ಬೆಂಗಳೂರು: ನಗರದಲ್ಲಿ ನೀರಿನ ಬಿಕ್ಕಟ್ಟು ಉಲ್ಬಣಗೊಂಡಿದೆ. ಹನಿ ನೀರಿಗೂ ಆಹಾಕಾರ ಎದ್ದಿರುವಂತ ಸಂದರ್ಭದಲ್ಲೇ ಪೊಲೀಸ್ ಠಾಣೆಗಳಿಗೂ ನೀರಿನ ಬಿಕ್ಕಟ್ಟಿನ ಎಫೆಕ್ಟ್ ತಟ್ಟಿದೆ. ಬೆಂಗಳೂರಿನ ಪೊಲೀಸ್ ಠಾಣೆಗಳಿಗೂ ನೀರು ಇಲ್ಲದೇ ಇಲಾಖೆಯ ಕಾರಿನಲ್ಲೇ ಕ್ಯಾನ್ ನೀರು ಸಾಗಿಸುತ್ತಿರೋದು ಕಂಡು ಬಂದಿದೆ.
ಬೆಂಗಳೂರಿನಲ್ಲಿ ಬೇಸಿಗೆಯ ಈ ಹೊತ್ತಿನಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಟ್ಯಾಂಕರ್ ನೀರಿನ ದರ ಕೂಡ ಹೆಚ್ಚಾಗಿದ್ದ ವೇಳೆಯಲ್ಲಿ ಅವುಗಳಿಗೆ ಮೂಗುದಾರ ಎನ್ನುವಂತೆ ರಾಜ್ಯ ಸರ್ಕಾರ ಟ್ಯಾಂಕರ್ ನೀರಿಗೆ ದರ ಫಿಕ್ಸ್ ಮಾಡಿತ್ತು.
ಬೆಂಗಳೂರಿನ ವಿವಿಧೆಡೆಯಲ್ಲಿ ನೀರಿನ ಆಹಾಕಾರ ದಿನೇ ದಿನೇ ಹೆಚ್ಚಾಗುತ್ತಿದೆ. ಇದೇ ಹೊತ್ತಿನಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್ ಆರ್ ನಗರದ ಪೊಲೀಸ್ ಠಾಣೆಯಲ್ಲೂ ನೀರಿನ ಬಿಕ್ಕಟ್ಟಿನ ಎಫೆಕ್ಟ್ ತಟ್ಟಿದೆ.
ಪೊಲೀಸರು ಇಲಾಖೆಯ ವಾಹನದಲ್ಲಿ ಕರ್ತವ್ಯದ ಜೊತೆಗೆ ನೀರಿನ ಕ್ಯಾನ್ ತುಂಬಿಕೊಂಡು ಪೊಲೀಸ್ ಠಾಣೆಗೆ ಸಾಗಿಸುತ್ತಿರೋದು ಕಂಡು ಬಂದಿದೆ.
ಕಳೆದೊಂದು ತಿಂಗಳಿನಿಂದ ನೀರಿನ ಸಮಸ್ಯೆ ಬೆಂಗಳೂರಲ್ಲಿ ತೀವ್ರಗೊಂಡಿದೆ. ವಿಜಯನಗರ ಹೊಸಹಳ್ಳಿಯಲ್ಲಿ ನೀರಿಲ್ಲದೇ ಜನರು ಪರದಾಡುವಂತೆ ಆಗಿದೆ. ಅಡುಗೆ ಮಾಡೋದಕ್ಕೆ ನೀರಿಲ್ಲದ ಕಾರಣ ಅನೇಕರು ಹೋಟೆಲ್ ನಿಂದ ತಿಂಡಿ, ಊಟ ಆರ್ಡರ್ ಮಾಡಿ ತಿನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ತಮಿಳುನಾಡಿನಲ್ಲಿ ‘ಪೌರತ್ವ ತಿದ್ದುಪಡಿ ಕಾಯ್ದೆ’ಯನ್ನು ಜಾರಿಗೆ ತರುವುದಿಲ್ಲ- ‘ಸಿಎಂ ಸ್ಟಾಲಿನ್’ ಘೋಷಣೆ
ʻಭಾರತೀಯ ಪೌರತ್ವʼಕ್ಕಾಗಿ ಅರ್ಜಿ ಸಲ್ಲಿಸಲು ಈ ವೆಬ್ ಸೈಟ್ ಗೆ ಭೇಟಿ ನೀಡಿ | Indian citizenship