Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಆಪರೇಷನ್ ಸಿಂಧೂರ್ ನಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ : ಭಾರತೀಯ ಸೇನೆ ಸ್ಪಷ್ಟನೆ

11/05/2025 7:30 PM

BREAKING : ಪಾಕಿಸ್ತಾನ ಕರೆ ಮಾಡಿ ಮನವಿ ಮಾಡಿದಕ್ಕೆ ‘ಕದನ ವಿರಾಮ’ ಘೋಷಣೆ : DGMO ರಾಜೀವ್ ಘಾಯ್ ಸ್ಪಷ್ಟನೆ

11/05/2025 7:25 PM

BREAKING : ಪಾಕಿಸ್ತಾನದ 35-40 ಸೈನಿಕರನ್ನು ಕೊಂದಿದ್ದೇವೆ : ಏರ್ ಮಾರ್ಷಲ್ ಅವಧೆಶ್ ಕುಮಾರ್ ಭಾರ್ತಿ ಹೇಳಿಕೆ

11/05/2025 7:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ 2024-25ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ
KARNATAKA

ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ 2024-25ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ

By kannadanewsnow0701/03/2024 11:38 AM

ಬೆಂಗಳೂರು: 2024-25ನೇ ಸಾಲಿನ ಆಯವ್ಯಯದಲ್ಲಿ ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಸಭೆಯ ಅಧಿವೇಶನದಲ್ಲಿ ಆಯವ್ಯಯದ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು, ಫೆಬ್ರವರಿ 16 ರಂದು ಆಯವ್ಯಯವನ್ನು ಮಂಡಿಸಿದ್ದು, ಕಾಂಗ್ರೆಸ್ಸಿನ 9 ಸದಸ್ಯರು, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸದಸ್ಯರಾದ ಬಸವರಾಜ ಬೊಮ್ಮಾಯಿ ಸೇರಿದಂತೆ ಭಾರತೀಯ ಜನತಾ ಪಕ್ಷದಿಂದ 13 ಜನ ಜೆ.ಡಿ.ಎಸ್‍ನಿಂದ 3 ಜನ ಸದಸ್ಯರು ಸೇರಿದಂತೆ ಒಟ್ಟು 25 ಜನ ಸದಸ್ಯರು ಚರ್ಚೆ ಮಾಡಿದ್ದಾರೆ.

ಆದರೆ ಪ್ರತಿಪಕ್ಷದವರು ಆಯವ್ಯಯ ಮಂಡನೆ ಮಾಡುವಾಗ ಬಾಯ್‍ಕಟ್ ಮಾಡಿದ್ದು ಇತಿಹಾಸದಲ್ಲಿಯೆ ಮೊದಲು ಎಂದ ಮುಖ್ಯಮಂತ್ರಿಗಳು, 2024-25ನೇ ಆಯವ್ಯಯದಲ್ಲಿ ನಾನು ಮಂಡಿಸಿದ ಆಯವ್ಯಯ ಗಾತ್ರ 3,71,343 ಕೋಟಿ ರೂ.ಗಳು. ಇದರಲ್ಲಿ ರಾಜಸ್ವ ವೆಚ್ಚ 2 ಲಕ್ಷ 90 ಸಾವಿರ 531 ಕೋಟಿ ರೂ.ಗಳು, ಬಂಡವಾಳ ವೆಚ್ಚ 1 ಲಕ್ಷ 20 ಸಾವಿರ ಕೋಟಿ ರೂ. ಗಳಾಗಿದೆ. ನಮ್ಮ ಸರ್ಕಾರವು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ನೀಡಿದೆ.2024-25ನೇ ಸಾಲಿನಲ್ಲಿ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ನಮ್ಮ ಸರ್ಕಾರವು ಅಧಿಕಾರ ವಹಿಸಕೊಂಡ ತಕ್ಷಣವೇ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. ಈ ಪ್ರಸಕ್ತ ಆಯವ್ಯಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರದ 9 ಕೋಟಿ ರೂ.ಗಳನ್ನು ಇಟ್ಟಿದ್ದೇವೆ. ಉಳಿದ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಇಟ್ಟಿದ್ದೇವೆ. ಆದರೆ ವಿರೋಧ ಪಕ್ಷದವರು ಸರ್ಕಾರದ ಅಭಿವೃದ್ಧಿ ಶೂನ್ಯ ಎಂದು ಮಾಡಿರುವ ಆಪಾದನೆ ಸತ್ಯಕ್ಕೆ ದೂರವಾದುದು ಎಂದು ತಿಳಿಸಿದರು.

