ನವದೆಹಲಿ: ಭಾರತ ಸೇರಿದಂತೆ ವಿಶ್ವದ ಹಲವೆಡೆ ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಬಳಕೆದಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿ ಎಂಬುದಾಗಿ ವರದಿಯಾಗಿದೆ.
ವಾಟ್ಸಾಪ್ ಮತ್ತು ಫೇಸ್ಬುಕ್ ಮೆಸೆಂಜರ್ ಶುಕ್ರವಾರ ಸ್ಥಗಿತಗೊಂಡಿವೆ. ಆನ್ಲೈನ್ ಸ್ಥಗಿತಗಳನ್ನು ಪತ್ತೆಹಚ್ಚುವ ಪ್ಲಾಟ್ಫಾರ್ಮ್ ಡೌನ್ಡೆಟೆಕ್ಟರ್, ಈ ಬಗ್ಗೆ ಯುನೈಟೆಡ್ ಸ್ಟೇಟ್ಸ್ನಲ್ಲಿ ವಾಟ್ಸಾಪ್ ಬಗ್ಗೆ 4000 ಕ್ಕೂ ಹೆಚ್ಚು ವರದಿಗಳನ್ನು ಮತ್ತು ಭಾರತದಲ್ಲಿ 10,000 ಕ್ಕೂ ಹೆಚ್ಚು ವರದಿಗಳನ್ನು ತೋರಿಸಿದೆ.
ಈ ಸಮಸ್ಯೆಗಳಿಗೆ ಮೆಟ್ಸ್ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೇ ಫೇಸ್ ಬುಕ್ ಹಾಗೂ ವಾಟ್ಸ್ ಆಪ್ ಸೇವೆ ಸ್ಥಗಿತದಿಂಗಾಗಿ ಬಳಕೆದಾರರು ಸಮಸ್ಯೆಗೆ ಸಿಲುಕುವಂತೆ ಆಗಿದೆ.
BREAKING : ಚಿಕ್ಕಬಳ್ಳಾಪುರಲ್ಲಿ ಭೀಕರ ಮರ್ಡರ್ : ಕ್ಷುಲ್ಲಕ ಕಾರಣಕ್ಕೆ ಬಾರ್ ಸಪ್ಲೈಯರ್ ನನ್ನು ಕೊಂದ ದುಷ್ಕರ್ಮಿಗಳು