ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲವೆಂದರೆ ನೆಂಟರು ಸ್ನೇಹಿತರು ಕೇಳುವ ಪ್ರಶ್ನೆ ಕೆಲವೊಮ್ಮೆ ಮಾನಸಿಕವಾಗಿ ಹಿಂಸಿಸುತ್ತವೆ. ಮಗುವನ್ನು ಪಡೆಯಲು ದಂಪತಿಗಳು ಎಷ್ಟೇ ಪ್ರಯತ್ನ ಮಾಡಿದರೂ ಅವರಿಗೆ ಸಂತಾನ ಭಾಗ್ಯ ಕೂಡಿ ಬಂದಿರುವುದಿಲ್ಲ. ಇಂತಹ ಸಮಸ್ಯೆ ಎದುರಿಸುತ್ತಿರುವವರಿಗೆ ಇಲ್ಲಿ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಓದಿಕೊಳ್ಳಿ. ಹಾಗು ನಿಮ್ಮಾಕೆಗೆ ಗರ್ಭಧರಿಸಲು ಇನ್ನೂ ಕಷ್ಟ ಆಗುತ್ತಿದೆ ಎಂದೆ ಒಳ್ಳೆಯ ವೈದ್ಯರ ಹತ್ತಿರ ಇನ್ನೂ ಹೆಚ್ಚಿನ ಸೂಕ್ತವಾದ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳಿ.
ಮಕ್ಕಳನ್ನು ಪಡೆಯಲು ಹೆಣ್ಣು ಗಂಡಿನ ಇಬ್ಬರ ಆರೋಗ್ಯವೂ ತುಂಬಾ ಮುಖ್ಯವಾಗಿರುತ್ತದೆ. ಅದರಲ್ಲೂ ಗಂಡಿನ ವೀರ್ಯಾಣುಗಳ ಸಂಖ್ಯೆ ತುಂಬಾ ಮುಖ್ಯವಾಗುತ್ತದೆ. ಹೀಗೆ ಮಕ್ಕಳನ್ನು ಪಡೆಯಲು ನಿತ್ಯವೂ ಮಿಲನ ಮಹೋತ್ಸವ ಮಾಡುವುದು ಎಷ್ಟು ಸೂಕ್ತ. ಅಥವಾ ಆರೋಗ್ಯವಂತ ವೀರ್ಯಾಣುಗಳನ್ನು ಪಡೆಯಲು ಎಷ್ಟು ದಿನಕ್ಕೊಮ್ಮೆ ಮಿಲಕ್ರಿಯೆಯಲ್ಲಿ ತೊಡಗಬೇಕು ಎಂಬ ಬಗ್ಗೆ ತಿಳಿದುಕೊಳ್ಳೋಣ.
ವಿಜ್ಞಾನ ಮತ್ತು ವೈದ್ಯರು ಸಲಹೆ ನೀಡುವ ಪ್ರಕಾರ ನಿತ್ಯವೂ ಮಿಲನ ಮಹೋತ್ಸವ ಮಾಡಿದರೆ ಆರೋಗ್ಯವಂತ ವೀರ್ಯಾಣುಗಳನ್ನು ಉತ್ಪತ್ತಿಯಾಗುವುದಿಲ್ಲ. ಒಂದು ಬಾರಿ ಮಾಡಿದ ಮೇಲೆ ಸುಮಾರು 4-5ದಿನಗಳ ನಂತರ ಮಿಲನ ಕ್ರಿಯೆಯಲ್ಲಿ ತೊಡಗಿದರೆ ವೀರ್ಯಾಣುಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಹಾಗು ಸ್ವಲ್ಪ ದಿನಗಳ ಅಂತರದಲ್ಲಿ ಮಿಲನ ಮಹೋತ್ಸ ಕ್ರಿಯೆಯಲ್ಲಿ ತೊಡಗಿದರೆ ನಿಮ್ಮ ಲೈಂಗಿಕ ಆಸಕ್ತಿ ಕೂಡ ಹೆಚ್ಚಿರುತ್ತದೆ.
ಇನ್ನು ಆರೋಗ್ಯವಂತ ವೀರ್ಯಾಣುಗಳನ್ನು ಪಡೆಯಬೇಕೆಂದರೆ ಹೊಟ್ಟೆಗೆ ಏನು ಸೇವಿಸಬೇಕೆಂದರೆ, ರಾತ್ರಿ ಒಂದೆರಡು ಬಾದಾಮಿಯನ್ನು ನೀರಿನಲ್ಲಿ ನೆನಸಿಟ್ಟು ಬೆಳಗ್ಗೆ ತಿನ್ನಿ. ನೆನಸಿಟ್ಟ ಬದಾಮಿಯಲ್ಲಿನ ಉತ್ತಮ ಹಾಗು ಅನೇಕ ಪೋಷಕಾಂಶಗಳು ನಿಮ್ಮ ಲೈಂಗಿಕ ಹಾಗು ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ಪ್ರತಿದಿನ ಮಲಗುವ ಮುನ್ನ ಒಂದು ಬಾಳೆಹಣ್ಣನ್ನು ತಿಂದು ಮಲಗುವುದರಿಂದ ವಿರ್ಯಾಣುಗಳ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು. ಬಾಳೆಹಣ್ಣಿನಲ್ಲಿರುವ ಪೌಷ್ಟಿಕಾಂಶವು ಶಿಶ್ನದ ರಕ್ತ ಸಂಚಾರವನ್ನು ಸರಿಯಾಗಿ ಆಗುವಂತೆ ಮಾಡುತ್ತದೆ.
ಇದೆಲ್ಲಕಿಂತ ಹೆಚ್ಚಾಗಿ ಧೂಮಪಾನ, ಮಧ್ಯಪಾನದಿಂದ ಆದಷ್ಟು ದೂರವಿರಿ. ಹೊರಗಿನ ಕರಿದ ಪದಾರ್ಥ, ಜಂಗ್‌ಫುಡ್ ಬೇಡವೇಬೇಡ. ಪ್ರತಿನಿತ್ಯ ದೇಹವನ್ನು ದಂಡಿಸಿ. ವ್ಯಾಯಾಮ, ಯೋಗ ರೋಢಿಸಿಕೊಳ್ಳಿ.