ಅವರು ಇಂದು ವಿಧಾನಸಭೆಯಲ್ಲಿ ಆಯವ್ಯಯ ಭಾಷಣ ಕುರಿತ ಚರ್ಚೆಗೆ ಉತ್ತರ ನೀಡಿದರು. ಹಿಂದಿನ ಸರ್ಕಾರವು 2023 ರ ಫೆಬ್ರುವರಿಯಲ್ಲಿ 3.09 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಿದರು. 2024-25ನೇ ಸಾಲಿಗೆ ನಾನು ಮಂಡಿಸಿದ ಆಯವ್ಯಯದ ಗಾತ್ರ 3,71,343 ಕೋಟಿ ರೂ. ನಷ್ಟಿದ್ದು, ಹಿಂದಿನ ಸರ್ಕಾರವು ಮಂಡಿಸಿದ ಬಜೆಟ್‍ಗಿಂತ 62,200 ಕೋಟಿ ರೂ. ನಷ್ಟು ಗಾತ್ರ ಹೆಚ್ಚಳವಾಗಿದೆ. ನಾನು ಜುಲೈ 2023 ರಲ್ಲಿ ಮಂಡಿಸಿದ ಬಜೆಟ್‍ಗಿಂತ ಇದು 43,601 ಕೋಟಿ ರೂ. ಹೆಚ್ಚಳವಾಗಿದೆ.

ಅಂತೆಯೇ ರಾಜ್ಯದ ಜಿಡಿಪಿ 25,63,247 ಕೋಟಿ ರೂ. ಇತ್ತು. 2024- 25 ಕ್ಕೆ 28,09,063 ಕೋಟಿ ರೂ. ಆಗುವ ನಿರೀಕ್ಷೆ ಇದೆ. ಅಂದರೆ 2,41,723 ಕೋಟಿ ರೂ. ಹೆಚ್ಚು. ಅಭಿವೃದ್ಧಿ ಇಲ್ಲದೆ ಆಯವ್ಯಯ ಗಾತ್ರ ಹಾಗೂ ಜಿಡಿಪಿ ಹೆಚ್ಚಳವಾಗಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು.

ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ 36,000 ಕೋಟಿ ರೂ. ವೆಚ್ಚ ಮಾಡಿದ್ದೇವೆ. ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ – ಈ ಕಾರ್ಯಕ್ರಮಗಳಿಗೆ 36,000 ಕೋಟಿ ರೂ. ಬಳಸಲಾಗಿದೆ. ಮುಂದಿನ ಬಜೆಟ್ ನಲ್ಲಿ 52,009 ಕೋಟಿ ಒದಗಿಸಿದ್ದು, ಇದರೊಂದಿಗೆ ಶಿಕ್ಷಣ, ಆರೋಗ್ಯ, ರಸ್ತೆಗಳು, ಶಾಂತಿ ಸುವ್ಯವಸ್ಥೆ ಎಲ್ಲದಕ್ಕೂ ಆದ್ಯತೆ ನೀಡಲಾಗಿದೆ.

ಹಿಂದಿನ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿರಲಿಲ್ಲ. ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನೂ ಮಾಡಿದ್ದೇವೆ. ಇದು ನಮ್ಮ ಸಕಾರಕ್ಕೂ ಮತ್ತು ಹಿಂದಿನ ಸರ್ಕಾರಕ್ಕೂ ಇರುವ ವ್ಯತ್ಯಾಸ.

ಯಾರೇ ಆಗಲಿ ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು. ಸಬ್ ಕಾ ‘ಸಾಥ್ ಸಬ್ ಕಾ ವಿಕಾಸ್’ ಎನ್ನುವುದು ಕೇವಲ ಬಾಯಿ ಮಾತು. ಇಂಥವರು ದೇಶವನ್ನು ಆಳಲು ಸಾಧ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಆರ್.ಎಸ್.ಎಸ್.ನವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದಾಗಲೂ ಸಂಘ ಪರಿವಾರದ ಹೆಡಗೇವಾರ್ ಆಗಲಿ, ಗೋಲ್ವಾಲ್ಕರ್ ಆಗಲಿ ಪಾಲ್ಗೊಂಡಿಲ್ಲ. ಭಾರತೀಯ ಜನತಾ ಪಕ್ಷದಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಭಾರತೀಯ ಜನತಾ ಪಕ್ಷದವರು. ಇದಕ್ಕೆ ಫಲವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ನೇರವಾಗಿ ತೆರಿಗೆಯನ್ನು ಉತ್ಪಾದನೆ ಮಾಡುವುದಿಲ್ಲ. ರಾಜ್ಯಗಳಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸುವ ಮೊತ್ತವೇ ಕೇಂದ್ರದ ಉತ್ಪಾದನೆ. ನಮ್ಮ ಕರ್ನಾಟಕ ಸರ್ಕಾರದಿಂದ ಈ ವರ್ಷ ನಲವತ್ತು ಲಕ್ಷ ಮೂವತ್ತು ಸಾವಿರಕ್ಕೂ ಹೆಚ್ಚು ತೆರಿಗೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದೇವೆ. ಆದರೆ ಕೇಂದ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಗಾಗಿ ನೀಡುವ ಅನುದಾನವೆಷ್ಟು? ಕೇವಲ ಐವತ್ತು ಸಾವಿರದ ಎರಡುನೂರ ಐವತ್ತ ಏಳು ಕೋಟಿ ಮಾತ್ರ. ಇದರಿಂದ ರಾಜ್ಯಕ್ಕೆ ತುಂಬಾ ಅನ್ಯಾಯವಾಗಿದೆ

