ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ, ಬುಧವಾರ ಸರ್ವಪಕ್ಷ ಸಭೆ ನಡೆಯಿತು. ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ಅದರ ಸನ್ನದ್ಧತೆಯ ಬಗ್ಗೆ ಸರ್ಕಾರ ಚರ್ಚಿಸಿತು. ಸಭೆಯಲ್ಲಿ, ಇರಾನ್ ಮತ್ತು ಅಮೆರಿಕ ನಡುವೆ ಮಧ್ಯಸ್ಥಿಕೆ ವಹಿಸುವ ಪಾಕಿಸ್ತಾನದ ಪ್ರಸ್ತಾಪವನ್ನ ಪ್ರತಿಪಕ್ಷಗಳು ಪ್ರಶ್ನಿಸಿದಾಗ, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ಭಾರತವು ಪಾಕಿಸ್ತಾನದಂತೆ “ದಲ್ಲಾಳಿ ರಾಷ್ಟ್ರ”ವಲ್ಲ ಎಂದು ಹೇಳಿದರು.
ಅಂದ್ಹಾಗೆ, ಪಾಕಿಸ್ತಾನವು ಇರಾನ್ ಮತ್ತು ಅಮೆರಿಕ ನಡುವೆ ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ಸಂಘರ್ಷವನ್ನು ಕೊನೆಗೊಳಿಸಲು ಅರ್ಥಪೂರ್ಣ ಮತ್ತು ನಿರ್ಣಾಯಕ ಮಾತುಕತೆಗಳನ್ನು ಆಯೋಜಿಸಲು ತಮ್ಮ ದೇಶ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ತಮ್ಮ ಪೋಸ್ಟ್’ನ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.
ವಿರೋಧ ಪಕ್ಷದ ಸಂಸದರಾದ ಧರ್ಮೇಂದ್ರ ಯಾದವ್ ಮತ್ತು ಮುಕುಲ್ ವಾಸ್ನಿಕ್ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರ, ಪಾಕಿಸ್ತಾನ 1981ರಿಂದ ಇದನ್ನು ಮಾಡುತ್ತಿದೆ ಮತ್ತು ಇದರಲ್ಲಿ ಹೊಸದೇನೂ ಇಲ್ಲ ಎಂದು ಹೇಳಿದೆ. ಸಭೆಯಲ್ಲಿ ಹಾಜರಿದ್ದ ಸದಸ್ಯರೊಬ್ಬರು, “ಭಾರತ ಪಾಕಿಸ್ತಾನದಂತೆ ಮಧ್ಯವರ್ತಿ ಮತ್ತು ದಲ್ಲಾಳಿ ರಾಷ್ಟ್ರವಾಗಿ ವರ್ತಿಸುವುದಿಲ್ಲ” ಎಂದು ಜೈಶಂಕರ್ ಹೇಳಿದ್ದಾರೆಂದು ವರದಿ ಮಾಡಿದ್ದಾರೆ.
BREAKING : ದೊಡ್ಡಣ್ಣನ ಆರ್ಡರ್’ಗೆ ಡೋಂಟ್ ಕೇರ್ ; ‘ಈ 5 ಷರತ್ತು ಒಪ್ಪಿದ್ರೆ ಮಾತ್ರ ಯುದ್ಧ ಅಂತ್ಯ’ ಎಂದ ಇರಾನ್!








