ಬೆಂಗಳೂರು: ಮಂಡ್ಯದಲ್ಲಿ ಇಂದು ಹನುಮಧ್ವಜ ವಿವಾಧ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಇಂತಹ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಅಂತಹ ಬ್ರಿಟಿಷರನ್ನೇ ಹೆದರಿಸಿದ ಕಾಂಗ್ರೆಸ್ ಈ ಬಿಜೆಪಿ RSS ಎಂಬ ದೇಶದ್ರೋಹಿಗಳಿಗೆ ಹೆದರುವುದುಂಟೆ ಅಂತ ಹೇಳಿದೆ.
ಈ ಬಗ್ಗೆ ಎಕ್ಸ್ ಮಾಡಿದ್ದು, ಅಂತಹ ಬ್ರಿಟಿಷರನ್ನೇ ಹೆದರಿಸಿದ ಕಾಂಗ್ರೆಸ್ ಈ ಬಿಜೆಪಿ RSS ಎಂಬ ದೇಶದ್ರೋಹಿಗಳಿಗೆ ಹೆದರುವುದುಂಟೆ. ಬ್ರಿಟಿಷರ ಗುಂಡಿಗೆ ಎದೆಗೊಟ್ಟು ತಿರಂಗಾ ಹಾರಿಸಿದ ವೀರ ಪರಂಪರೆ ನಮ್ಮದು, ಈ ಸಂಘಿ ಕ್ರಿಮಿ ಕೀಟಗಳು ನಮ್ಮನ್ನು ತಡೆಯಲು ಸಾಧ್ಯವೇ. ದೇಶದ ಘನತೆ, ಗೌರವವನ್ನು ಎತ್ತಿ ಹಿಡಿದಿದ್ದೇವೆ, ದೇಶದ್ರೋಹಿ ಬಿಜೆಪಿಗೆ ದಮ್ಮು ತಾಕತ್ತಿದ್ದರೆ ಈ ರಾಷ್ಟ್ರ ಧ್ವಜವನ್ನು ಕಿತ್ತು ಹಾಕುವ ಧೈರ್ಯ ತೋರಲಿ ಎಂದಿದೆ.
ಅಂತಹ ಬ್ರಿಟಿಷರನ್ನೇ ಹೆದರಿಸಿದ ಕಾಂಗ್ರೆಸ್ ಈ ಬಿಜೆಪಿ RSS ಎಂಬ ದೇಶದ್ರೋಹಿಗಳಿಗೆ ಹೆದರುವುದುಂಟೆ.
ಬ್ರಿಟಿಷರ ಗುಂಡಿಗೆ ಎದೆಗೊಟ್ಟು ತಿರಂಗಾ ಹಾರಿಸಿದ ವೀರ ಪರಂಪರೆ ನಮ್ಮದು, ಈ ಸಂಘಿ ಕ್ರಿಮಿ ಕೀಟಗಳು ನಮ್ಮನ್ನು ತಡೆಯಲು ಸಾಧ್ಯವೇ.
ದೇಶದ ಘನತೆ, ಗೌರವವನ್ನು ಎತ್ತಿ ಹಿಡಿದಿದ್ದೇವೆ, ದೇಶದ್ರೋಹಿ @BJP4Karnataka ಗೆ ದಮ್ಮು ತಾಕತ್ತಿದ್ದರೆ… pic.twitter.com/CTPhwtzXu0
— Karnataka Congress (@INCKarnataka) January 29, 2024
ಅನುಮತಿ ಪಡೆದಿದ್ದು ರಾಷ್ಟ್ರ ಧ್ವಜ ಹಾರಿಸುವುದಕ್ಕೆ, ಆದರೆ ಹಾರಿಸಿದ್ದು ಧಾರ್ಮಿಕ ಧ್ವಜವನ್ನು. RSS ತ್ರಿವರ್ಣ ಧ್ವಜವನ್ನು “ಅನಿಷ್ಠದ ಸಂಕೇತ” ಎಂದು ಕರೆದಿತ್ತು, RSS ದಶಕಗಳ ಕಾಲ ತಿರಂಗವನ್ನು ಒಪ್ಪಿಕೊಳ್ಳಲಿಲ್ಲ, ಬಿಜೆಪಿಯೂ ಅದೇ ಹಾದಿಯಲ್ಲಿ ಸಾಗಿದೆ, ರಾಷ್ಟ್ರ ಧ್ವಜವನ್ನು ದ್ವೇಷಿಸುತ್ತಿದೆ. ರಾಷ್ಟ್ರ ಧ್ವಜವನ್ನು ವಿರೋಧಿಸುತ್ತಿರುವ ಬಿಜೆಪಿ ದೇಶದ್ರೋಹಿಗಳಲ್ಲದೆ ಇನ್ನೇನು? ಎಂದು ಪ್ರಶ್ನಿಸಿದೆ.
ಅನುಮತಿ ಪಡೆದಿದ್ದು ರಾಷ್ಟ್ರ ಧ್ವಜ ಹಾರಿಸುವುದಕ್ಕೆ, ಆದರೆ ಹಾರಿಸಿದ್ದು ಧಾರ್ಮಿಕ ಧ್ವಜವನ್ನು.
