ನವದೆಹಲಿ : ಚುನಾವಣಾ ಬಾಂಡ್ಗಳನ್ನ ರದ್ದುಗೊಳಿಸುವ ಸುಪ್ರೀಂಕೋರ್ಟ್ ನಿರ್ಧಾರದ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು, ಇದು ಸರ್ಕಾರಕ್ಕೆ ದೊಡ್ಡ ಹಿನ್ನಡೆಯಲ್ಲ ಎಂದು ಅವರು ಹೇಳಿದರು. “ಯಾವುದೇ ವ್ಯವಸ್ಥೆ ಪರಿಪೂರ್ಣವಾಗಿರಲು ಸಾಧ್ಯವಿಲ್ಲ ಮತ್ತು ಯಾವುದೇ ದೋಷಗಳನ್ನ ಸರಿಪಡಿಸಬಹುದು” ಎಂದು ಅವರು ಹೇಳಿದರು. ಇನ್ನು ಈ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವವರು ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಅವರು ಹೇಳಿದರು. ಅಂದ್ಹಾಗೆ, ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿ ಅತಿ ಹೆಚ್ಚು ದೇಣಿಗೆಗಳನ್ನ ಪಡೆದಿದೆ ಎಂದು ತಿಳಿದು ಬಂದಿದೆ.
ಜಾರಿ ನಿರ್ದೇಶನಾಲಯವು ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ಕಾರ್ಯನಿರ್ವಹಣೆಯಲ್ಲಿ ಯಾವುದೇ ಹಸ್ತಕ್ಷೇಪ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು. ಜಾರಿ ನಿರ್ದೇಶನಾಲಯದಲ್ಲಿ 7,000 ಪ್ರಕರಣಗಳಿವೆ. ಅದ್ರಲ್ಲಿ ರಾಜಕಾರಣಿಗಳ ವಿರುದ್ಧದ ಪ್ರಕರಣಗಳು ಶೇ.3ಕ್ಕಿಂತ ಕಡಿಮೆ ಇವೆ. ಆ ಸಂಸ್ಥೆಯ ನಾವು ಅಡ್ಡಿಯಾಗೋದಿಲ್ಲ. ಸ್ವತಂತ್ರವಾಗಿ ಕೆಲಸ ಮಾಡುವುದು ಮತ್ತು ಸತ್ಯವನ್ನ ಬಹಿರಂಗಪಡಿಸುವುದು ಇಡಿಯ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು. ಅಂದ್ಹಾಗೆ, ಕೇಂದ್ರವು ಇಡಿಯನ್ನ ಅಸ್ತ್ರವಾಗಿ ಬಳಸುತ್ತಿದೆ ಎಂಬ ‘ಇಂಡಿಯಾ ಅಲೈಯನ್ಸ್’ ಆರೋಪಗಳಿಗೆ ಪ್ರಧಾನಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
BREAKING : ಬಿಗಿ ಭದ್ರತೆ ನಡುವೆ ಸಿಎಂ ‘ಕೇಜ್ರಿವಾಲ್’ ತಿಹಾರ್ ಜೈಲಿಗೆ ಕರೆತಂದ ಪೊಲೀಸರು, ‘ಸೆಲ್’ನಲ್ಲಿ ಏಕಾಂಗಿ ವಾಸ
ಕನ್ನಡ ನಾಮಫಲಕ ಕಡ್ಡಾಯ: ‘ಸದ್ಗುರು’ ಹೆಸರನ್ನು ‘ಸತ್ತ ಗುರು’ ಎಂದು ಅನುವಾದಿಸಿದ ಅಂಗಡಿಯವ
ಸಿಎಂ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ ನೀಡುವುದಿಲ್ಲ, ಜೈಲಿನಿಂದ ಆಡಳಿತ : ಎಎಪಿ