ಮಂಡ್ಯ: ಹನುಮಧ್ವಜವನ್ನು ಹಾರಿದೋನ್ನ ಕಾಂಗ್ರೆಸ್ ಸರ್ಕಾರ ತಡೆದಿರೋದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮಂಡ್ಯದ ಕೆರಗೋಡಿನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆಯನ್ನು ನಡೆಸಿದ ಬಳಿಕ, ಡಿಸಿ ಕಚೇರಿಯ ಮುಂದೆ ಜಮಾವಣೆಗೊಂಡಿರುವಂತ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದೆ. ಇದೇ ವೇಳೆಯಲ್ಲಿ ರಾಜ್ಯದ ಪ್ರತಿಯೊಂದು ಮನೆಯ ಮೇಲೂ ಹನುಮಧ್ವಜ ಹಾರಿಸುತ್ತೇವೆ, ತಾಕತ್ತಿದ್ರೆ ತಡೆಯಿರಿ ಅಂತ ಸರ್ಕಾರಕ್ಕೆ ಸಿ.ಟಿ ರವಿ ಸವಾಲ್ ಹಾಕಿದ್ದಾರೆ.
ಮಂಡ್ಯದ ಡಿಸಿ ಕಚೇರಿಯ ಮುಂದೆ ನೆರೆದಿದ್ದಂತ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದಂತ ಅವರು, ಪ್ರತಿಯೊಂದು ಮನೆಯ ಮೇಲೂ ಹನುಮ ಧ್ವಜ ಹಾರಿಸುತ್ತೇವೆ. ಸರ್ಕಾರಕ್ಕೆ ತಾಕತ್ತಿದ್ರೇ ತಡೆಯೋ ಧೈರ್ಯ ಮಾಡಲಿ ಎಂಬುದಾಗಿ ಗುಡುಗಿದರು.
ನಮ್ಮ ಹೋರಾಟ ಹಿಂದೂ ವಿರೋಧಿಗಳ ಮೇಲೆ ಆಗಿದೆ. ಧ್ವಜ ತೆಗೆದ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಭಸ್ಮವಾಗಲಿದೆ. ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ್ದರಿಂದ ಲಂಗೆ ಭಸ್ಮವಾಯಿತು. ಲಂಕೆಗೆ ಆದ ಪರಿಸ್ಥಿತಿಯೇ ಈ ಸರ್ಕಾರಕ್ಕೂ ಬರಲಿದೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
BREAKING: ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣ: ವಿಚಾರಣೆಗೆ ಪಾಟ್ನಾದ ED ಕಚೇರಿಗೆ ಹಾಜರಾದ ಲಾಲು ಯಾದವ್
BREAKING: ಮಂಡ್ಯದಲ್ಲಿ ಉದ್ರಿಕ್ತರಿಂದ ಕಲ್ಲು ತೂರಾಟ: ಸಿಎಂ ಸಿದ್ಧರಾಮಯ್ಯ, ಶಾಸಕ ಗಣಿಗ ರವಿ ಬ್ಯಾನರ್ ಹರಿದು ಆಕ್ರೋಶ