ಬೆಂಗಳೂರು: ಸ್ಯಾಂಡಲ್ ವುಡ್ ಯುವ ನಟ, ರಾಘವೇಂದ್ರ ರಾಜ್ ಕುಮಾರ್ ಅವರ 2ನೇ ಪುತ್ರ ಯುವ ರಾಜ್ ಕುಮಾರ್ ಅವರ ದಾಂಪತ್ಯದಲ್ಲಿ ಬಿರುಕು ಕಂಡಿದೆ. ಈ ಮೂಲಕ ದೊಡ್ಮನೆ ಮಗ ಗುರು ರಾಜ್ ಕುಮಾರ್ ಡಿವೋರ್ಸ್ ಗೆ ಮುಂದಾಗಿದ್ದು, ಪತ್ನಿ ಶ್ರೀ ದೇವಿ ಭೈರಪ್ಪ ಅವರಿಂದ ದೂರವಾಗೋದಕ್ಕೆ ಫ್ಯಾಮಿಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ಕಳೆದ ನಾಲ್ಕು ದಿನಗಳ ಹಿಂದೆಯೇ ಯುವ ರಾಜ್ ಕುಮಾರ್ ಅವರು ಕೌಟುಂಬಿಕ ನ್ಯಾಯಾಲಯಕ್ಕೆ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರೋದಾಗಿ ತಿಳಿದು ಬಂದಿದೆ. ಜೂನ್.6ರಂದು ಫ್ಯಾಮಿಲಿ ಕೋರ್ಟ್ ಗೆ ಎಂಸಿ ಆಕ್ಟ್ ನ ಸೆಕ್ಷನ್ 13 (1) (ia) ಅಡಿಯಲ್ಲಿ ಯುವ ರಾಜ್ ಕುಮಾರ್ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಜುಲೈ.4ಕ್ಕೆ ಕೋರ್ಟ್ ನಿಗದಿ ಪಡಿಸಿದೆ.
ಯುವ ರಾಜ್ ಕುಮಾರ್-ಶ್ರೀ ದೇವಿ ಭೈರಪ್ಪ ಡಿವೋರ್ಸ್ ಗೆ ಕಾರಣವೇನು?
ಯುವ ರಾಜ್ ಕುಮಾರ್-ಶ್ರೀ ದೇವಿ ಭೈರಪ್ಪ ಡಿವೋರ್ಸ್ ಗೆ ಕಾರಣ ನೋಡೋದಾದ್ರೇ, ಪತ್ನಿ ವಿರುದ್ಧ ಕ್ರೌರ್ಯ ಹಾಗೂ ಅಗೌರವದಿಂದ ನೋಡಿಕೊಂಡ ಆರೋಪ ಕೇಳಿ ಬರುತ್ತಿದೆ. ಜೊತೆಗೆ ಪತ್ನಿಯಿಂದ ಮಾನಸಿಕವಾಗಿ ಟಾರ್ಚರ್ ನೀಡಲಾಗುತ್ತಿದೆ. ಹೀಗಾಗಿ ಯುವ ರಾಜ್ ಕುಮಾರ್ ಡಿವೋರ್ಸ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ಇನ್ನೊಂದೆಡೆ ಕಳೆದ 6-7 ತಿಂಗಳ ಹಿಂದೆಯೇ ಯುವ ರಾಜ್ ಕುಮಾರ್ ಹಾಗೂ ಶ್ರೀ ದೇವಿ ಭೈರಪ್ಪ ಅವರು ದೂರವಾಗಿದ್ದರು. ಹೀಗಾಗಿಯೇ ಕಳೆದ ತಿಂಗಳು ಯುವ ಸಿನಿಮಾ ರಿಲೀಸ್ ಆದಾಗಲೂ ಶ್ರೀದೇವಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಎನ್ನಲಾಗುತ್ತಿದೆ.
ಈಗ ದೊಡ್ಡಮನೆಯಿಂದ ದೂರ ಆಗಿರೋ ಶ್ರೀದೇವಿ ಭೈರಪ್ಪ ಅವರಿಂದ ವಿವಾಹ ವಿಚ್ಛೇದನಕ್ಕಾಗಿ ಯುವ ರಾಜ್ ಕುಮಾರ್ ನಿರ್ಧರಿಸಿ ಅರ್ಜಿ ಸಲ್ಲಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ಕಾದು ನೋಡಬೇಕಿದೆ.
BREAKING : ನಟ ಯುವರಾಜ್ ಕುಮಾರ್ ದಾಂಪತ್ಯದಲ್ಲಿ ಬಿರುಕು : ವಿಚ್ಚೇದನ ಕೋರಿ ಕೋರ್ಟ್ ಗೆ ಅರ್ಜಿ
BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ‘ಸ್ವಾಮೀಜಿ’ಯನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