ಹರಿಹರ: ಪಂಚಮಸಾಲಿ ಗುರುಪೀಠದಿಂದ ತಮ್ಮನ್ನು ಉಚ್ಚಾಟನೆ ಮಾಡಿದ ಧರ್ಮದರ್ಶಿಗಳ ಮಂಡಳಿಯ ನಿರ್ಧಾರಕ್ಕೆ ವಚನಾನಂದ ಸ್ವಾಮೀಜಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಪಂಚಮಸಾಲಿ ಸಮಾಜ ಇಂದು ಪ್ರಬಲವಾಗುತ್ತಿದೆ ಮತ್ತು ಸಮುದಾಯದ ಸ್ವಾಮೀಜಿಗಳು ಗಟ್ಟಿಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ನಮ್ಮನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ಉಚ್ಚಾಟನೆಗೆ ಶ್ರೀಗಳ ಪ್ರತಿಕ್ರಿಯೆ:
-
ವ್ಯವಸ್ಥಿತ ಸಂಚು: “ಈ ಹಿಂದೆ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಸಿದ್ದಲಿಂಗ ಸ್ವಾಮೀಜಿ ಅವರನ್ನು ಟಾರ್ಗೆಟ್ ಮಾಡಲಾಗಿತ್ತು, ಈಗ ನನ್ನ ಸರದಿ. ಸಮಾಜದ ನಾಯಕರು ಮತ್ತು ಶ್ರೀಗಳು ಒಗ್ಗೂಡುತ್ತಿರುವುದು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ,” ಎಂದು ವಚನಾನಂದ ಶ್ರೀಗಳು ದೂರಿದ್ದಾರೆ.
-
ನೋಟಿಸ್ ನೀಡಿಲ್ಲ: ಉಚ್ಚಾಟನೆಗೆ ಮುನ್ನ ನಡೆದ ಸಭೆಯ ಕುರಿತು ತಮಗೆ ಯಾವುದೇ ಅಧಿಕೃತ ನೋಟಿಸ್ ನೀಡಿಲ್ಲ. ಪಂಚಮಸಾಲಿ ಮಠವು ಕೇವಲ 12 ಜನರ ಮಠವಲ್ಲ, ಇದು ಇಡೀ ಸಮಾಜಕ್ಕೆ ಸೇರಿದ್ದು ಎಂದು ಅವರು ಗುಡುಗಿದ್ದಾರೆ.
-
ವಿಚಾರಧಾರೆಗಳ ಸಂಘರ್ಷ: “ನಾನು ಹಿಂದೂಗಳು ಎಂದು ಹೇಳಬಾರದು ಎಂಬುದು ಕೆಲವರ ವಾದ. ಲಿಂಗಾಯತ ಹಿಂದೂ ಎನ್ನಬಾರದು ಎಂಬ ವಿರೋಧವೂ ಇತ್ತು. ಮಠದಲ್ಲಿ ಬಸವಣ್ಣನವರ ಭಾವಚಿತ್ರ ಹಾಕಲು ಕೂಡ ಬಿಡುತ್ತಿರಲಿಲ್ಲ,” ಎಂದು ಶ್ರೀಗಳು ಸಂಘರ್ಷದ ಕುರಿತು ಸ್ಫೋಟಕ ಮಾಹಿತಿ ನೀಡಿದ್ದಾರೆ.
ಹಣಕಾಸಿನ ಲೆಕ್ಕ ಕೇಳಿದ್ದಕ್ಕೆ ಸೇಡು?
“ಸರ್ಕಾರದಿಂದ ಬಂದ ಅನುದಾನದ ಲೆಕ್ಕವನ್ನು ನೀಡುವಂತೆ ಭಕ್ತರು ಕೇಳಿದ್ದರು. ಆ ಲೆಕ್ಕ ನೀಡುವ ಬದಲು, ತಮ್ಮ ಮೇಲೆ ಬಂದ ಆರೋಪಗಳಿಂದ ಪಾರಾಗಲು ಟ್ರಸ್ಟಿಗಳು ನನ್ನನ್ನು ಪೀಠದಿಂದ ಹೊರಹಾಕಿದ್ದಾರೆ,” ಎಂದು ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಸಮಾಜವೇ ನನ್ನ ಶ್ವಾಸ:
ತಮ್ಮ ಮುಂದಿನ ಹಾದಿಯ ಬಗ್ಗೆ ಮಾತನಾಡಿದ ಶ್ರೀಗಳು, “ಪಂಚಮಸಾಲಿ ಸಮಾಜವೇ ನನ್ನ ಶ್ವಾಸ. ಸಮಾಜದ ಜನತೆ ನೀಡುವ ನಿರ್ದೇಶನದಂತೆ ನಾನು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಈ ಉಚ್ಚಾಟನೆಯ ನಿರ್ಧಾರದಿಂದ ನನಗೇನು ಆತಂಕವಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ ಮತ್ತು ಹರಿಹರ ಭಾಗದ ಭಕ್ತರ ಮನೆಗೆ ನಾನು ಹೋಗದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗಿತ್ತು ಎಂಬ ನೋವನ್ನೂ ಇದೇ ವೇಳೆ ಸ್ವಾಮೀಜಿ ಹಂಚಿಕೊಂಡಿದ್ದಾರೆ.
ವಚನಾನಂದ ಶ್ರೀಗಳ ಈ ಹೇಳಿಕೆಯು ಪಂಚಮಸಾಲಿ ಸಮಾಜದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಪೀಠದ ಆಡಳಿತ ಮಂಡಳಿ ಮತ್ತು ಶ್ರೀಗಳ ನಡುವಿನ ಸಮರ ಈಗ ಬೀದಿಗೆ ಬಂದಂತಾಗಿದೆ.
ಅಕ್ಷಯ ತೃತೀಯ ದಿನದಂದು ಈ ಕುಬೇರನ ಗಂಟ್ಟು ಕಟ್ಟಿ ಯಾರಿಗೂ ತಿಳಿಯದಂತೆ ಇಡಿ, ನಿಮ್ಮ ಸಂಪತ್ತು ಸಂಮೃದ್ಧಿ








