ಮಂಡ್ಯ: ನಮ್ಮ ಪಕ್ಷದಲ್ಲಿ ದಿವಂಗತ ನಟ ಅಂಬರೀಶ್ ಮಂತ್ರಿಯಾಗಿದ್ದರು. ಅವರ ಹೆಸರಲ್ಲೇ ರಸ್ತೆ ಮಾಡುತ್ತೇವೆ. ಅಂಬರೀಶ್ ಸ್ನೇಹಿತನನ್ನೇ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಸ್ಟಾರ್ ಚಂದ್ರು ಅವರು ಸೂರ್ಯ ಚಂದ್ರರಷಅಟೇ ಮಂಡ್ಯದಲ್ಲಿ ಗೆಲುವು ಸತ್ಯ. ಮಂಡ್ಯಕ್ಕೆ ಹೊಸ ಗಂಡು ರೆಡಿ ಮಾಡಿದ್ದೇವೆ ಎಂಬುದಾಗಿ ಸಂಸದೆ ಸುಮಲತಾ ಅಂಬರೀಶ್ ಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಮಂಡಕ್ಕೆ ಹೊಸ ಗಂಡು ರೆಡೆ ಮಾಡಿದ್ದೇವೆ. ಅವರು ಯಾರು ಅಂತ ನಿಮಗೆ ಗೊತ್ತಲ್ವ ಎಂಬುದಾಗಿ ಹೇಳಿದರು. ಅಲ್ಲದೇ ಸ್ಟಾರ್ ಚಂದ್ರು ಅವರನ್ನೇ ಕಾರ್ಯಕ್ರಮದಲ್ಲಿ ಪರಿಚಯ ಮಾಡಿದರು.
ನಟ ಅಂಬರೀಶ್ ಅವರು ನಮ್ಮ ಪಕ್ಷದಲ್ಲಿ ಮಂತ್ರಿಯಾಗಿದ್ದರು. ಪ್ರಾಣ ಬಿಡುವಾಗಲೂ ಅವರು ಕಾಂಗ್ರೆಸ್ ಪಕ್ಷದವರಾಗಿಯೇ ಬಿಟ್ಟರು. ಈಗ ಅಂಬರೀಶ್ ಸ್ನೇಹಿತನನ್ನೇ ಮಂಡ್ಯಕ್ಕೆ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಇದೆಲ್ಲ ನಿಮ್ಮ ತಲೆಯಲ್ಲಿ ಇರಲಿ. ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
BREAKING : ಮಂಡ್ಯ : ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಬಂಧನ
ಮಾರ್ಚ್ 13, 14 ಲೋಕಸಭಾ ಚುನಾವಣೆ ಘೋಷಣೆ ಸಾಧ್ಯತೆ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್