ತೀರ್ಮಾನಿಸಿದ್ದೇನೆ. ಪಂಚಾಯ್ತಿ ಮಟ್ಟದಲ್ಲಿ ಸರ್ಕಾರದ ಹಣ ವಿನಿಯೋಗಿಸದೆ ಖಾಸಗಿ ಕಂಪನಿಗಳ ಸಿಎಸ್ಆರ್ ನಿಧಿಯಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುವುದು. ಈ ಶಾಲೆಗಳನ್ನು ಖಾಸಗಿ ಶಾಲೆಯವರು ಜವಾಬ್ದಾರಿ ವಹಿಸಿಕೊಂಡು ಶಿಕ್ಷಕರ ಕೊರತೆ ಇದ್ದರೆ ಶಿಕ್ಷಕರನ್ನು ನೀಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ವಿಶೇಷ ಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಇದಕ್ಕಾಗಿ ರಾಜ್ಯದಲ್ಲಿ ಬರುವ ₹8800 ಕೋಟಿ ಸಿಎಸ್ ಆರ್ ನಿಧಿಯನ್ನು ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ಶಾಲೆಗಳ ನಿರ್ಮಾಣ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುವಂತೆ ಮನವಿ ಮಾಡಲಾಗಿದೆ. ಇದಕ್ಕಾಗಿ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.

ನಮ್ಮ ಜಿಲ್ಲೆಯಲ್ಲಿ 20 ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ನಮ್ಮ ಹಳ್ಳಿಯ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಶಕ್ತಿ ತುಂಬಲಾಗುವುದು. 10ನೇ ತರಗತಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಾಲಕಿ ಮೊದಲ ಸ್ಥಾನ ಪಡೆದಿದ್ದಾಳೆ. ಗ್ರಾಮೀಣ ಭಾಗದ ಮಕ್ಕಳು ಕೂಡ ಉನ್ನತ ವಿದ್ಯಾಭ್ಯಾಸ ಮಾಡುವ ಸಾಮರ್ಥ್ಯವಿದ್ದು ಅವರಿಗೆ ನಾವು ಪ್ರೋತ್ಸಾಹ, ಉತ್ತೇಜನ ನೀಡಬೇಕು ಎಂದರು.

ನಮ್ಮ ಪಕ್ಷದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಿಕ್ಷಣ ಕ್ಷೇತ್ರದಿಂದ ನಮ್ಮ ಪಕ್ಷದಲ್ಲಿ ಪ್ರತಿನಿಧಿಗಳು ಇದ್ದಾರೆ. ಈಗ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ. ತ್ರೇತಾಯುಗದಲ್ಲಿ ಶಿಕ್ಷಕರು ಶಿಷ್ಯರಿಗೆ ಜಂಗಿಸಿ ವಿದ್ಯೆ ಕಲಿಸುತ್ತಿದ್ದರು, ದ್ವಾಪರ ಯುಗದಲ್ಲಿ ಗುರು ಶಿಷ್ಯರಿಗೆ ದಂಡಿಸಿ ವಿದ್ಯೆ ಕಲಿಸುತ್ತಿದ್ದರು. ಆದರೆ ಕಲಿಯುಗದಲ್ಲಿ ಗುರು ಶಿಷ್ಯರಿಗೆ ವಂದಿಸಿ ವಿದ್ಯೆ ಕಲಿಸುವಂತಾಗಿದೆ. ಹೀಗಾಗಿ ಈ ಕಾಲಘಟ್ಟದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಶಿಕ್ಷಕರ ಜತೆ ನಿಲ್ಲಲಿದೆ. ನೀವು ಪಕ್ಷದ ಆಧಾರಸ್ತಂಭ ಎಂದು ಅವರು ಹೇಳಿದರು.

