ಕಲಬುರಗಿ : ಕಾಂಗ್ರೆಸ್ಸಿಗರು ಇಂದಿನ ಸಮಾವೇಶಕ್ಕೆ ಬಳಸಿದ ಹಣ ಯಾವುದು? ಅದರ ಲೆಕ್ಕ ಕೊಡಬೇಕು ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ
ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಅದು ಕಾಂಗ್ರೆಸ್ಸಿನ ಖಾತೆಯಿಂದ ಖರ್ಚಾದ ಹಣವೇ? ಅಥವಾ ನೀವು ಸರಕಾರದ ಬೊಕ್ಕಸದಿಂದ ಖರ್ಚು ಮಾಡಿದ್ದೀರಾ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಇದು ಮಹಾತ್ಮ ಗಾಂಧಿಯವರ ಕಾಲದ ಕಾಂಗ್ರೆಸ್ ಪಕ್ಷ ಅಲ್ಲ ಮಹಾತ್ಮ ಗಾಂಧಿ ಸಿದ್ಧಾಂತಕ್ಕೂ ಇವತ್ತಿನ ಗಾಂಧಿಗಳ ಕಾಂಗ್ರೆಸ್ಸಿನ ಸಿದ್ಧಾಂತಕ್ಕೂ ಅಜಗಜಾಂತರವಿದೆ. ಅವತ್ತಿನ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಯಾರು ಮದ್ಯಪಾನ ಮಾಡುತ್ತಿದ್ದರೋ ಅವರು ಸದಸ್ಯರಾಗುವ ಹಾಗಿರಲಿಲ್ಲ; ಇವತ್ತಿನ ಕಾಂಗ್ರೆಸ್ಸಿನವರು ರಾತ್ರಿಯಿಡೀ ಕುಡಿದು ಮಲಗಿದ್ದು, ಬೆಳಿಗ್ಗೆ ಸಮಾವೇಶ ಮಾಡುತ್ತಾರೆ ಎಂದು ಟೀಕಿಸಿದರು.
ಎಲ್ಲರೂ ಖಾದಿಧಾರಿಗಳಾಗಿ ಇರಬೇಕು ಎಂಬುದು ಹಳೆ ಕಾಂಗ್ರೆಸ್ಸಿನ ಸಿದ್ಧಾಂತ. ಇವತ್ತು ಶೇ 5- 10 ರಷ್ಟು ಖಾದಿಧಾರಿಗಳೂ ಅಲ್ಲಿ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಮಹಾತ್ಮ ಗಾಂಧಿಯವರು ಈ ಕಾಲದಲ್ಲಿ ಇದ್ದಿದ್ದರೆ, ಈ ಕಾಂಗ್ರೆಸ್ಸಿನವರನ್ನು ಅಟ್ಟಾಡಿಸಿ, ಕಾಂಗ್ರೆಸ್ಸಿನಿಂದ ಹೊರಕ್ಕೆ ಓಡಿಸುತ್ತಿದ್ದರು ಎಂದು ತಿಳಿಸಿದರು.
ಕಾಂಗ್ರೆಸ್ ಸುಡುವ ಮನೆ ಎಂದಿದ್ದ ಡಾ.ಅಂಬೇಡ್ಕರರು ಇಂಥ ಪರಿಸ್ಥಿತಿಯಲ್ಲಿ ಇಲ್ಲಿ ಕಾಂಗ್ರೆಸ್ಸಿನ ಒಂದು ಸಮಾವೇಶ ನಡೆಯುತ್ತಿದೆ. ಇದು ಗಾಂಧಿ ತತ್ವಗಳ ವಿರೋಧಿ ಕಾಂಗ್ರೆಸ್ಸಿನ ಸಮಾವೇಶ ಎಂದ ಅವರು, ಜೈ ಭೀಮ್ ಎಂದಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರರು ಯಾವತ್ತಾದರೂ ಕಾಂಗ್ರೆಸ್ಸಿನವರಾಗಿದ್ದರೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸುಡುವ ಮನೆ ಎಂದವರು, ಕಾಂಗ್ರೆಸ್ಸಿನ ಮೊದಲ ಕ್ಯಾಬಿನೆಟ್ನಿಂದ ರಾಜೀನಾಮೆ ಕೊಟ್ಟು ಹೊರಕ್ಕೆ ಹೋದವರು ಬಾಬಾ ಸಾಹೇಬ ಅಂಬೇಡ್ಕರರು ಎಂದು ಗಮನ ಸೆಳೆದರು.
ಅಂಬೇಡ್ಕರರ ತತ್ವಗಳ ವಿರೋಧಿ, ಅವರನ್ನು ಜೀವಿತಾವಧಿಯಲ್ಲಿ ಅವಮಾನಿಸಿದ್ದ, ಚುನಾವಣೆಗಳಲ್ಲಿ ಸೋಲಿಸಿದ್ದ, ಅವರು ಗೆದ್ದ ಸ್ಥಳವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟ ಕಾಂಗ್ರೆಸ್ ಪಕ್ಷವು ಇವತ್ತು ಮತಬ್ಯಾಂಕಿಗಾಗಿ ಈ ನಾಟಕ ಮಾಡುತ್ತಿದೆ. ದಲಿತ ಸಮುದಾಯಗಳನ್ನು ಸೆಳೆಯಲು ಜೈ ಭೀಮ್ ಘೋಷಣೆ ಮಾಡಿದೆ ಎಂದು ಟೀಕಿಸಿದರು.
ಸಂವಿಧಾನಕ್ಕೆ ದ್ರೋಹ ಮಾಡಿದ್ದರೆ, ಅನ್ಯಾಯ ಮಾಡಿದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ತಿಳಿಸಿದ ಅವರು, ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಬಾಬಾ ಸಾಹೇಬ ಅಂಬೇಡ್ಕರರು ಬರೆದ ಸಂವಿಧಾನವನ್ನು ತಿರುಚಿ, 1975-76 ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿ ಸಂವಿಧಾನಕ್ಕೆ ಘೋರ ಅಪರಾಧ ಮಾಡಿದ ಪಕ್ಷ ಕಾಂಗ್ರೆಸ್ ಎಂದು ಆಕ್ಷೇಪಿಸಿದರು.
BIG NEWS: ಬೆಂಗಳೂರಲ್ಲಿ ಆಸ್ತಿ ತೆರಿಗೆ ಬಾಕಿ ಪಾವತಿ ಮಾಡದವರಿಗೆ BBMP ಬಿಗ್ ಶಾಕ್: ಸ್ಥಿರ ಆಸ್ತಿಗಳ ಹರಾಜು
BREAKING : ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ನಟ ‘ಸೈಫ್ ಅಲಿಖಾನ್’ ಡಿಸ್ಚಾರ್ಜ್ : ಫೋಟೋ ವೈರಲ್ | Saif Ali Khan
BREAKING : ಬೆಂಗಳೂರಲ್ಲಿ ವಕೀಲೆಯ ಮೇಲೆ ‘ಲೈಂಗಿಕ ದೌರ್ಜನ್ಯ’ ನಡೆಸಿ ಹಲ್ಲೆ : IT ಅಧಿಕಾರಿಯ ವಿರುದ್ಧ ‘FIR’ ದಾಖಲು!