ಕನ್ನಡಿಗರ ಹಿತ ಕಾಪಾಡುವುದು ರಕ್ಷಣೆ ಮಾಡುವುದು ನಮ್ಮ ಸರ್ಕಾರದ ಕರ್ತವ್ಯ. ರಾಜ್ಯಗಳು ಬಲಿಷ್ಠವಾದಲ್ಲಿ ಮಾತ್ರ ಕೇಂದ್ರ ಬಲಿಷ್ಠವಾಗಿರುತ್ತದೆ. ರಾಜ್ಯಗಳು ದುರ್ಬಲವಾದರೆ ಕೇಂದ್ರವು ದುರ್ಬಲವಾಗುತ್ತದೆ. ನಮಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ. ಸರಿಯಾದ ಪಾಲು ಸಿಗುತ್ತಿಲ್ಲ. ಹೆಚ್ಚು ತೆರಿಗೆ ಸಂಗ್ರಹ ಮಾಡುವ ರಾಜ್ಯ ನಮ್ಮ ಕರ್ನಾಟಕ. ಮೊದಲನೆಯ ರಾಜ್ಯ ಮಹರಾಷ್ಟ್ರ. ನಮ್ಮ ಕರ್ನಾಟಕ ರಾಜ್ಯ ಬಲಿಷ್ಠವಾಗಬೇಕು. ಆದ್ದರಿಂದ ನಮಗೆ ಸಿಗಬೇಕಾದ ತೆರಿಗೆ ಪಾಲು ಸಿಗಬೇಕು. ನಾವು 100 ರೂ ಕೊಟ್ಟರೆ ನಮಗೆ ಕೇವಲ 13 ರೂ ಮಾತ್ರ ಸಿಗುತ್ತಿದೆ. ಇದರಿಂದ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.

14 ನೇ ಹಣಕಾಸು ಆಯೋಗದಲ್ಲಿ 4.7 % ಹಾಗೂ 15 ನೇ ಹಣಕಾಸು ಆಯೋಗದಲ್ಲಿ 3.64 % ರಾಜ್ಯಕ್ಕೆ ಶೇ 1.07% ರಷ್ಟು ಕಡಿಮೆಯಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ 2 ನೇ ರಾಜ್ಯವಾಗಿರುವ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯವಾಗಿದೆ. ಕೇಂದ್ರದ ಅನ್ಯಾಯವನ್ನು ಬೆಂಬಲಿಸುವ ಪ್ರತಿ ಪಕ್ಷದವರಿಗೆ ಕನ್ನಡಿಗರ ಬಗ್ಗೆ ಕಾಳಜಿ ಇದೆಯೇ ಎಂದರು.

ನಾಡಿನ ಜನಕ್ಕೆ ಮಾಡಿರುವ ಅನ್ಯಾಯವನ್ನು ಸಮರ್ಥಿಸುವ ಪ್ರತಿ ಪಕ್ಷದವರು ಮೊದಲು ಕೇಂದ್ರದ ನಾಯಕರ ಮುಂದೆ ರಾಜ್ಯದ ಪರವಾಗಿ ಮಾತನಾಡುವ ತಾಕತ್ತಿಲ್ಲ. ದೇಶದಲ್ಲಿ ಸ್ವಂತ ತೆರಿಗೆ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನಮ್ಮ ಗ್ಯಾರಂಟಿಗಳನ್ನೇ ಕದ್ದಿರುವ ಪ್ರತಿ ಪಕ್ಷದವರು ಅವು ನಮ್ಮ ಗ್ಯಾರಂಟಿಗಳು ಎನ್ನುತ್ತಿದ್ದಾರೆ.

