ಮೇರಠ್ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮೇರಠ್ ನಿಂದ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಮೇರಠ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾವು ಮೂರನೇ ಅವಧಿಗೆ ತಯಾರಿ ಪ್ರಾರಂಭಿಸಿದ್ದೇವೆ. ನಾವು ಮುಂದಿನ 5 ವರ್ಷಗಳ ಮಾರ್ಗಸೂಚಿಯನ್ನು ರೂಪಿಸುತ್ತಿದ್ದೇವೆ. ಹೊಸ ಸರ್ಕಾರ ರಚನೆಯಾದ ನಂತರದ ಮೊದಲ 100 ದಿನಗಳಲ್ಲಿ ನಾವು ಯಾವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಕೆಲಸವು ವೇಗವಾಗಿ ನಡೆಯುತ್ತಿದೆ. ಯಾರು ಸಂಸದರಾಗುತ್ತಾರೆ ಅಥವಾ ಯಾರು ಆಗುವುದಿಲ್ಲ ಎಂಬುದು ಚುನಾವಣೆಯಲ್ಲ. 2024ರ ಚುನಾವಣೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕಾಗಿ ನಡೆಯಲಿದೆ. ಈ 10 ವರ್ಷಗಳಲ್ಲಿ, ನೀವು ಈಗಷ್ಟೇ ಟ್ರೇಲರ್ ನೋಡಿದ್ದೀರಿ, ಇನ್ಮುಮೇಲೆ ಪ್ರಗತಿ ನೋಡುತ್ತೀರಿ ಎಂದರು.
#WATCH उत्तर प्रदेश: प्रधानमंत्री मोदी ने मेरठ में कहा, "हमारी सरकार तीसरे कार्यकाल की तैयारी में अभी से जुट गई है। हम आने वाले 5 साल का रोडमैप बना रहे हैं। नई सरकार बनने के बाद पहले 100 दिनों में हमें कौनसे बड़े फैसले लेने है इसपर तेजी से काम चल रहा है… पिछले 10 वर्षों में… pic.twitter.com/YR9AvY5xfo
— ANI_HindiNews (@AHindinews) March 31, 2024
2024 ರ ಜನಾದೇಶವು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಸೂಪರ್ ಪವರ್ ಆಗಿ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಇಂದು, ಭಾರತದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ವೇಗವಾಗಿ ನಿರ್ಮಿಸಲಾಗುತ್ತಿದೆ.
ಇಂದು, ಭಾರತವು ಮೂಲಸೌಕರ್ಯಗಳನ್ನು ನಿರ್ಮಿಸಲು ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ.
ಇಂದು, ಪ್ರತಿಯೊಂದು ಕ್ಷೇತ್ರದಲ್ಲೂ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ಇಂದು, ದೇಶದ ಮಹಿಳಾ ಶಕ್ತಿ ಹೊಸ ಸಂಕಲ್ಪಗಳೊಂದಿಗೆ ಮುಂದೆ ಬರುತ್ತಿದೆ. ಇಂದು ಭಾರತದ ವಿಶ್ವಾಸಾರ್ಹತೆ ಹೊಸ ಎತ್ತರದಲ್ಲಿದೆ, ಇಡೀ ಜಗತ್ತು ಭಾರತದತ್ತ ವಿಶ್ವಾಸದಿಂದ ನೋಡುತ್ತಿದೆ ಎಂದರು.