ಶಿವಮೊಗ್ಗ : ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ವರಾಹಿ ಯೋಜನೆಯ ಮಾನಿ ಜಲಾಶಯದ ನೀರಿನ ಪ್ರಮಾಣ ಏರುತ್ತಿರುವ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಪ್ರವಾಹದ ಮುನ್ಸೂಚನೆ ನೀಡಿದೆ.
ಮಾನಿ ಜಲಾಶಯದ ಇಂದಿನ ಒಳಹರಿವು ಸುಮಾರು 3393 ಕ್ಯೂಸೆಕ್ ಆಗಿದ್ದು, ಇದೇ ರೀತಿ ಜಲಾಶಯಕ್ಕೆ ಒಳಹರಿವು ಮುಂದುವರಿದಲ್ಲಿ ಜಲಾಶಯವು ಗರಿಷ್ಟ ಮಟ್ಟವನ್ನು ತಲುಪುವ ಸಾಧ್ಯತೆ ಇದೆ.
ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ವರಾಹಿ/ಹಾಲಾಡಿ ನದಿ ಮತ್ತು ಮಾನಿ ಜಲಾಶಯದ ಗರಿಷ್ಟ ಮಟ್ಟವು 594.36 ಮೀಟರ್‌ಗೆ ಏರಿದ್ದು, ಜಲಾಶಯದ ಮಟ್ಟವು ಆಗಸ್ಟ್ 5 ರಂದು ಬೆಳಗ್ಗೆ 8 ಗಂಟೆಗೆ 588.15 (65.17%) ಮೀಟರ್‌ನಷ್ಟಿತ್ತು.
ಮಾನಿ ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ಹೆಚ್ಚಾದ ನೀರನ್ನು ಹೊರಬಿಡಲಾಗುತ್ತದೆ. ಆದ್ದರಿಂದ ವರಾಹಿ/ಹಾಲಾಡಿ ನದಿ ಮತ್ತು ಮಾನಿ ಜಲಾಶಯದ ಸುತ್ತಮತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವವರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಕೆಪಿಸಿಎಲ್ ಪ್ರಕಟಣೆ ಮುನ್ನೆಚ್ಚರಿಕೆ ನೀಡಿದೆ.
‘ಮರಾಠ ಸಮುದಾಯ’ದವರಿಗೆ ಗುಡ್ ನ್ಯೂಸ್: ವಿವಿಧ ಯೋಜನೆಯ ಸಾಲ ಸೌಲಭ್ಯ ಅರ್ಜಿ ಆಹ್ವಾನ
RBI ನಿಂದ ಮಹತ್ವದ ತೀರ್ಮಾನ: ಈಗ ನಿಮ್ಮ ಚೆಕ್ ಅನ್ನು ಶೀಘ್ರದಲ್ಲೇ ಬ್ಯಾಂಕಿನಿಂದ ಕ್ಲೀಯರ್…!