ಬೆಂಗಳೂರು: ಆರ್ ಸಿ ಬಿ ಮಾರ್ಕೆಟಿಂಗ್ ಮ್ಯಾನೇಜರ್ ನಿಖಿಲ್ ಸೋಸಲೆ ಪತ್ನಿ ಹೈಕೋರ್ಟ್ ಗೆ ತಮ್ಮ ಪತಿ ಬಂಧನ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ಅದರಲ್ಲಿ ತಪ್ಪೇನಿದೆ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಅವರು ಬಿಜೆಪಿಯವರು ನನ್ನ ಕಡೆ ಬೊಟ್ಟು ಮಾಡುತ್ತಿದ್ದಾರೆ. ನಾನು ಏನು ಮಾಡಿದ್ದೇನೆ? ನಾನೇನಾದ್ರೂ ಕ್ರೈಂ ಮಾಡಿದ್ದೇನಾ? ಕೆಎಸಿಎ ಅವರು ನಮಗೆ ಮನವಿ ಮಾಡಿಕೊಂಡಿದ್ದರು. 10 ನಿಮಿಷದಲ್ಲಿ ಕ್ಲೋಸ್ ಮಾಡುತ್ತೇವೆ ಎಂದು ಹೇಳಿದ್ರು. ಕ್ರೀಡಾಂಗಣಕ್ಕೆ ಹೋಗಿದ್ದು ಏನ್ ತಪ್ಪಿದೆ. ಬೆಂಗಳೂರು ಮಿನಿಸ್ಟರ್ ಆಗಿಯೇ ನಾನು ಹೋಗಿದ್ದು ಎಂದರು.
BREAKING: ಸಿಎಂ ಆದೇಶಾನುಸಾರ RCBಯ ನಿಖಿಲ್ ಸೋಸಲೆ ಬಂಧನ: ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ ಮಾಳವಿಕಾ ನಾಯ್ಕ್
ಬೆಂಗಳೂರು ಕಾಲ್ತುಳಿತ ದುರಂತ ಕೇಸ್: ಸಿಎಂ, ಡಿಸಿಎಂ ರಾಜೀನಾಮೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