ರಾಜ್ಯದ ಸ್ವಂತ ತೆರಿಗೆ ಶೇ 78% ಇದ್ದರೆ 22% ಕೇಂದ್ರ ಸರ್ಕಾರದಿಂದ ಬರುತ್ತದೆ. ಅದೇ ಗುಜರಾತಿಗೆ 75% ಸ್ವಂತ ತೆರಿಗೆ ಯಿಂದ ಬಂದರೆ 17% ಕೇಂದ್ರದಿಂದ ಹಾಗೂ ಸಹಾಯಧನ ಸೇರಿ 25% ಕೇಂದ್ರದಿಂದ ಹೋಗುತ್ತಿದೆ. ಉತ್ತರ ಪ್ರದೇಶಕ್ಕೆ 48% ಸ್ವಂತ ತೆರಿಗೆ ಇದ್ದರೆ 32% ಹಾಗೂ 20% ಸೇರಿ ಒಟ್ಟು 52% ಕೇಂದ್ರದಿಂದ ಹೋಗುತ್ತಿದೆ. ಆದರೆ ನಮಗೆ ಮಾತ್ರ ಕೇವಲ ಕೇವಲ ಕೇವಲ ಶೇ22% ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಸ್ವಂತ ತೆರಿಗೆ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ, ಸೇತುವೆ, ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಕೇಂದ್ರದಿಂದ ಪಾಲು ಬರುತ್ತದೆ. ರೈಲ್ವೇಗೆ ಜಮೀನು ಕೊಟ್ಟು ಯೋಜನಾ ವೆಚ್ಚದಲ್ಲಿ ಶೇ 50 ರಷ್ಟು ರಾಜ್ಯ ಸರ್ಕಾರ ಭರಿಸುತ್ತದೆ. ರೈಲ್ವೆ ಇಂದ ಬಂದ ಆದಾಯವನ್ನು ಅವರೇ ಇಟ್ಟುಕೊಳ್ಳುತ್ತಾರೆ. ಟೋಲ್ ಸಂಗ್ರಹದಿಂದ ಬರುವ ಆದಾಯವನ್ನೂ ನಮ್ಮ ನಾಡಿನ ಜನರಿಗೆ ವಾಪಾಸ್ ಕೊಡುವುದಿಲ್ಲ ಎಂದು ರಾಜ್ಯಗಳಿಗೆ ತೆರಿಗೆಯಲ್ಲಿ ಆಗುತ್ತಿರುವ ಪಟ್ಟಿಯನ್ನೇ ನೀಡಿದರು.

ಕೇಂದ್ರ ಸರ್ಕಾರದ ಬಜೆಟ್ ಗಾತ್ರ 45 ಲಕ್ಷ ಕೋಟಿ ರೂ.ಗಳಿದ್ದರೂ ನಮಗೆ 50257 ಕೋಟಿ ರೂ.ಗಳನ್ನು ಮಾತ್ರ ಕೊಟ್ಟಿದ್ದಾರೆ. ಅದರಲ್ಲಿ 13 ಸಾವಿರ ಕೋಟಿ ಕೇಂದ್ರ ಪುರಸ್ಕøತ ಯೋಜನೆಗಳೂ ಸೇರಿವೆ. ಅದರಲ್ಲಿಯೂ ಕೇಂದ್ರದ ಪಾಲು ಕಡಿಮೆ ಇದ್ದು, ನಮ್ಮ ಪಾಲು ಹೆಚ್ಚಿದೆ ಎಂದರು.

