ಒಬ್ಬ ಆರೋಗ್ಯವಂತ ವ್ಯಕ್ತಿಯ ತೂಕ ಎಷ್ಟಿರಬೇಕು. ಇನ್ನು ಇಷ್ಟು ಎತ್ತರವಿದ್ದ ವ್ಯಕ್ತಿಯ ತೂಕ ಎಷ್ಟಿರಬೇಕು. ವ್ಯಕ್ತಿಯ ಎತ್ತರಕ್ಕೂ ಹಾಗು ತೂಕಕ್ಕೂ ಏನಾದರೂ ಸಂಬಂಧ ಇದೆಯೇ..? ಅಥವಾ ಎತ್ತರಕ್ಕೆ ಅನುಗುಣವಾಗಿ ಎಷ್ಟು ತೂಕ ಇರಬೇಕು..? ಯಾವ ವಯಸ್ಸಿನಲ್ಲಿ ಎಷ್ಟು ತೂಕವಿದ್ದರೆ ಉತ್ತಮ? ಇಂತಹ ಗೊಂದಲಗಳು ಅನೇಕರಲ್ಲಿ ಇವೆ. ಇವುಗಳಿಗೆ ಉತ್ತರ ಕೊಡುವ ಪ್ರಯತ್ನವೇ ಈ ಲೇಖನ.
ನೀವು ಇದೇ ರೀತಿಯ ಗೊಂದಲ ಹೊಂದಿದ್ದರೆ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ವ್ಯಕ್ತಿಯ ತೂಕ ಎಷ್ಟು ಇರಬೇಕೆಂದು ನಾವು ನಿಮಗೆ ತಿಳಿಸುತ್ತೇವೆ.
ವೈದ್ಯಕೀಯ ಲೋಕದ ಪ್ರಕಾರ ಒಂದು ಮಗು ಜನಿಸಿದ ಸಮಯದಲ್ಲಿ ಅದು ಗಂಡಾಗಿದ್ದರೆ ಅದರ ತೂಕ 3.3 ಕೆಜಿ ಇರಬೇಕು. ಅದೇ ಹೆಣ್ಣುಮಗುವಾಗಿದ್ದರೆ 3.2 ಕೆಜಿ ಇರಬೇಕು.
ಅದೇ ರೀತಿಯಾಗಿ 3 ರಿಂದ 5 ತಿಂಗಳ ಗಂಡು ಮಗುವಿನ ತೂಕ 6 ಕೆಜಿ ಇರಬೇಕು. ಹೆಣ್ಣು ಮಗುವಿನ ತೂಕ 5.4 ಕೆಜಿಯ ಸಮೀಪದಲ್ಲಿರಬೇಕು.
ಒಂದು ವರ್ಷ ತುಂಬಿದ ಮಗುವಿನ ತೂಕ 9.2 ಕೆಜಿ ಇರಬೇಕು. ಹೆಣ್ಣಾಗಿದ್ದರೆ 8.6 ಕೆಜಿ ಹೊಂದಿರಬೇಕು.
10 ರಿಂದ 11 ವರ್ಷದ ಬಾಲಕರ ತೂಕ 31 ಕೆಜಿ ಇರಬೇಕು. ಬಾಲಕಿಯ ತೂಕ 30 ಕೆಜಿ ಸಮೀಪದಲ್ಲಿ ಇರಬೇಕು.
19 ವರ್ಷದಿಂದ 29 ವರ್ಷದೊಳಗಿನ ಪುರುಷರು ಎಂಭತ್ತು ಕೆಜಿ ಮತ್ತು ಮಹಿಳೆಯರು 73 ಕೆಜಿ ತೂಕವಿರಬೇಕು.
ವಯಸ್ಕರಲ್ಲಿ ಎತ್ತರಕ್ಕೆ ಅನುಗುಣವಾಗಿ ತೂಕ ಇದ್ದು 6 ಇಂಚು ಉದ್ದದ ವ್ಯಕ್ತಿಯ ಸಾಮಾನ್ಯ ತೂಕ 53 ರಿಂದ 67 ಕೆಜಿ ನಡುವೆ ಇರಬೇಕು.
5 ಅಡಿ 8 ಇಂಚು ಎತ್ತರದ ವ್ಯಕ್ತಿಯ ಸಾಮಾನ್ಯ ತೂಕವು 56 ರಿಂದ 71 ಕೆಜಿಯ ನಡುವೆ ಇರಬೇಕು.
5 ಅಡಿ 10 ಇಂಚು ಇರುವ ಸಾಮಾನ್ಯ ವ್ಯಕ್ತಿಯ ತೂಕ 59 ರಿಂದ 75 ಕೆಜಿ ಇರಬೇಕು.
BMI ಎಂದರೆ ಬಾಡಿ ಮಾಸ್ ಇಂಡೆಕ್ಸ್ ಇದರ ಆಧಾರದ ಮೇಲೆ ಕಡಿಮೆ ತೂಕ, ಸಾಮಾನ್ಯ ತೂಕ, ಅಧಿಕ ತೂಕ ಮತ್ತು ಬೊಜ್ಜು ಮುಂತಾದ ವಿವಿಧ ವಿಧಗಳಲ್ಲಿ ವರ್ಗೀಕರಿಸಬಹುದು.
ವಿಶ್ವ ಆರೋಗ್ಯ ಸಂಸ್ಥೆ ಬಿಎಂಐ ಹೇಳುವ ಪ್ರಕಾರ ವ್ಯಕ್ತಿಯ ತೂಕವನ್ನು ಕಿಲೋ ಗ್ರಾಂಗಳಲ್ಲಿ ಭಾಗಿಸಿ ಅವುಗಳ ಎತ್ತರದ ಚೌಕವನ್ನು ಮೀಟರ್‌ಗಳಲ್ಲಿ ಭಾಗಿಸಿ ಲೆಕ್ಕಮಾಡಲಾಗುತ್ತದೆ.