ಬೆಂಗಳೂರು: ಕರ್ನಾಟಕದಲ್ಲಿ ಅಧಿಕಾರದುದ್ದಕ್ಕೂ BJP ಮಾಡಿದ್ದು ಕೇವಲ ರಾಜ್ಯದ ಲೂಟಿಯಾಗಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ಪಕ್ಷವು, ಅಧಿಕಾರದುದ್ದಕ್ಕೂ ಬಿಜೆಪಿ ಮಾಡಿದ್ದು ಕೇವಲ ರಾಜ್ಯದ ಲೂಟಿ, ಈಗ ಜನಪರ ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕಿಸಲು ವಿಷಯಗಳೇ ಇಲ್ಲದೆ, ತಮ್ಮ ಅವಧಿಯ ಅಕ್ರಮ, ಅನಾಚಾರಗಳು ಬೆತ್ತಲಾಗುತ್ತವೆ ಎಂಬ ಆತಂಕದಲ್ಲಿ ವೈಯಕ್ತಿಕವಾಗಿ ಕಾಂಗ್ರೆಸ್ ನಾಯಕರ, ಸಚಿವರ ತೇಜೋವಧೆಗೆ ಇಳಿದು ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ, ಗ್ಯಾರಂಟಿ ಯೋಜನೆಗಳ ವಿರುದ್ಧ ವಿಷ ಕಾರುತ್ತಿದೆ ಎಂದು ಗುಡುಗಿದೆ.
ಭ್ರಷ್ಟಾಚಾರದ ಪಿತಾಮಹರಾದ ಬಿಜೆಪಿ ನಾಯಕರು ಅವರ ಘನ ಕಾರ್ಯಗಳ ಬಗ್ಗೆ ಕೇಳಿದರೆ ಮಾತ್ರ ಬೆನ್ನು ತಿರುಗಿಸಿ ಓಡುತ್ತಾರೆ ಎಂದು ಹೇಳಿದೆ.
ಹೆಣದ ಮೇಲೆ ಹಣ ಲೂಟಿ ಮಾಡಿದ ಸಾವಿರಾರು ಕೋಟಿ ಕೋವಿಡ್ ಹಗರಣ
ನೂರಾರು ಕೋಟಿ ಕೊಳ್ಳೆ ಹೊಡೆದ ಪಿಎಸ್‌ಐ ನೇಮಕಾತಿ ಅಕ್ರಮ
ಬೋವಿ ನಿಗಮದಲ್ಲಿ ₹87 ಕೋಟಿ ಹಗರಣ
ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ನಲ್ಲಿ ₹50 ಕೋಟಿಗೂ ಹೆಚ್ಚು ಅಕ್ರಮ
ಗಂಗಾ ಕಲ್ಯಾಣದಲ್ಲಿ ಯೋಜನೆಯಲ್ಲಿ ₹430 ಕೋಟಿಗೂ ಹೆಚ್ಚು ಅಕ್ರಮ
ಕಿಯೋನಿಕ್ಸ್ ನಲ್ಲಿ ₹400 ಕೋಟಿ ಹಗರಣ
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣ
ಬಿಟ್ ಕಾಯಿನ್ ಹಗರಣ
ಮೊಟ್ಟೆ, ಚಿಕ್ಕಿ, ಸ್ವೆಟರ್ ಹಗರಣ
KSDL ಹಗರಣ
ಪಟ್ಟಿ ದೊಡ್ಡದಿದೆ.. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ಅಧಿಕಾರದುದ್ದಕ್ಕೂ @BJP4Karnataka ಮಾಡಿದ್ದು ಕೇವಲ ರಾಜ್ಯದ ಲೂಟಿ, ಈಗ ಜನಪರ ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕಿಸಲು ವಿಷಯಗಳೇ ಇಲ್ಲದೆ, ತಮ್ಮ ಅವಧಿಯ ಅಕ್ರಮ, ಅನಾಚಾರಗಳು ಬೆತ್ತಲಾಗುತ್ತವೆ ಎಂಬ ಆತಂಕದಲ್ಲಿ ವೈಯಕ್ತಿಕವಾಗಿ ಕಾಂಗ್ರೆಸ್ ನಾಯಕರ, ಸಚಿವರ ತೇಜೋವಧೆಗೆ ಇಳಿದು ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ, ಗ್ಯಾರಂಟಿ ಯೋಜನೆಗಳ ವಿರುದ್ಧ ವಿಷ…
— Karnataka Congress (@INCKarnataka) January 5, 2025
ಕರ್ನಾಟಕದ ಗಂಡಸರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಬಾರದು: ಶಾಸಕ ಯತ್ನಾಳ್
ರಾಜ್ಯದ `ಕಾರ್ಮಿಕರಿಗೆ’ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!