ಮೈಸೂರು: ಮೋದಿ ಆಶ್ವಾಸನೆಗಳ ಗತಿ ಏನಾಯ್ತು? ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೈಸೂರು ಶೈಲಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಚಪ್ಪಾಳೆ ತಟ್ಟಿ ಕಾರ್ಯಕರ್ತರು ಸಂಭ್ರಮಿಸಿದರು.
ಇಂದು ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೂರು ಜಿಲ್ಲೆಗಳ ವ್ಯಾಪ್ತಿಯ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಮುಖಂಡರು, ಬೋರ್ಡ್ ಅಧ್ಯಕ್ಷರುಗಳು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
*ಮೋದಿಯವರು ವಿದೇಶದಿಂದ ಕಪ್ಪು ಹಣ ತರ್ತೀವಿ ಅಂದ್ರು- ತಂದ್ರಾ?
*ಎಲ್ಲರ ಅಕೌಂಟಿಗೆ 15 ಲಕ್ಷ ಹಾಕ್ತೀವಿ ಅಂದ್ರು. ಹಾಕಿದ್ರಾ?
*ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು. ಮಾಡಿದ್ರಾ?
*ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ್ರು, ದುಪ್ಪಟ್ಟಾಯ್ತಾ?
*ಅಚ್ಛೇ ದಿನ್ ಆಯೆಗಾ ಅಂದ್ರು, ಬಂತಾ ಅಚ್ಛೆ ದಿನ್?
*ಭಾರತದ ಸಾಲವನ್ನೆಲ್ಲಾ ತೀರಿಸ್ತೀವಿ ಅಂದ್ರು. ಮೋದಿ ಪ್ರಧಾನಿಯಾದಾಗ ದೇಶದ ಸಾಲ 53 ಲಕ್ಷ ಕೋಟಿ ಇತ್ತು. ಈಗ ದೇಶದ ಸಾಲ 183 ಲಕ್ಷ ಕೋಟಿಗೆ ಏರಿಕೆ ಆಗಿದೆ. 10 ವರ್ಷದಲ್ಲಿ ಮೋದಿ ಸರ್ಕಾರ ಮಾಡಿದ ಸಾಲ 130 ಲಕ್ಷ ಕೋಟಿ. ಇದೇನಾ ಇವರು ಸಾಲ ತೀರಿಸಿದ್ದು?
*ಮೇಕ್ ಇನ್ ಇಂಡಿಯಾ ಅಂದ್ರು, ಆಯ್ತಾ?
*ರೂಪಾಯಿ ಎದುರು ಡಾಲರ್ ಬೆಲೆ ಇಳಿಯತ್ತೆ ಅಂದ್ರು, ಇಳೀತಾ ? ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು
ನರೇಂದ್ರ ಮೋದಿಯವರು ಒಳ್ಳೆ ಈವೆಂಟ್ ಮ್ಯಾನೇಜರ್ ಅಷ್ಟೆ ಎಂದರು.
ಹೀಗೆ ಬಿಜೆಪಿ ನೀಡಿದ ಆಶ್ವಾಸನೆಗಳ ಉದ್ದುದ್ಧದ ಪಟ್ಟಿಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಾಮೂಲು ಮೈಸೂರು ಶೈಲಿಯಲ್ಲಿ ಪ್ರಶ್ನಿಸಿದರು.
ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ನವೋದಯ ವಿದ್ಯಾಲಯದಲ್ಲಿ 1377 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ
‘ಸೋನುಗೌಡ’ ಕಾನೂನು ಬಾಹಿರವಾಗಿ ‘ಮಗು ದತ್ತು’ ಪ್ರಕರಣ: ಪೊರೀಸರಿಂದ ‘ಸ್ಥಳ ಮಹಜರು’