ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ಜನರಿಗೆ ವಿತರಣೆ ಮಾಡುವಂತ ಘೋಷಣೆ ಮಾಡಿತ್ತು. ಅದಕ್ಕೆ ಅಕ್ಕಿ ಕೊಡಿ ಅಂತ ಕೇಂದ್ರ ಸರ್ಕಾರವನ್ನು ಕೇಳಿತ್ತು. ಆದ್ರೇ ಅಕ್ಕಿ ಇಲ್ಲ ಎಂದ ಕೇಂದ್ರ ಸರ್ಕಾರ, ಈಗ ಭಾರತ್ ಬ್ರ್ಯಾಂಡ್ ಹೆಸರಲ್ಲಿ ಮಾರುತ್ತಿದೆ ಎಂಬುದಾಗಿ ಸಚಿವ ದಿನೇಶ್ ಗುಂಡೂರಾವ್ ವಾಗ್ಧಾಳಿ ನಡೆಸಿದ್ದಾರೆ.
ಈ ಕುರಿತಂತೆ ವಿಧಾನಸಭೆಯಲ್ಲಿ ಮಾತನಾಡಿದಂತ ಅವರು, ಅಕ್ಕಿಯನ್ನು ಕೇಂದ್ರ ಸರ್ಕಾರ 29ರೂಗೆ ಮಾರಾಟ ಮಾಡೋದಕ್ಕೆ ಇಟ್ಟಿದದಾರೆ. ಆದರೇ ಕೇಂದ್ರ ಸರ್ಕಾರ ಸ್ವಲ್ಪ ಬುದ್ಧಿವಂತಿಕೆಯಿಂದ ಯೋಚನೆ ಮಾಡಿದ್ದರೇ ನಾವೇ 34 ರೂಪಾಯಿಗೆ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದೆವು. ಈಗ ಮಾರಾಟ ಮಾಡುವುದಕ್ಕಿಂತ 5 ರೂ ಹೆಚ್ಚುಕೊಟ್ಟು ಖರೀದಿಗೆ ಪ್ರಸ್ತಾವನೆ ಕಳುಹಿಸಿದ್ದೆವು ಎಂದರು.
ನಮಗೆ ಅಕ್ಕಿ ಕೊಡುವುದಕ್ಕೆ ಕೇಂದ್ರ ಸರ್ಕಾರ ಮುಂದೆ ಬರಲಿಲ್ಲ. ಈಗ ಮಾರುಕಟ್ಟೆಯಲ್ಲಿ 29 ರೂ.ಗೆ ಅಕ್ಕಿಯನ್ನು ಭಾರತ್ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ಯಾವ ರೀತಿಯಾಗಿ ಯೋಜನೆ ಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದರು.
ಆಗ ನಾವು ಕೇಳಿದಾಗ ಕೊಡಲ್ಲ ಅಂದರು. ಈಗ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ನಮ್ಮ ಸರ್ಕಾರವೇ 34 ರೂ.ಗೆ ತೆಗೆದುಕೊಳ್ಳುತ್ತೇವೆ ಅಂತ ಹೇಳಿದೆವಲ್ಲ. ಯಾಕೆ ಕೊಡಲಿಲ್ಲ ಎಂಬುದಾಗಿ ಪ್ರಶ್ನಿಸಿದರು.
ನಮ್ಮ ರಾಜ್ಯದ ಜನರಿಗಾಗಿ 34 ರೂಪಾಯಿಗೆ ಅಕ್ಕಿ ಕೊಡಿ ಅಂತ ಕೇಳಿದಾಗ ಇಲ್ಲ ಎಂದ ಕೇಂದ್ರ ಸರ್ಕಾರ ಈಗ 29 ರೂಪಾಯಿಗೆ ಭಾರತ್ ಬ್ರ್ಯಾಂಡ್ ಅಕ್ಕಿ ಮಾರಾಟ ಮಾಡುತ್ತಿದೆ.
ದೇಶದಲ್ಲಿ ಬಿಜೆಪಿಯೇತರ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಯಾವ ರೀತಿ ದ್ವೇಷ ಸಾಧನೆ ಮಾಡುತ್ತಿದ್ದಾರೆ ಅನ್ನೋದು ಇದರಿಂದಲೇ ತಿಳಿಯುತ್ತದೆ. pic.twitter.com/lqakWXbw8O
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 15, 2024
‘ರಾಜ್ಯ ಸರ್ಕಾರ’ದಿಂದ ‘ಗ್ಯಾರಂಟಿ’ಗಳ ಹೆಸರಿನಲ್ಲಿ ‘ಲೂಟಿ ಜಾತ್ರೆ’ – ‘HDK’ ಕಿಡಿ