ನಕಲಿ ವಿದ್ಯಾರ್ಥಿಗಳನ್ನು ದಾಖಲಿಸಿದ 27 ಶಾಲೆಗಳಿಗೆ ಸಿಬಿಎಸ್ಇ ಶೋಕೇಸ್ ನೋಟಿಸ್ | CBSE issues showcase notice

ಭಾಗ್ಯಲಕ್ಷ್ಮಿ ಯೋಜನೆಯ ‘ಸೀರೆ ವಿತರಣೆ’ಯಲ್ಲಿ ಅಕ್ರಮ: ‘SIT ತನಿಕೆ’ಗೆ ಕೋರಿ ಸಿಎಂಗೆ ‘ರಮೇಶ್ ಬಾಬು’ ಪತ್ರ

ಕೇರಳದ ‘ಹೇಮಾ’ ಸಮಿತಿ ಮಾದರಿ ಸಮಿತಿ ರಚಿಸಿ : ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಮಾಡಿದ ‘ಫೈರ್’

Share. Facebook Twitter LinkedIn WhatsApp Email

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಎಲ್ಲಾ `ಕೃಷಿ ಯಂತ್ರೋಪಕರಣಗಳ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ.!

06/04/2026 6:30 AM2 Mins Read

ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ನಾಳೆ `ವಿಶೇಷ ಸಾಂದರ್ಭಿಕ ರಜೆ’ ಮಂಜೂರು

06/04/2026 6:29 AM1 Min Read

SHOCKING : ರಾಜ್ಯದಲ್ಲಿ ‘ಬೈಕ್ ವೀಲಿಂಗ್, ಸ್ಟಂಟ್’ ಗೆ 3 ವರ್ಷಗಳಲ್ಲಿ 27 ಮಂದಿ ಬಲಿ : 1.77 ಕೋಟಿ ರೂ. ದಂಡ ವಸೂಲಿ.!

06/04/2026 6:24 AM1 Min Read
Recent News

‘ಇಡೀ ಪ್ರದೇಶವೇ ಬೆಂಕಿಗೆ ಆಹುತಿಯಾಗಲಿದೆ’: ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ ಟ್ರಂಪ್‌ಗೆ ಇರಾನ್ ತಿರುಗೇಟು

06/04/2026 6:39 AM

​’ಗುಜರಾತ್‌ನ ಅವಿದ್ಯಾವಂತರನ್ನು ಮೋದಿ ಮರುಳು ಮಾಡಬಹುದು, ಕೇರಳದವರನ್ನಲ್ಲ’: ಖರ್ಗೆ ವಿವಾದಾತ್ಮಕ ಹೇಳಿಕೆ

06/04/2026 6:35 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಎಲ್ಲಾ `ಕೃಷಿ ಯಂತ್ರೋಪಕರಣಗಳ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ.!

06/04/2026 6:30 AM

ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ನಾಳೆ `ವಿಶೇಷ ಸಾಂದರ್ಭಿಕ ರಜೆ’ ಮಂಜೂರು

06/04/2026 6:29 AM
State News
KARNATAKA

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಎಲ್ಲಾ `ಕೃಷಿ ಯಂತ್ರೋಪಕರಣಗಳ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ.!

By kannadanewsnow5706/04/2026 6:30 AM KARNATAKA 2 Mins Read

ಬೆಂಗಳೂರು: ಕೃಷಿ ಚಟುವಟಿಕೆಗಳನ್ನು ಆಧುನೀಕರಿಸಲು ಮತ್ತು ರೈತರ ಶ್ರಮವನ್ನು ಕಡಿಮೆ ಮಾಡುವ ಉದ್ದೇಶದಿಂದ, ಕೃಷಿ ಇಲಾಖೆಯು ವಿವಿಧ ಕೃಷಿ ಯಂತ್ರೋಪಕರಣಗಳನ್ನು…

ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ನಾಳೆ `ವಿಶೇಷ ಸಾಂದರ್ಭಿಕ ರಜೆ’ ಮಂಜೂರು

06/04/2026 6:29 AM

SHOCKING : ರಾಜ್ಯದಲ್ಲಿ ‘ಬೈಕ್ ವೀಲಿಂಗ್, ಸ್ಟಂಟ್’ ಗೆ 3 ವರ್ಷಗಳಲ್ಲಿ 27 ಮಂದಿ ಬಲಿ : 1.77 ಕೋಟಿ ರೂ. ದಂಡ ವಸೂಲಿ.!

06/04/2026 6:24 AM

BIG NEWS : ರಾಜ್ಯದಲ್ಲಿ 4.25 ಲಕ್ಷ ಕುಬ್ಜ ಮಕ್ಕಳು ಪತ್ತೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವರದಿ

06/04/2026 6:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.