ಹೊಸಪೇಟೆ: ಬಿಜೆಪಿ ಕರ್ನಾಟಕದಲ್ಲಿ ವಿಕಾಸದ ಬೆಳೆ ಬೆಳೆಯಲು ಪ್ರಯತ್ನ ಮಾಡುತ್ತಿದೆ. ಆದ್ರೇ ಕಾಂಗ್ರೆಸ್ ಅದನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ವಾಗ್ಧಾಳಿ ನಡೆಸಿದರು.
ಹೊಸಪೇಟೆಯಲ್ಲಿ ಇಂದು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಅವರ ಹತ್ಯೆಯಾಯಿತು. ನೇಹಾ ಹಿರೇಮಠ ಅವರ ಇಡೀ ಕುಟುಂಬವೇ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಅಷ್ಟಕ್ಕೂ, ನೇಹಾ ಹಿರೇಮಠ ಅವರ ತಂದೆ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ನೇಹಾ ಹಿರೇಮಠ ಹತ್ಯೆಯಂತಹ ಪ್ರಕರಣಗಳು ಎಲ್ಲೂ ನಡೆಯಬಾರದು ಎಂದರು.
ಕರ್ನಾಟಕದಲ್ಲಿ ವಿಕಾಸದ ಬೆಳೆಯನ್ನು ಬೆಳೆಯೋದಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ. ಆದ್ರೇ ಕಾಂಗ್ರೆಸ್ ಮಾತ್ರ ಅದನ್ನು ನಾಶ ಮಾಡೋದಕ್ಕೆ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಅಪರಾಧ, ಭಯೋತ್ಪಾನೆಯನ್ನೇ ವೋಟ್ ಬ್ಯಾಂಕ್ ರೀತಿ ನೋಡ್ತಿದೆ. ಪಿಎಫ್ಐ ಎಷ್ಟು ಖತರ್ನಾಕ್ ಎಂಬುದು ಸಣ್ಣ ಮಕ್ಕಳಿಗೂ ಗೊತ್ತಿದೆ. ಪಿಎಫ್ಐ ಸಂಘಟನೆಯನ್ನು ಬುಡ ಸಮೇತ ಕಿತ್ತಹಾಕುತ್ತೇವೆ ಎಂದರು.
‘ಇಂಡಿಯಾ’ ಒಕ್ಕೂಟಕ್ಕೆ ಅಧಿಕಾರ ಕೊಟ್ಟರೆ ವರ್ಷಕ್ಕೊಬ್ಬ ‘ಪ್ರಧಾನಿ’: ಮೋದಿ ವಿಶ್ಲೇಷಣೆ
BREAKING: ಹಾಸನ ‘ಪೆನ್ ಡ್ರೈವ್’ ಕೇಸ್: ತನಿಖೆಗೆ ‘SIT ತಂಡ’ ರಚಿಸಿ ‘ರಾಜ್ಯ ಸರ್ಕಾರ’ ಅಧಿಕೃತ ಆದೇಶ