2013 ಮಾರ್ಚ್ ವರೆಗೆ 2067 ಕಿಮೀ ರಸ್ತೆಗಳಾಗಿವೆ. ಬೇರೆ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚಾಗಿದ್ದು, ಇಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ. ಸರ್ವಶಿಕ್ಷಣ ಅಭಿಯಾನದಡಿ 702 ಕೋಟಿ ರೂ. ಕೇಂದ್ರ ಸರ್ಕಾರ ಕೊಟ್ಟರೆ ನಮ್ಮ ಪಾಲು 472 ಕೋಟಿ ರೂ. ಕರ್ನಾಟಕ ಸರ್ಕಾರ ಹೆಚ್ಚುವರಿಯಾಗಿ 1528 ಕೋಟಿ ರೂ.ಗಳನ್ನು ನೀಡಿದೆ. ಮಧ್ಯಾಹ್ನದ ಬಿಸಿಯೂಟದಡಿ 594 ಕೋಟಿ ಕೇಂದ್ರ ಕೊಟ್ಟರೆ ರಾಜ್ಯ ಸರ್ಕಾರ 346 ಕೋಟಿ ರೂ. ನೀಡಿ ಹೆಚ್ಚುವರಿಯಾಗಿ 967 ಕೋಟಿ ರೂ.ಗಳನ್ನು ನೀಡಿದೆ. ಆಯುμÁ್ಮ ನ್ ಭಾರತ್ ಯೋಜನೆಯಡಿ 187 ಕೋಟಿ ರೂ. ಗಳನ್ನು ಕೇಂದ್ರ ನೀಡಿದ್ದರೆ 124 ಕೋಟಿ ರೂ ಜೊತೆಗೆ 624 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಿದೆ ಎಂದು ತಿಳಿಸಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಕೇಂದ್ರ ಸರ್ಕಾರ 525 ಕೋಟಿ ರೂ. ನೀಡಿದರೆ, ರಾಜ್ಯ ಸರ್ಕಾರ 350 ಕೋಟಿ ನೀಡಿದೆ ಅದರ ಜೊತೆಗೆ 8569 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಕೊಟ್ಟಿದೆ. ಒಟ್ಟಾರೆಯಾಗಿ 13005 ಕೋಟಿ ರೂ.ಗಳು ಕೇಂದ್ರ ಪುರಸ್ಕøತ ಯೋಜನೆಗಳಿಗೆ ಬರುತ್ತದೆ ಅμÉ್ಟೀ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ಪಿ.ಎಂ ಕೃಷಿ ಸಿಂಚಯಿ ಯೋಜನೆಯಡಿ 57% ಕೇಂದ್ರ ಸರ್ಕಾರ ಹಾಗೂ 33% ರಾಜ್ಯ ಸರ್ಕಾರ ನೀಡುತ್ತದೆ ಅದರ ಜೊತೆ ಶೇ 35 ರಷ್ಟು ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರ ನೀಡುತ್ತದೆ. ಪಿ.ಎಂ ಆವಾಸ್ ಯೋಜನೆಯಡಿ 5-6 ಲಕ್ಷ ರೂ ರಾಜ್ಯ ಸರ್ಕಾರ ನೀಡಿದರೆ, ಕೇಂದ್ರ 1.50.ಲಕ್ಷ ರೂ. ನೀಡುತ್ತದೆ. ಅದರ ಜೊತೆಗೆ 1.38 ಲಕ್ಷ ಜಿ.ಎಸ್.ಟಿ ಸೇರಿ ಒಂದು ಮನೆಗೆ ಕೇಂದ್ರ ಸರ್ಕಾರ ನೀಡುವುದು ಕೇವಲ 12 ಸಾವಿರ ರೂ ಮಾತ್ರ ಎಂದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಮುಖ್ಯಮಂತ್ರಿಗಳು
15ನೇ ಹಣಕಾಸು ಆಯೋಗ ಬಂದಾಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನಾನು 14 ನೇ ಹಣಕಾಸು ಆಯೋಗದಲ್ಲಿ ಮುಖ್ಯಮಂತ್ರಿ ಆಗಿದ್ದೆ. ನಮಗೆ ಇμÉ್ಟೂಂದು ಅನ್ಯಾಯ ಆಗಲಿಲ್ಲ. ಪರಿಹಾರ ಜೂನ್ 2022 ಸ್ಥಗಿತಗೊಳಿಸಲಾಗಿದೆ. ಹಿಂದೆ ಹೆಚ್ಚುವರಿ ಅನುದಾನ ಕೊಟ್ಟಿದ್ದೇವೆಂದು ಈಬಾರಿ ಕಡಿತಗೊಳಿಸಿದ್ದಾರೆ. ಇμÉ್ಟಲ್ಲ ಅನ್ಯಾಯವಾಗುತ್ತಿದೆ ಎಂದರೂ ಅವರು ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತಿದ್ದಾರಲ್ಲಾ? ಎಂದರು.

ಮಾತೆತ್ತಿದರೆ ಜೈಶ್ರೀರಾಮ್ ಅನ್ನುತ್ತಾರೆ. ನಾವೇನು ರಾಮನ ಭಕ್ತರಲ್ಲವೆ. ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ? ಇವರು ರಾಮ – ಸೀತೆಯರನ್ನು ಬೇರೆ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಹೇಳಿದ ಸೀತಾರಾಮನಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ನಾವು ರಾಷ್ಟ್ರಭಕ್ತರು. ಈ ದೇಶದ ಜನರನ್ನು ಪ್ರೀತಿಸುವವರು. ಎಲ್ಲ ಧರ್ಮದ ಜನರನ್ನು ಪ್ರೀತಿಸುವವರು.

