ನವದೆಹಲಿ : ಮಾರ್ಚ್ 28ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಕಳುಹಿಸಲಾದ ಒಂದು ದಿನದ ನಂತ್ರ ಸುಕೇಶ್ ಚಂದ್ರಶೇಖರ್ ಶನಿವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ. ದೆಹಲಿ ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಕೇಜ್ರಿವಾಲ್ ಅವರನ್ನ ತಿಹಾರ್ ಜೈಲಿಗೆ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾನೆ.
“ಸತ್ಯವು ಮೇಲುಗೈ ಸಾಧಿಸಿದೆ, ನಾನು ಅವರನ್ನ ತಿಹಾರ್ ಜೈಲಿಗೆ ಸ್ವಾಗತಿಸುತ್ತೇನೆ” ಎಂದು ಸುಕೇಶ್ ಚಂದ್ರಶೇಖರ್ ಹೇಳಿದ್ದು, ಅರವಿಂದ್ ಕೇಜ್ರಿವಾಲ್ ವಿರುದ್ಧ ಸರ್ಕಾರದ ಅಪ್ರೂವರ್ ಆಗುತ್ತೇನೆ” ಎಂದಿದ್ದಾನೆ.
“ನಾನು ಅವರನ್ನು (ಕೇಜ್ರಿವಾಲ್) ಬಹಿರಂಗಪಡಿಸುತ್ತೇನೆ. ನಾನು ಅಪ್ರೂವರ್ ಆಗುತ್ತೇನೆ ಮತ್ತು ಅವರನ್ನ ವಿಚಾರಣೆಗೆ ಒಳಪಡಿಸುವುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ. ಎಲ್ಲಾ ಪುರಾವೆಗಳನ್ನು ನೀಡಲಾಗಿದೆ” ಎಂದು ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ.
200 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾನೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ನಕಾರ!
BREAKING : ಜೈಪುರದ ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಐವರು ಕಾರ್ಮಿಕರು ಸಜೀವ ದಹನ