RSS ತ್ರಿವರ್ಣ ಧ್ವಜವನ್ನು "ಅನಿಷ್ಠದ ಸಂಕೇತ" ಎಂದು ಕರೆದಿತ್ತು, RSS ದಶಕಗಳ ಕಾಲ ತಿರಂಗವನ್ನು ಒಪ್ಪಿಕೊಳ್ಳಲಿಲ್ಲ,
ಬಿಜೆಪಿಯೂ ಅದೇ ಹಾದಿಯಲ್ಲಿ ಸಾಗಿದೆ, ರಾಷ್ಟ್ರ ಧ್ವಜವನ್ನು ದ್ವೇಷಿಸುತ್ತಿದೆ.ರಾಷ್ಟ್ರ ಧ್ವಜವನ್ನು ವಿರೋಧಿಸುತ್ತಿರುವ… pic.twitter.com/hatdeLZgtW
— Karnataka Congress (@INCKarnataka) January 29, 2024
ಬಿಜೆಪಿಯ ಲೋಕಸಭಾ ಚುನಾವಣೆಯ ತಾಲೀಮು ಮಂಡ್ಯದಲ್ಲಿ ಶುರುವಾಗಿದೆ, ಇದಕ್ಕೆ ಸೋಕಾಲ್ಡ್ ಜಾತ್ಯತೀತ ಜನತಾ ದಳ ಪೂರ್ಣ ಸಹಕಾರ ನೀಡುತ್ತಿದೆ. ಆರ್.ಅಶೋಕ್ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ದಮ್ಮು ತಾಕತ್ತಿದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸಲಿ ಎಂದಿದೆ.
ಕೆರೆಗೋಡು ಗ್ರಾಮದಲ್ಲಿ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ನವರು ರಾಷ್ಟ್ರಧ್ವಜ ಹಾಗೂ ನಾಡ ಧ್ವಜ ಹಾರಿಸುವುದಕ್ಕಾಗಿ ಮಾತ್ರ ಧ್ವಜ ಸ್ಥಂಭ ಸ್ಥಾಪನೆಗೆ ಮುಚ್ಚಳಿಕೆ ಬರೆದುಕೊಟ್ಟು ಅನುಮತಿ ಪಡೆದಿದ್ದಾರೆ. ಬರೆದುಕೊಟ್ಟ ಮುಚ್ಚಳಿಕೆಯಂತೆ ಹಾಗೂ ಯಾವುದಕ್ಕೆ ಅನುಮತಿ ಪಡೆದಿದ್ದಾರೋ ಅದನ್ನ ಪಾಲಿಸಬೇಕೇ ಬೇಡವೇ? ಎಂದು ಕೇಳಿದೆ.
ರಾಷ್ಟ್ರ ಧ್ವಜ ಹಾರಿಸುವ ಉದ್ದೇಶವನ್ನು ಹೈಜಾಕ್ ಮಾಡಿ ಮಂಡ್ಯದಲ್ಲಿ ಶಾಂತಿ ಕದಡಬೇಕು, ಸರ್ಕಾರಕ್ಕೆ ಸವಾಲು ಹಾಕಬೇಕು ಎನ್ನುವುದು ನಿಮ್ಮ ಪೂರ್ವಯೋಜಿತ ಹುನ್ನಾರವಾಗಿತ್ತಲ್ಲವೇ? ನಿಮ್ಮ ನಿಷ್ಠೆ ಸಂವಿಧಾನಕ್ಕೋ. ಮನುವಾದಕ್ಕೋ ? ನಿಮ್ಮ ನಿಷ್ಠೆ ದೇಶಕ್ಕೋ, ದೇಶದ್ರೋಹಕ್ಕೋ? ನಿಮ್ಮ ನಿಷ್ಠೆ ರಾಷ್ಟ್ರ ಧ್ವಜಕ್ಕೋ , ಧಾರ್ಮಿಕ ಧ್ವಜಕ್ಕೋ? ಉತ್ತರ ನೀಡುವ ದಮ್ಮು ತಾಕತ್ತು ಇದೆಯೇ ? ಎಂದು ವಾಗ್ಧಾಳಿ ನಡೆಸಿದೆ.
,@BJP4Karnataka ಯ ಲೋಕಸಭಾ ಚುನಾವಣೆಯ ತಾಲೀಮು ಮಂಡ್ಯದಲ್ಲಿ ಶುರುವಾಗಿದೆ, ಇದಕ್ಕೆ ಸೋಕಾಲ್ಡ್ ಜಾತ್ಯತೀತ ಜನತಾ ದಳ ಪೂರ್ಣ ಸಹಕಾರ ನೀಡುತ್ತಿದೆ.@RAshokaBJP ಹಾಗೂ @hd_kumaraswamy ಅವರಿಗೆ ದಮ್ಮು ತಾಕತ್ತಿದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸಲಿ.
ಕೆರೆಗೋಡು ಗ್ರಾಮದಲ್ಲಿ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ನವರು ರಾಷ್ಟ್ರಧ್ವಜ ಹಾಗೂ… pic.twitter.com/yBzMR8DFLw
— Karnataka Congress (@INCKarnataka) January 29, 2024
‘ತುಮಕೂರ’ನ್ನು 2ನೇ ಬೆಂಗಳೂರಾಗಿ ಅಭಿವೃದ್ಧಿ ಮಾಡಲು ಸರ್ಕಾರ ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್
ಮಾಲ್ಡೀವ್ಸ್ ಅಧ್ಯಕ್ಷ ‘ಮುಯಿಝು’ ಪದಚ್ಯುತಿ ಪಕ್ಕಾ.? : ‘ವಾಗ್ದಂಡನೆ ನಿರ್ಣಯ’ ಮಂಡನೆಗೆ ವಿಪಕ್ಷಗಳ ಸಿದ್ಧತೆ : ವರದಿ