ಸಬ್ ಕಾ ಸಾಥ್ ಎಂದವರು ಪೆಟ್ರೋಲ್ ಡೀಸೆಲ್ ಬೆಲೆ, ಗ್ಯಾಸ್ ಬೆಲೆ, ಅಗತ್ಯವಸ್ತುಗಳ ಬೆಲೆ ಏರಿಸಿದರು. ಬಡವರಿಗೆ ನಿರುದ್ಯೋಗ, ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನಾವು ಗ್ಯಾರಂಟಿ ಯೋಜನೆಗಳ ಮೂಲಕ ನಾಲ್ಕರಿಂದ ಐದು ಸಾವಿರ ರೂ. ಕೊಡ್ತಾ ಇದ್ದೀವಿ. 1.2 ಕೋಟಿ ರೂ. ಕುಟುಂಬಗಳು ಅಂದರೆ ಸುಮಾರು 4.5 ಕೋಟಿ ಜನರಿಗೆ ಕೊಡ್ತಾ ಇದ್ದೀವಿ.

ಪ್ರತಿ ಪಕ್ಷದವರು ರಾಜ್ಯದ ಜನತೆಯ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ರಾಜ್ಯದಲ್ಲಿ ಬೀಕರ ಬರಗಾಲವಿರುವುದು ಸತ್ಯ. ಬರ ಅಧ್ಯಯನಕ್ಕಾಗಿ ಕೇಂದ್ರದಿಂದ ತಂಡಗಳನ್ನು ಸಹ ಕಳುಹಿಸಿದ್ದರು. ಬರ ವೀಕ್ಷಿಸಿದ ತಂಡಗಳು ತಮ್ಮ ವರದಿಗಳನ್ನು ಸಹ ನೀಡಿದ್ದಾರೆ. ರಾಜ್ಯದಲ್ಲಿನ 240 ತಾಲ್ಲೂಕುಗಳಲ್ಲಿ 220 ತಾಲೂಕುಗಳನ್ನು ಬರ ಪರಿಸ್ಥಿತಿಯಲ್ಲಿವೆ ಎಂದು ಘೋಷಿಸಲಾಗಿದೆ. ಅದರಲ್ಲಿ 196 ತಾಲ್ಲೂಕುಗಳು ತೀವ್ರ ಬರಗಾಲವನ್ನು ಎದುರಿಸುತ್ತಿದೆ. ನಲವತ್ತ ಎಂಟು ಲಕ್ಷಕ್ಕೂ ಹೆಚ್ಚು ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿ ಮೂವತ್ತ ಐದು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟವಾಗಿದೆ. ಕುಡಿಯಲು ನೀರಿಲ್ಲ, ದನಕರುಗಳಿಗೆ ಮೇವಿಲ್ಲ, ಪರಿಹಾರ ಕೋರಿ 2023, ಅಕ್ಟೋಬರ್ 20 ಹಾಗೂ 2023 ನವೆಂಬರ್ 16 ರಂದು ಎರಡು ಮನವಿಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದೇವೆ, ಮಾನ್ಯ ಪ್ರಧಾನಮಂತ್ರಿಗಳು, ಗೃಹ ಮಂತ್ರಿಗಳು, ಹಣಕಾಸು ಮಂತ್ರಿಗಳನ್ನು ಸಹ ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿಯನ್ನು ತಿಳಿಸಿದ್ದೇವೆ. ಆದರೆ ಇದುವರೆಗೂ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿಲ್ಲ. ನರೇಗಾ ಯೋಜನೆಯಡಿ 100 ದಿನಗಳ ಕೆಲಸವನ್ನು 150 ದಿನಗಳಿಗೆ ಹೆಚ್ಚಿಸುವಂತೆ ಮನವಿಯನ್ನು ಮಾಡಿದ್ದೇವೆ ಆದರೆ ಇದುವರೆಗೂ ಯಾವುದಕ್ಕೂ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಸ್ಪಂದಿಸಿಲ್ಲ ನಮ್ಮ ಸಂಸದರು ಈ ಬಗ್ಗೆ ಮೌನ ವಹಿಸಿದ್ದಾರೆ. ಕರ್ನಾಟಕದ ಜನ ಇವರನ್ನು ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕು.

ನಮ್ಮ ಸರ್ಕಾರದಿಂದ ಶಿಕ್ಷಣ, ಆರೋಗ್ಯ ಇಲಾಖೆ, ಕಾನೂನು ಸುವ್ಯವಸ್ಥೆ, ರಸ್ತೆಗಳಿಗೆ, ನೀರಾವರಿ, ಪಿಂಚಣಿ, ಗ್ರಾಮೀಣಾಭಿವೃದ್ಧಿ ಎಲ್ಲ ವಲಯಗಳಿಗೂ ಅನುದಾನ ಹೆಚ್ಚಾಗಿಯೇ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರದಿಂದ ಹಣ ಬರುತ್ತದೆ ಎಂದು ಪದೇ ಪದೇ ಹೇಳುತ್ತಾರೆ. ಈ ಹಣ ಯಾರಿಂದ ಬರುತ್ತದೆ? ನಮ್ಮ ತೆರಿಗೆಯಿಂದ. ಆದ್ದರಿಂದಲೇ ನಾವು ಹೇಳುವುದು ನಮ್ಮ ತೆರಿಗೆ ನಮ್ಮ ಹಕ್ಕು.

ಸೆಸ್, ಸರ್ಚಾರ್ಜ್ ನಲ್ಲಿ ನಮಗೆ ಪಾಲು ಕೊಡುವುದಿಲ್ಲ. ಸೆಸ್, ಸರ್ಚಾರ್ಜ್ ಮೂಲ 5,52,000 ಕೋಟಿ ರೂ. ಸಂಗ್ರಹವಾಗಿದೆ. ಸೆಸ್ ಸರ್ಚಾರ್ಜ್ 1958 ರಿಂದ ವಿಧಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರು ಹೇಳಿದ್ದಾರೆ. ಆದರೆ 1999 ರ ವರೆಗೆ ಸೆಸ್ ಸರ್ಚಾರ್ಜ್ ನಲ್ಲಿ ರಾಜ್ಯಕ್ಕೆ ಪಾಲು ದೊರೆಯುತ್ತಿದ್ದು. ತಿದ್ದುಪಡಿ ಮಾಡಿ ಇದನ್ನು ಸ್ಥಗಿತಗೊಳಿಸಲಾಯಿತು.

ಕನಿಷ್ಠ ತೆರಿಗೆಯ 50% ಆದರೂ ನಮಗೆ ಕೊಡಬೇಕು. 4.71% ರಿಂದ 3.64% ಗೆ ಕಡಿಮೆಯಾಗಿದೆ.. ಇದರ ಅರಿವಾಗಿಯೇ 15ನೇ ಹಣಕಾಸು ಆಯೋಗ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿದ್ದು. ನಾವು ಸಾಲ ಮಾಡಿರುವುದು ನಿಜ. ಆದರೆ ಅದು ಜಿ.ಎಸ್.ಡಿ.ಪಿ.ಯ ಶೇ. 23.68 ರಷ್ಟಿದೆ. ಅಂದರೆ ಶೇ. 25ರ ಒಳಗೇ ಇದೆ. ವಿತ್ತೀಯ ಕೊರತೆ 2.95% ಇದೆ. ರಾಜಸ್ವ ಉಳಿತಾಯ ಇಲ್ಲ, ನಿಜ. ಆದರೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 5.1% ರಷ್ಟಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಒಂದೇ ಒಂದು ಬಾರಿ 2020-21 ರಲ್ಲಿ ಶೇ 3 ರ ಮಿತಿ ದಾಟಿದೆ. ಇನ್ನು ಎರಡು ವರ್ಷದಲ್ಲಿ ಆಯವ್ಯಯವನ್ನು ರಾಜಸ್ವ ಉಳಿತಾಯಕ್ಕೆ ತಂದೇ ತರುವುದಾಗಿ ಸದನಕ್ಕೆ ಭರವಸೆ ನೀಡುತ್ತೇನೆ.
2018 ರಲ್ಲಿ ನನ್ನ ಅವಧಿಯ ಮುಕ್ತಾಯದ ವೇಳೆ 2.42 ಲಕ್ಷ ಕೋಟಿ ಸಾಲ ಇದ್ದು, 2023 ಮಾರ್ಚ್ ವೇಳೆಗೆ 5.23 ಲಕ್ಷ ಕೋಟಿ ಇದೆ. ಆದರೆ ಹಿಂದನಿ ಸರ್ಕಾರ ನಾಲ್ಕು ವರ್ಷದಲ್ಲಿ 2,81,00 ಕೋಟಿ ರೂ. ಮಾಡಿದ್ದಾರೆ. ಇದಲ್ಲದೇ ಜಿ.ಎಸ್.ಟಿ. ಪರಿಹಾರ ಸಾಲ 3,000 ಕೋಟಿ ರೂ. ಮಾಡಿದ್ದಾರೆ.

ಕೇಂದ್ರದಲ್ಲಿ 2013-14 ರಲ್ಲಿ 53,10,000 ಕೋಟಿ ಸಾಲ ಇತ್ತು. ಈಗ 183,67,132 ಕೋಟಿ ಸಾಲ ಇದೆ. ನರೇಂದ್ರ ಮೋದಿಯವರ ಅವಧಿಯಲ್ಲಿ 130 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ.. ದೇಶವನ್ನು ಸಾಲಗಾರರನ್ನಾಗಿ ಮಾಡಿದವರು ಯಾರು? ಎಂದು ಪ್ರಶ್ನೆ ಮಾಡಿದರು.

ನಾವು ಬಡವರಿಗೆ, ರೈತರಿಗೆ, ಹೆಣ್ಣುಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಭೌತಿಕ ಆರೋಗ್ಯ, ಆರ್ಥಿಕ ಆರೋಗ್ಯ, ಮಾನಸಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಆರೋಗ್ಯ – ಈ ನಾಲ್ಕು ಆಯಾಮಗಳಲ್ಲಿ ಕಾರ್ಯನಿರ್ವಹಿಸಲಿದ್ದೇವೆ ಎಂದು ತಿಳಿಸಿದರು.

Along with the guarantee schemes we have laid great emphasis on the development of the state Chief Minister Siddaramaiah's reply to the debate on budget estimates for 2024-25 ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ 2024-25ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ
Share. Facebook Twitter LinkedIn WhatsApp Email

Related Posts

BREAKING : ಮಹಿಳೆಯರ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಪೋಸ್ಟ್ : ಬೆಂಗಳೂರಲ್ಲಿ ಕಾಮುಕ ಅರೆಸ್ಟ್

11/05/2025 6:02 PM1 Min Read

BIG NEWS : ಕಾಶ್ಮೀರದ ಕೃಷಿ ವಿಜ್ಞಾನ ವಿವಿಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್

11/05/2025 3:35 PM1 Min Read

BREAKING : ರಾಮನಗರದಲ್ಲಿ ಭೀಕರ ಅಪಘಾತ : ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಸಾವು, ನಾಲ್ವರು ಗಂಭೀರ

11/05/2025 3:22 PM1 Min Read
Recent News

BREAKING : ಆಪರೇಷನ್ ಸಿಂಧೂರ್ ನಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ : ಭಾರತೀಯ ಸೇನೆ ಸ್ಪಷ್ಟನೆ

11/05/2025 7:30 PM

BREAKING : ಪಾಕಿಸ್ತಾನ ಕರೆ ಮಾಡಿ ಮನವಿ ಮಾಡಿದಕ್ಕೆ ‘ಕದನ ವಿರಾಮ’ ಘೋಷಣೆ : DGMO ರಾಜೀವ್ ಘಾಯ್ ಸ್ಪಷ್ಟನೆ

11/05/2025 7:25 PM

BREAKING : ಪಾಕಿಸ್ತಾನದ 35-40 ಸೈನಿಕರನ್ನು ಕೊಂದಿದ್ದೇವೆ : ಏರ್ ಮಾರ್ಷಲ್ ಅವಧೆಶ್ ಕುಮಾರ್ ಭಾರ್ತಿ ಹೇಳಿಕೆ

11/05/2025 7:08 PM

BREAKING : ‘ಆಪರೇಷನ್ ಸಿಂಧೂರ್’ ನಲ್ಲಿ ಉಗ್ರರ ನೆಲೆಗಳನ್ನು ನಾಶ ಮಾಡಿರೋ ಸಾಕ್ಷಿಗಳಿವೆ : ಫೋಟೋ ರಿಲೀಸ್ ಮಾಡಿದ ಸೇನೆ

11/05/2025 6:55 PM
State News
KARNATAKA

BREAKING : ಮಹಿಳೆಯರ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಪೋಸ್ಟ್ : ಬೆಂಗಳೂರಲ್ಲಿ ಕಾಮುಕ ಅರೆಸ್ಟ್

By kannadanewsnow0511/05/2025 6:02 PM KARNATAKA 1 Min Read

ಬೆಂಗಳೂರು : ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತು ಆಗ್ತಿದೆ. ಇದೀಗ ಮಹಿಳಾ ಸಹೋದ್ಯೋಗಿಗಳ ಭಾವಚಿತ್ರಗಳನ್ನು…

BIG NEWS : ಕಾಶ್ಮೀರದ ಕೃಷಿ ವಿಜ್ಞಾನ ವಿವಿಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್

11/05/2025 3:35 PM

BREAKING : ರಾಮನಗರದಲ್ಲಿ ಭೀಕರ ಅಪಘಾತ : ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಸಾವು, ನಾಲ್ವರು ಗಂಭೀರ

11/05/2025 3:22 PM

BREAKING : ಬಾಗಲಕೋಟೆಯಲ್ಲಿ ಭೀಕರ ಅಪಘಾತ : ಟಿಪ್ಪರ್ ಹರಿದು ಬೈಕ್ ಸವಾರ ದುರ್ಮರಣ

11/05/2025 2:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.