ಬೆಂಗಳೂರು: ದಿನೇ ದಿನೇ ವಾಟ್ಸಾಪ್ ಬಳಕೆ ಹೆಚ್ಚುತ್ತಿದ್ದಂತೆ, ಅದರೊಟ್ಟಿಗೆ ಕ್ರೈಂಗಳು ಕೂಡ ಹೆಚ್ಚಾಗುತ್ತಿವೆ. ನೀವು ವಾಟ್ಸಾಪ್ ಬಳಕೆ ಮಾಡ್ತಿದ್ದರೇ, ಏನಾದ್ರೂ ಲೈಂಗಿಕ ವಂಚನೆ ಕೃತ್ಯ ಎಸಗಿದ್ರೇ ನಿಮ್ಮನ್ನು ಬಂಧಿಸೋದು ಗ್ಯಾರಂಟಿ. ಸೋ ಎಚ್ಚರಿಕೆ ವಹಿಸೋದು ಮರೆಯಬೇಡಿ. ಅದ್ಯಾಕೆ.? ಹೇಗೆ ಅಂತ ಮುಂದೆ ಸುದ್ದಿ ಓದಿ.
ಬೆಂಗಳೂರು ನಗರ ಉತ್ತರ ವಿಭಾಗ, ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆಗೆ ಪಿರಾದುದಾರರು ದಿನಾಂಕ: 01-11-2023 ರಂದು ಹಾಜರಾಗಿ ದೂರನ್ನು ನೀಡಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಕೆನರಾ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಯಾರೋ ಅಪರಿಚಿತರು ಅನಿತಾ ಎಂಬ ಹುಡುಗಿ ಹೆಸರಿನಲ್ಲಿ ಒಂದು ಮೊಬೈಲ್ ನಂಬರಿನ ಮೂಲಕ ದೂರುದಾರರನ್ನು ಸಂಪರ್ಕಿಸಿರುತ್ತಾರೆ. ಈ ರೀತಿ ಒಂದು ತಿಂಗಳಿನಿಂದ ದೂರುದಾರರಿಗೆ ಕರೆ ಮಾಡಿ ಅನೈತಿಕ ಸಂಬಂಧದ ಸಂದೇಶವನ್ನು ಕಳುಹಿಸಿರುತ್ತಾರೆ. ನಂತರ ಅನೈತಿಕ ಸಂಬಂಧದಲ್ಲಿರುವ ಸಂದೇಶಗಳನ್ನು ವೈರಲ್ ಮಾಡುವುದಾಗಿ ದೂರುದಾರರಿಗೆ ಬೆದರಿಸಿ, ಹಂತ ಹಂತವಾಗಿ ಒಟ್ಟು 1,10,000/- ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆಂದು ನೀಡಿದ ದೂರನ್ನು ಪಡೆದು ಐ.ಟಿ ಆಕ್ಟ್ ರೀತ್ಯ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಸೆನ್ ಪೊಲೀಸ್ರು. ವ್ಯಕ್ತಿಯೊಬ್ಬ ಅನಿತಾ ಎಂಬ ಹೆಸರಿನಲ್ಲಿ ನಕಲಿ ವ್ಯಾಟ್ಸಪ್ ಖಾತೆಯನ್ನು ಕ್ರಿಯೇಟ್ ಮಾಡಿರುವುದನ್ನು ಖಚಿತ ಪಡಿಸಿಕೊಂಡಿರುತ್ತಾರೆ. ಆ ಖಾತೆಗೆ ಹುಡುಗಿಯ ಬಾವಚಿತ್ರವನ್ನು ಬಳಕೆ ಮಾಡಿಕೊಂಡು ಪಿರ್ಯಾದಿಯೊಂದಿಗೆ ಆ ಹುಡುಗಿ ಹೆಸರಿನಲ್ಲಿ ಹುಡುಗಿಯರು ಚಾಟ್ ಮಾಡುವ ರೀತಿಯಲ್ಲಿ ಚಾಟ್ ಮಾಡಿ, ಆತನ ಫೋಟೋಗಳನ್ನು ಸಂಗ್ರಹಣೆ ಮಾಡಿಕೊಂಡಿರುತ್ತಾನೆ. ನಂತರ ಆತನ ಫೋಟೋವನ್ನು ಮಾರ್ಘ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಮಾರ್ಫ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹೆದರಿಸಿ, ಪಿರ್ಯಾದುದಾರರಿಂದ ಒಟ್ಟು ಕೆ 1,10,000/- (ಒಂದು ಲಕ್ಷದ ಹತ್ತು ಸಾವಿರ ರೂಪಾಯಿಗಳನ್ನು ಹಣವನ್ನು ವಸೂಲಿ ಮಾಡಿಕೊಂಡಿರುತ್ತಾನೆ.
ನಂತರ ವಸೂಲಿ ಮಾಡಿದ ಹಣವನ್ನು ಸ್ನೇಹಿತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು, ಆ ನಂತರ ಎ.ಟಿ.ಎಂ ಮೂಲಕ ಡ್ರಾ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಿರುತ್ತಾನೆ. ಈ ರೀತಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ ನಡೆದ ಹಣಕಾಸಿನ ವಹಿವಾಟಿನಿಂದ ಹಾಗೂ ತಾಂತ್ರಿಕ ಮಾಹಿತಿಯನ್ನಾಧರಿಸಿ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆತನಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಪ್ರಕರಣವನ್ನು ಸೈದುಲು ಆಡಾವತ್ ಐ.ಪಿ.ಎಸ್, ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ ಮೇರಿ ಶೈಲಜ, ಎಸಿಪಿ ಯಶವಂತಪುರ ಉಪ ವಿಭಾಗ ಮತ್ತು ಶಿವರತ್ನ ಎಸ್, ಪೊಲೀಸ್ ಇನ್ಸ್ಪೆಕ್ಟರ್, ಸಿ.ಇ.ಎನ್, ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿರವರುಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ರಾಮ ಮಂದಿರ ‘ಪ್ರಾಣ’ ಪ್ರತಿಷ್ಠಾಪನೆ: 11 ದಿನಗಳ ವಿಶೇಷ ಸಂದೇಶ ಬಿಡುಗಡೆ ಮಾಡಿದ ‘ಪ್ರಧಾನಿ ಮೋದಿ’
ಕಲಬುರ್ಗಿಯಲ್ಲಿ ‘KSRTC ಬಸ್-ಬೈಕ್’ ನಡುವೆ ಭೀಕರ ಅಪಘಾತ: ‘ಇಬ್ಬರು ಸವಾರ’ರು ಸ್ಥಳದಲ್ಲೇ ಸಾವು