ದಕ್ಷಿಣ ಕನ್ನಡ: ನಾನು ಹೇಳಿದ್ದು ಎಲ್ಲವೂ ಸುಳ್ಳು. ತಪ್ಪಾಯ್ತು. ನನ್ನನ್ನು ಬಿಟ್ಟು ಬಿಡಿ. ಕೇಸ್ ಹಿಂಪಡೆಯುತ್ತೇನೆ ಎಂಬುದಾಗಿ ಸುಜಾತಾ ಭಟ್ ಕಣ್ಣೀರಿಟ್ಟಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿನ ಎಸ್ಐಟಿ ಪೊಲೀಸರ ವಿಚಾರಣೆಗೆ ಹಾಜರಾದಂತ ಅವರು, ನಾನು ಹೇಳಿದ್ದು ಎಲ್ಲವೂ ಸುಳ್ಳು, ತಪ್ಪಾಯ್ತು. ನನ್ನ ಕೇಸ್ ಹಿಂಪಡೆಯುತ್ತೇನೆ. ಬಿಟ್ಟು ಬಿಡಿ ಎಂಬುದಾಗಿ ಗೋಗರೆದಿರುವುದಾಗಿ ಹೇಳಲಾಗುತ್ತಿದೆ.
ವಿಚಾರಣೆಯ ವೇಳೆಯಲ್ಲಿ ದೂರು ಹಿಂಪಡೆಯುವುದಾಗಿ ಸುಜಾತಾ ಭಟ್ ಹೇಳಿದ್ದಾರೆ. ಆದರೇ ಸುಜಾತಾ ಭಟ್ ಹೇಳಿಕೆಗೆ ಎಸ್ಐಟಿ ಅಧಿಕಾರಿಗಳು ಸಮ್ಮತಿಸಿಲ್ಲ. ಬದಲಾಗಿ ವಿಚಾರಣೆಯನ್ನು ಎಸ್ಐಟಿ ಅಧಿಕಾರಿಗಳು ಮುಂದುವರೆಸಿದ್ದಾರೆ. ಸುಜಾತ ಭಟ್ ಗೆ ಪ್ರಶ್ನೆಗಳ ಸುರಿಮಳೆಯನ್ನೇ ಕೇಳುತ್ತಿದ್ದಾರೆ.
ಇಂದಿನ ಎಸ್ಐಟಿ ವಿಚಾರಣೆ ವೇಳೆಯಲ್ಲಿ ಎಲ್ಲಾ ಸತ್ಯವನ್ನು ಸುಜಾತಾ ಭಟ್ ಹೇಳಿದ್ದಾರೆ ಎನ್ನಲಾಗುತ್ತಿದೆ. ನಾನು ಹೇಳಿದ್ದೆಲ್ಲ ಸುಳ್ಳು. ತಪ್ಪಾಯ್ತು ಬಿಟ್ಟುಬಿಡಿ ಎಂಬುದಾಗಿ ಕಣ್ಣೀರನ್ನು ಎಸ್ಐಟಿ ಅಧಿಕಾರಿಗಳ ಮುಂದೆ ಸುಜಾತಾ ಭಟ್ ಹಾಕಿದ್ದಾರೆ. ಅಲ್ಲದೇ ಸುಳ್ಳು ಹೇಳಿದ್ದರ ಹಿಂದಿರುವವರ ಹೆಸರನ್ನು ಕೂಡ ಸುಜಾತಾ ಭಟ್ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸುಜಾತಾ ಭಟ್ ಹಿಂದೆ ಇರುವವರಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ ದ್ವಿಭಾಷಾ ನೀತಿ: ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ 25,000 ಹಿಂದಿ ಶಿಕ್ಷಕರು | Hindi Teacher
ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸೆ.1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