ಬೆಂಗಳೂರು: ಇಂದು ನಮಗೆ ಸಾಮಾಜಿಕವಾಗಿ ಬೇಕಾಗಿರುವುದು ‘ಚಾಯ್ ಪೇ ಚರ್ಚಾ’ದಂತಹ ಬೀಡಾಡಿ ಚರ್ಚೆಗಳಲ್ಲ, ನಮ್ಮೆಲ್ಲರನ್ನು ಬೆಸೆಯುವಂತಹ, ಚಿಂತನೆಗೆ ಹಚ್ಚುವಂತಹ ಆಹಾರ ಸಂಸ್ಕೃತಿಯಂತಹ ಮೌಲಿಕ ಚರ್ಚೆಗಳು ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಎಕ್ಸ್ ನಲ್ಲಿ ರಾಹುಲ್ ಗಾಂಧಿಯವರ ವೀಡಿಯೋವೊಂದನ್ನು ಶೇರ್ ಮಾಡಿರುವಂತ ಅವರು, ದಲಿತರ ಊಟದೆಡೆಗೆ ಅವಜ್ಞೆಯಷ್ಟೇ ಅಲ್ಲ, ತೀವ್ರ ಅಸಹನೆಯನ್ನೂ ಬೆಳೆಸಿಕೊಂಡಿರುವ ಸಮಾಜ ನಮ್ಮದು. ದಲಿತರ ಕೈಯಿಂದ ತಯಾರಿಸಿದ ಅಡುಗೆಯ ಸೇವನೆ ಇರಲಿ, ಅವರು ಊಟಕ್ಕೆ ಬಳಸುವ ಪಾತ್ರೆ ಮುಟ್ಟಿದರೂ ಅದನ್ನು ಮೈಲಿಗೆ ಎಂದು ಕರೆಯುವ ಮನಸ್ಥಿತಿ ಇಂದಿಗೂ ನಮ್ಮಲ್ಲಿ ವ್ಯಾಪಕವಾಗಿದೆ ಎಂದಿದ್ದಾರೆ.
ಶಾಲೆಗಳಲ್ಲಿ ದಲಿತ ಸಮುದಾಯದವರು ಅಡುಗೆ ಮಾಡಿದರೆ ಅದನ್ನು ವಿರೋಧಿಸುವುದು, ಜಾತ್ರೆ, ದೇವಸ್ಥಾನಗಳ ಅಡುಗೆಯ ಉಸ್ತುವಾರಿಯಿಂದ ದಲಿತರನ್ನು ಪ್ರಜ್ಞಾಪೂರ್ವಕವಾಗಿ ಕೈ ಬಿಡುವುದು ಅಥವಾ ದೂರವಿರಿಸುವುದು ಇವೆಲ್ಲವನ್ನು ನಮ್ಮ ಸಮಾಜದಿಂದ ಇಂದಿಗೂ ತೊಡೆಯಲಾಗಿಲ್ಲ ಎಂದು ಹೇಳಿದ್ದಾರೆ.
ಆಹಾರವೆನ್ನುವುದು ಅವರವರ ರುಚಿ, ಇಚ್ಛೆಗೆ ಅನುಸಾರವಾಗಿಯೇ ಇರುವುದಾದರೂ, ತಳ ಸಮುದಾಯಗಳ ಆಹಾರ ಸಂಸ್ಕೃತಿಯನ್ನು ಕೀಳಾಗಿ ಕಾಣುವ ಕೊಳಕು ಮನಸ್ಥಿತಿಯನ್ನು ಬೇರು ಸಹಿತ ಕಿತ್ತು ಹಾಕದೆ ದೇಶದಲ್ಲಿ ನೈಜ ಸಾಂಸ್ಕೃತಿಕ ಸಮ್ಮಿಳನ ಸಾಧ್ಯವಾಗದು ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ ಮರಾಠವಾಡದ ದಲಿತ ಆಹಾರ ಸಂಸ್ಕೃತಿಯನ್ನು ಕಟ್ಟಿಕೊಟ್ಟಿರುವ ಲೇಖಕ ಶಾಹೂ ಪಟೋಲೆ ಅವರೊಂದಿಗೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಡುಗೆ ತಯ್ಯಾರಿಯಲ್ಲಿ ಭಾಗಿಯಾಗಿ, ಊಟದೊಟ್ಟಿಗೆ ನಡೆಸಿದ ಆಹಾರ ಸಂಸ್ಕೃತಿಯ ಚರ್ಚೆ ಅವರು ತಯಾರಿಸಿದ ಆಹಾರಾದಷ್ಟೇ ಚೇತೋಹಾರಿಯಾಗಿದೆ ಎಂದಿದ್ದಾರೆ.
ಇಂದು ನಮಗೆ ಸಾಮಾಜಿಕವಾಗಿ ಬೇಕಾಗಿರುವುದು ‘ಚಾಯ್ ಪೇ ಚರ್ಚಾ’ದಂತಹ ಬೀಡಾಡಿ ಚರ್ಚೆಗಳಲ್ಲ, ನಮ್ಮೆಲ್ಲರನ್ನು ಬೆಸೆಯುವಂತಹ, ಚಿಂತನೆಗೆ ಹಚ್ಚುವಂತಹ ಆಹಾರ ಸಂಸ್ಕೃತಿಯಂತಹ ಮೌಲಿಕ ಚರ್ಚೆಗಳು. ರಾಹುಲ್ ಗಾಂಧಿಯವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ತುಣುಕನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುವ ಖುಷಿ ನನ್ನದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ದಲಿತರ ಊಟದೆಡೆಗೆ ಅವಜ್ಞೆಯಷ್ಟೇ ಅಲ್ಲ, ತೀವ್ರ ಅಸಹನೆಯನ್ನೂ ಬೆಳೆಸಿಕೊಂಡಿರುವ ಸಮಾಜ ನಮ್ಮದು. ದಲಿತರ ಕೈಯಿಂದ ತಯಾರಿಸಿದ ಅಡುಗೆಯ ಸೇವನೆ ಇರಲಿ, ಅವರು ಊಟಕ್ಕೆ ಬಳಸುವ ಪಾತ್ರೆ ಮುಟ್ಟಿದರೂ ಅದನ್ನು ಮೈಲಿಗೆ ಎಂದು ಕರೆಯುವ ಮನಸ್ಥಿತಿ ಇಂದಿಗೂ ನಮ್ಮಲ್ಲಿ ವ್ಯಾಪಕವಾಗಿದೆ.
ಶಾಲೆಗಳಲ್ಲಿ ದಲಿತ ಸಮುದಾಯದವರು ಅಡುಗೆ ಮಾಡಿದರೆ ಅದನ್ನು… pic.twitter.com/iAwkuowu6s
— Siddaramaiah (@siddaramaiah) October 7, 2024
UG CET-2024ರ 2ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಬಿಡುಗಡೆ