ಬೆಂಗಳೂರು:ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಈ ನೀರಿನ ಬಿಕ್ಕಟ್ಟು ಉಲ್ಬಣಗೊಳ್ಳುವ ನಿರೀಕ್ಷೆಯಿದೆ.
ಬೆಂಗಳೂರಿನ ಕೊಳವೆಬಾವಿಯಿಂದ ನೀರು ಪೂರೈಸುವ ಟ್ಯಾಂಕರ್ ಗಳು ಸರ್ಕಾರದ ಸುಪರ್ದಿಗೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿನ ನೀರಿನ ಬಿಕ್ಕಟ್ಟನ್ನು ಪರಿಹರಿಸಲು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಒಟ್ಟು 210 ಕೋಟಿ ರೂ.ಬಿಡುಗಡೆ ಮಾಡಿದೆ.
ಹಂಚಿಕೆಯಾದ ಒಟ್ಟು ಹಣದಲ್ಲಿ 70 ಕೋಟಿ ರೂ.ಗಳನ್ನು ರಾಜ್ಯದಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಯಲು ಖರ್ಚು ಮಾಡಲಾಗುವುದು. ಏತನ್ಮಧ್ಯೆ, ತೀವ್ರ ನೀರಿನ ಬಿಕ್ಕಟ್ಟಿನ ಸಂಭಾವ್ಯ ಬೆದರಿಕೆಯಲ್ಲಿರುವ 7000 ಕ್ಕೂ ಹೆಚ್ಚು ಗ್ರಾಮಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ.
ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಪುಟ ಸಚಿವರು ಮತ್ತು ಇತರ ಅಧಿಕಾರಿಗಳು ನೀರಿನ ಬಿಕ್ಕಟ್ಟಿನ ಬಗ್ಗೆ ಮಹತ್ವದ ಸಭೆ ನಡೆಸಿದರು. ಕಳೆದ ಕೆಲವು ತಿಂಗಳುಗಳಲ್ಲಿ, ರಾಜ್ಯದ ಅನೇಕ ಹಳ್ಳಿಗಳಲ್ಲಿ ನೀರಿನ ಮೂಲಗಳು ಕ್ಷೀಣಿಸಿವೆ ಎಂದು ವರದಿಯಾಗಿದೆ.
ಒಣಗಿದ ಕೊಳವೆಬಾವಿಗಳು:
ಅಂತರ್ಜಲ ಕುಸಿತದಿಂದಾಗಿ ಹಲವಾರು ಕೊಳವೆಬಾವಿಗಳಲ್ಲಿನ ನೀರು ನಿಧಾನವಾಗಿ ಒಣಗುತ್ತಿದೆ. ಈ ಪೈಕಿ 3,000 ಕೊಳವೆಬಾವಿಗಳು ಬೆಂಗಳೂರಿನಲ್ಲಿವೆ. ಕಂದಾಯ ಇಲಾಖೆಯ ವರದಿಯ ಪ್ರಕಾರ, ತುಮಕೂರು ಜಿಲ್ಲೆಯಲ್ಲಿ ಒಟ್ಟು 746 ಗ್ರಾಮಗಳು ದುರ್ಬಲವಾಗಿವೆ, ಇದು ರಾಜ್ಯದಲ್ಲೇ ಅತಿ ಹೆಚ್ಚು.