ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರ ದೇವಲಗಾಣಗಾಪುರ ದತ್ತನಹುಂಡಿ ಎಣಿಕೆ ಕಾರ್ಯದ ವೇಳೇ ದೇವಸ್ಥಾನದ ಹುಂಡಿಯಲ್ಲಿ ವಿಶೇಷ ನೋಟ್ ಸಿಕ್ಕಿದ್ದು ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಹೌದು, ಹರಕೆಯನ್ನು ನಮ್ಮಲ್ಲಿ ಹಲವು ರೀತಿಯಲ್ಲಿ ಕೇಳುವುದನ್ನು ನಾವು ನೋಡಬಹುದಾಗಿದೆ. ಕೆಲವು ಮಂದಿ ತಮ್ಮ ಹರಕೆ ತೀರಿದ ಬಳಿಕ ತಮ್ಮ ಕೈನಲಾದ ಸೇವೆಯನ್ನು ದೇವರಿಗೆ ನೀಡುವುದನ್ನು ನಾವು ಕಾಣಬಹುದಾಗಿದೆ. ಆದರೆ ಇಲ್ಲಬ್ಬ ಸೊಸೆ ತನ್ನ ಅತ್ತೆ ಸಾಯಲಿ ಅಂತ ಬರೆದು ದೇವರ ಹುಂಡಿಗೆ ಹಾಕಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಅಂದ ಹಾಗೇ ಅದರಲ್ಲಿ, 50 ರೂಪಾಯಿ ನೋಟಿನ ಮೇಲೆ “ಅತ್ತೆ ಬೇಗ ಸಾಯಬೇಕು” ಎಂದು ಬರೆದು ದತ್ತಾತ್ರೇಯ ದೇವಸ್ಥಾನದ ಹುಂಡಿಗೆ ಹಾಕಿದ್ದಾಳೆ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.